ಹಾಸನ : ಹೇಮಾವತಿ ನದಿ ಹಿನ್ನೀರಿನ ವ್ಯಾಪ್ತಿಯಲ್ಲಿ ವರುಣನ ಆರ್ಭಟ ಕಡಿಮೆಯಾಗುತ್ತಿದ್ದಂತೆಯೇ ಒಳಹರಿವಿನ ಪ್ರಮಾಣ ಕೂಡ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ.
ಪ್ರಕೃತಿ ಮುನಿಸಿನಿಂದ ಈ ಬಾರಿ ಜಲಾಶಯ ತುಂಬುತ್ತದೆಯೋ ಇಲ್ಲವೋ ಎಂಬ ಆತಂಕವಿತ್ತು ಆದರೆ ಕಳೆದ ಒಂದುವಾರದಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಹೇಮಾವತಿ ನದಿ ತುಂಬಿ ಹರಿದು ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಆ.9 ರಂದು 1,09000 ಕ್ಯೂಸೆಕ್‌ಗೆ ತಲುಪಿತ್ತು, ಆ.10ರಂದು ಕೂಡ 1.13 ಲಕ್ಷ ಕ್ಯೂಸೆಕ್‌ಗೆ ಏರಿಕೆಯಾಗಿತ್ತು. ಆ.12ರಿಂದ ಮಳೆ ಸ್ವಲ್ಪ ಬಿಡುವ ನೀಡಿದ ಪರಿಣಾಮ 56 ಸಾವಿರ ಕ್ಯೂಸೆಕ್‌ಗೆ ಇಳಿಕೆ ಕಂಡಿದ್ದು, ಆ.15ರ ವೇಳೆಗೆ ಒಳ ಹರಿವು 11,258 ಕ್ಯೂಸೆಕ್‌ಗೆ ತಲುಪಿದೆ .
ಮಳೆ ಪ್ರಮಾಣ ಕಡಿಮೆಯಾದಂತೆ ಒಳ ಹರಿವು ಕ್ಷೀಣಿಸಿದ್ದು, ಜಲಾಶಯದ ಕ್ರಸ್ಟ್‌ಗೇಟ್ ಮೂಲಕ ಹೊರ ಹರಿವನ್ನು ಸ್ಥಗಿತಗೊಳಿಸಿದೆ.