ETV Bharat / state

ಹಾಸನದಲ್ಲಿ ಮಹಾನಾಯಕ ಫ್ಲೆಕ್ಸ್​ ಹರಿದು, ಮದ್ಯದ ಪಾರ್ಟಿ: ಅಧಿಕಾರಿಗಳ ಪರಿಶೀಲನೆ - ಹಾಸನ ಸುದ್ದಿ

ಹಾಸನ ತಾಲೂಕಿನ ರಾಯಪುರ ಗ್ರಾಮದಲ್ಲಿ ಅಳವಡಿಸಲಾಗಿದ್ದ ಮಹಾನಾಯಕ ಧಾರಾವಾಹಿಯ ಪ್ಲೆಕ್ಸ್ ಹರಿದು ಹಾಕಿರುವ ಹಿನ್ನೆಲೆ, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Damage to mahanayaka serial flex in hassan
ಮಹಾನಾಯಕ ಧಾರಾವಾಹಿ ಫ್ಲೆಕ್ಸ್​ಗೆ ಹಾನಿ : ಪರಿಶೀಲನೆ ನಡೆಸಿದ ಅಧಿಕಾರಿಗಳು
author img

By

Published : Sep 30, 2020, 6:57 PM IST

ಹಾಸನ: ತಾಲೂಕಿನ ರಾಯಪುರ ಗ್ರಾಮದಲ್ಲಿ ಅಳವಡಿಸಲಾಗಿದ್ದ ಮಹಾನಾಯಕ ಧಾರಾವಾಹಿಯ ಫ್ಲೆಕ್ಸ್ ಹರಿದು ಹಾಕಿರುವ ಹಿನ್ನೆಲೆ, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಹಾನಾಯಕ ಧಾರಾವಾಹಿ ಫ್ಲೆಕ್ಸ್​ಗೆ ಹಾನಿ : ಪರಿಶೀಲನೆ ನಡೆಸಿದ ಅಧಿಕಾರಿಗಳು

ತಾಲೂಕಿನ ಸಾಲಗಾಮೆ ಹೋಬಳಿಯ ರಾಯಪುರ ಗ್ರಾಮದ ಮುಂಭಾಗದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜೀವನಾಧಾರಿತ ಮಹಾನಾಯಕ ಧಾರಾವಾಹಿಯ ಫ್ಲೆಕ್ಸ್ ಅನ್ನು ಜೈ ಭೀಮ್ ಯುವಕರ ಸಂಘ ಮತ್ತು ಗ್ರಾಮಸ್ಥರು ಸೇರಿ ಅಳವಡಿಸಿದ್ದರು. ಆದರೆ, ಇದೇ ಗ್ರಾಮದ ಕೆಲ ಕಿಡಿಗೇಡಿಗಳು ಟ್ರ್ಯಾಕ್ಟರ್​ನಿಂದ ಫ್ಲೆಕ್ಸ್​​ ಕೆಡವಿದ್ದಲ್ಲದೇ, ಅದರ ಮೇಲೆ ಮದ್ಯ ಸುರಿದು ಪಾರ್ಟಿ ಮಾಡಿದ್ದಾರೆ. ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದಲಿತ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಪ್ರತಿಭಟನೆ ನಡೆಸಿದ್ದರು.

ಈ ಹಿನ್ನೆಲೆ ಸ್ಥಳಕ್ಕಾಮಿಸಿದ ಡಿವೈಎಸ್ಪಿ ಪುಟ್ಟಸ್ವಾಮಿಗೌಡ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸತೀಶ್, ಸಾಲಗಾಮೆಯ ಉಪ ತಹಶೀಲ್ದಾರ್ ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಭರವಸೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.