ETV Bharat / state

ಬಿಸಿಯೂಟ ನೌಕರರಿಂದ ಬೆಂಗಳೂರಲ್ಲಿ ಅನಿರ್ಧಿಷ್ಟಾವಧಿ ಹೋರಾಟ: ಎಂ.ಬಿ. ಪುಷ್ಪ

author img

By

Published : Dec 20, 2019, 10:54 PM IST

ಅಕ್ಷರ ದಾಸೋಹ ಯೋಜನೆ ಖಾಸಗೀಕರಣ ವಿರೋಧಿಸಿ ಮತ್ತು ಕನಿಷ್ಠ ವೇತನಕ್ಕೆ ಒತ್ತಾಯಿಸಿ ಡಿ. 26 ರ ಗುರುವಾರ ಬಿಸಿಯೂಟ ನೌಕರರಿಂದ ಬೆಂಗಳೂರಿನಲ್ಲಿ ಅನಿರ್ಧಿಷ್ಟವಧಿ ಹೋರಾಟ ಮಾಡಲು ನಿರ್ಧರಿಸಿರುವುದಾಗಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಎಂ.ಬಿ. ಪುಷ್ಪ ತಿಳಿಸಿದರು.

m-b-pushpa
ಎಂ.ಬಿ. ಪುಷ್ಪ

ಹಾಸನ: ಅಕ್ಷರ ದಾಸೋಹ ಯೋಜನೆ ಖಾಸಗೀಕರಣ ವಿರೋಧಿಸಿ ಮತ್ತು ಕನಿಷ್ಠ ವೇತನಕ್ಕೆ ಒತ್ತಾಯಿಸಿ ಡಿ. 26 ರ ಗುರುವಾರ ಬಿಸಿಯೂಟ ನೌಕರರಿಂದ ಬೆಂಗಳೂರಲ್ಲಿ ಅನಿರ್ಧಿಷ್ಟಾವಧಿ ಹೋರಾಟ ಮಾಡಲು ನಿರ್ಧರಿಸಿರುವುದಾಗಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಎಂ.ಬಿ. ಪುಷ್ಪ ತಿಳಿಸಿದರು.

2012 ಭಾರತೀಯ ಕಾರ್ಮಿಕ ಸಮ್ಮೇಳನ ತಮ್ಮನ್ನು ಕಾರ್ಮಿಕರೆಂದು ಪರಿಗಣಿಸಿ, ಕನಿಷ್ಠ ವೇತನ ನಿಗದಿ ಪಡಿಸಬೇಕೆಂದೂ ಹೇಳಿದೆ. 7 ನೇ ವೇತನ ಆಯೋಗ 18 ಸಾವಿರಕ್ಕಿಂತ ಕಡಿಮೆ ವೇತನಕ್ಕೆ ಯಾರನ್ನೂ ದುಡಿಸಬಾರದೆಂದು ಹೇಳಿದೆ. 1948 ಕನಿಷ್ಠ ವೇತನ ಕಾಯ್ದೆ ಕನಿಷ್ಠ ವೇತನಕ್ಕಿಂತ ಕಡಿಮೆ ಯಾರನ್ನು ದುಡಿಸಬಾರದೆಂದು ಹೇಳಿದೆ. ಕೇಂದ್ರ ಕಾರ್ಮಿಕ ಸಂಘಟನೆಗಳು 21 ಸಾವಿರ ಕನಿಷ್ಠ ವೇತನ ನೀಡಬೇಕೆಂದು ಹೇಳಿವೆ ಎಂದು ಸುದ್ದಿಗೋಷ್ಟಿಯಲ್ಲಿ ಅವರು ವಿವರಿಸಿದರು.

ಎಂ.ಬಿ. ಪುಷ್ಪ

ಕೇಂದ್ರ ಸರ್ಕಾರವು ಬಿಸಿಯೂಟ ನೌಕರರಿಗೆ 10 ವರ್ಷಗಳಿಂದಲೂ 10 ಪೈಸೆಯನ್ನೂ ಕೂಡಾ ಹೆಚ್ಚಳ ಮಾಡಿಲ್ಲ. ಬದಲಿಗೆ ಅನುದಾನವನ್ನು ಕಡಿತ ಮಾಡಿ ಈ ಯೋಜನೆಯನ್ನು ಕೇಂದ್ರೀಕೃತ ಅಡುಗೆ ಕೇಂದ್ರಗಳನ್ನಾಗಿ ಮಾಡಲು ಶಿಫಾರಸು ಮಾಡಿದೆ. ಈಗಾಗಲೇ ಮಂಡ್ಯ-ಮೈಸೂರು ಜಿಲ್ಲೆಯಲ್ಲಿ ಅಕ್ಷಯಪಾತ್ರೆ ಫೌಂಡೇಷನ್ ಸಂಸ್ಥೆಯಿಂದ ಬಿಸಿಯೂಟ ನೀಡಲು ಚಿಂತನೆ ನಡೆಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಈ ಯೋಜನೆ ಖಾಸಗಿ ಸಂಘ ಸಂಸ್ಥೆಗಳಿಗೆ ಕೊಡುವ ಬಗ್ಗೆ ಸರ್ಕಾರ ಬಹಳಷ್ಟು ಆಸಕ್ತಿ ತೋರಿಸುತ್ತಿದೆ ಎಂದರು.

ಅಲ್ಲದೇ, ಕಳೆದ 18-19 ವರ್ಷಗಳಿಂದ ನಿಸ್ವಾರ್ಥ ಸೇವೆಯನ್ನು ಮಾಡಿ ಯೋಜನೆಯನ್ನು ಯಶಸ್ವಿಯತ್ತ ನಡೆಸುತ್ತಿದ್ದರೂ ಕೂಡಾ, ಈ ರೀತಿಯ ಖಾಸಗೀಕರಣ ಕಡೆ ಗಮನ ಹರಿಸಿ ಮಹಿಳೆಯರನ್ನು ಬೀದಿ ಪಾಲು ಮಾಡಲು ಹೊರಟಿದೆ. ಇಂತಹ ಖಾಸಗೀಕರಣದ ವಿರುದ್ದ ನಮ್ಮ ಹೋರಾಟ ತೀವ್ರಗೊಳಿಸಬೇಕಿದೆ ಎಂದು ಎಂ ಬಿ ಪುಷ್ಪ ಕರೆ ನೀಡಿದರು.

Intro:ಹಾಸನ: ಅಕ್ಷರ ದಾಸೋಹ ಯೋಜನೆ ಖಾಸಗೀಕರಣ ವಿರೋಧಿಸಿ ಮತ್ತು ಕನಿಷ್ಟ ವೇತನಕ್ಕೆ ಒತ್ತಾಯಿಸಿ ಡಿ. ೨೬ ರ ಗುರುವಾರ ಬಿಸಿಯೂಟ ನೌಕರರಿಂದ ಬೆಂಗಳೂರಿನಲ್ಲಿ ಅನಿರ್ಧಿಷ್ಟವಧಿ ಹೋರಾಟ ಮಾಡಲು ನಿರ್ಧರಿಸಿರುವುದಾಗಿ ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ಅಧ್ಯಕ್ಷೆ ಎಂ.ಬಿ. ಪುಷ್ಪ ತಿಳಿಸಿದರು.
 ೨೦೧೨ ಭಾರತೀಯ ಕಾರ್ಮಿಕ ಸಮ್ಮೇಳನ ಇವರನ್ನು ಕಾರ್ಮಿಕರೆಂದು ಪರಿಗಣಿಸಿ, ಕನಿಷ್ಟ ವೇತನ ನಿಗದಿ ಪಡಿಸಬೇಕೆಂದೂ ಹೇಳಿದೆ. ೭ ನೇ ವೇತನ ಆಯೋಗ ೧೮ ಸಾವಿರಕ್ಕಿಂತ ಕಡಿಮೆ ಯಾರನ್ನು  ದುಡಿಸಬಾರದೆಂದು ಹೇಳಿದೆ. ೧೯೪೮ ಕನಿಷ್ಟ ವೇತನ ಕಾಯ್ದೆ ಕನಿಷ್ಟವೇತನಕ್ಕಿಂತ ಕಡಿಮೆ ಯಾರನ್ನು ದುಡಿಸಬಾರದೆಂದು ಹೇಳಿದೆ. ಕೇಂದ್ರ ಕಾರ್ಮಿಕ ಸಂಘಟನೆಗಳು ೨೧ ಸಾವಿರ ಕನಿಷ್ಟವೇತನ ನೀಡಬೇಕೆಂದು ಸುದ್ದಿಗೋಷ್ಠಿಯಲ್ಲಿ  ಒತ್ತಾಯಿಸಿದರು.
 ಕೇಂದ್ರ ಸರಕಾರವು ಬಿಸಿಯೂಟ ನೌಕರರಿಗೆ ೧೦ ವರ್ಷಗಳಿಂದಲೂ ೧೦ ಪೈಸೆಯನ್ನೂ ಕೂಡಾ ಹೆಚ್ಚಳ ಮಾಡಲಿಲ್ಲ. ಬದಲಿಗೆ ಅನುದಾನವನ್ನು ಕಡಿತ ಮಾಡಿ ಈ ಯೋಜನೆಯನ್ನು ಕೇಂದ್ರೀಕೃತ ಅಡುಗೆ ಕೇಂದ್ರಗಳನ್ನಾಗಿ ಮಾಡಲು ಶಿಫಾರಸ್ಸು ಮಾಡಿದೆ. ಈಗಾಗಲೇ ಮಂಡ್ಯ-ಮೈಸೂರು ಜಿಲ್ಲೆಯಲ್ಲಿ ಅಕ್ಷಯಪಾತ್ರೆ ಪೌಂಢೆಷನ್ ಸಂಸ್ಥೆಯಿಂದ ಬಿಸಿಯೂಟ ನೀಡಲು ಚಿಂತನೆ ನಡೆಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಈ ಯೋಜನೆ ಖಾಸಗಿ ಸಂಘ ಸಂಸ್ಥೆಗಳಿಗೆ ಕೋಡುವ ಬಗ್ಗೆ ಸರ್ಕಾರ ಬಹಳಷ್ಟು ಆಸಕ್ತಿ ತೋರಿಸುತ್ತಿದೆ. ಕಳೆದ ೧೮-೧೯ ವರ್ಷದ ನಿಸ್ವಾರ್ಥ ಸೇವೆಯನ್ನು ಮಾಡಿ ಯೋಜನೆಯನ್ನು ಯಶಸ್ವಿಯತ್ತ ನಡೆಸುತ್ತಿದ್ದರೂ ಕೂಡಾ ಈ ರೀತಿಯ ಖಾಸಗೀಕರಣ ಕಡೆ ಗಮನ ಹರಿಸಿ ಮಹಿಳೆಯರನ್ನು ಬೀದಿ ಪಾಲು ಮಾಡಲು ಹೊರಟಿದೆ. ಇಂತಹ ಖಾಸಗೀಕರಣದ ವಿರುದ್ದ ನಮ್ಮ ಹೋರಾಟ ತೀವ್ರಗೊಳಿಸಬೇಕಿದೆ ಎಂದರು.
    ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪೂರಕವಾಗಿ ಕಾಣಿಕೆ ನೀಡುತ್ತಿರುವ ಬಿಸಿಯೂಟ ಯೋಜನೆಯನ್ನು ಕೆಲ ಜಿಲ್ಲೆಗಳಲ್ಲಿ ಧರ್ಮಾಧಾರಿತ ಸಂಘ-ಸಂಸ್ಥೆಗಳಿಗೆ ನೀಡಿದೆ. ತಕ್ಷಣ ಇದನ್ನು ವಾಪಸ್ಸು ಪಡೆಯಬೇಕು. ಹಾಗೂ ಇನ್ನಿತರ ಬೇರೆ ಯಾವುದೇ ಹೆಸರಿನಲ್ಲಿ ಖಾಸಗಿಯವರಿಗೆ ನೀಡಬಾರದು. ಸರ್ಕಾರವೆ ಈ ಯೋಜನೆಯನ್ನು ಸಂಪೂರ್ಣವಾಗಿ ನಡೆಸಬೇಕು. ಬಿಸಿಯೂಟ ನೌಕರರಿಗೆ ಕನಿಷ್ಟ ವೇತನ ಹೆಚ್ಚಳ ಮಾಡಿ, ಬೆಳಿಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೩ ಗಂಟೆಯ ತನಕ ಶಾಲೆಯಲ್ಲಿ ದಿನಕ್ಕೆ ೬ ಗಂಟೆಗಿಂತಲೂ ಹೆಚ್ಚು ಕೆಲಸ ಮಾಡಿದರೂ ಆದೇಶದಲ್ಲಿ ಕೇವಲ ೪ ಗಂಟೆ ಎಂದು ನಮೂದಿಸಿರುವುದನ್ನು ೬ ಗಂಟೆ ಎಂದೂ ನಮೂದಿಸಬೇಕು. ಅಡುಗೆ ಕೆಲಸದೋಟ್ಟಿಗೆ ಶಾಲೆಗಳಲ್ಲಿ ’ಡಿ’ ಗ್ರೂಪ್ ನೌಕರರು ಇಲ್ಲದಿರುವುದರಿಂದ ಆ ಕೆಲಸಗಳಿಗೆ ಪರೋಕ್ಷವಾಗಿ ಈಗಾಗಲೇ ಅಡುಗೆಯವರಿಂದಲೇ ಮಾಡಿಸಲಾಗುತ್ತದೆ. ಆದ್ದರಿಂದ ’ಡಿ’ ಗ್ರೂಪ್ ಕೆಲಸಗಳನ್ನು ಅಧಿಕೃತವಾಗಿ ನಮಗೆ ಜವಾಬ್ದಾರಿ ವಹಿಸಬೇಕು ಎಂದರು.

ಬೈಟ್ : ಎಂ.ಬಿ. ಪುಷ್ಪ, ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ಅಧ್ಯಕ್ಷೆ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.

Body:0

Conclusion:0

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.