ಸಕಲೇಶಪುರ (ಹಾಸನ): ಕಾಡಾನೆ ದಾಳಿಯಿಂದ ಫೆ. 10ರ ಸಂಜೆ ಗಾಯಗೊಂಡಿದ್ದ ಕೂಲಿ ಕಾರ್ಮಿಕ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಬೆಳೆಹಾನಿ ಜೊತೆಗೆ ಮನುಷ್ಯರ ಪ್ರಾಣ ಹಾನಿ ಸಂಖ್ಯೆಯೂ ಹೆಚ್ಚಾಗತೊಡಗಿದೆ. ಬುಧವಾರ ಸಂಜೆ ಸಕಲೇಶಪುರ ತಾಲೂಕಿನ ಹಲಸುಲಿಗೆ ಸಮೀಪದ ಹಸಿಡೆ ಗ್ರಾಮದ ಹೆಚ್.ಎಂ.ಮಂಜುನಾಥ್ ಎಂಬುವರ ಕಾಫಿ ತೋಟದಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವಸಂತ (55) ಎಂಬುವರ ಮೇಲೆ ಒಂಟಿ ಸಲಗವೊಂದು ಏಕಾಏಕಿ ದಾಳಿ ಮಾಡಿತ್ತು.
ಗಾಯಗೊಂಡ ಕೂಲಿ ಕಾರ್ಮಿಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೆ ಕಾರ್ಮಿಕ ಮೃತಪಟ್ಟಿದ್ದಾನೆ.
ಓದಿ: ಸಂಚರಿಸುತ್ತಿದ್ದ ಟ್ರಕ್ಗೆ ಜೋತುಬಿದ್ದ ವಿದ್ಯಾರ್ಥಿಗಳು.. ಕಾರಣ ಗೊತ್ತೇ?
ಇನ್ನು ಈ ಘಟನೆಯನ್ನು ಕಾಫಿ ಬೆಳೆಗಾರರು ತೀವ್ರವಾಗಿ ಖಂಡಿಸಿದ್ದು, ಕಾಡಾನೆ ಹಾವಳಿ ತಪ್ಪಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.