ETV Bharat / state

ಹೊಟ್ಟೆ ನೋವಿಗೆ ಔಷಧಿ ಇದೆ, ಹೊಟ್ಟೆ ಕಿಚ್ಚಿಗೆ ಔಷಧಿ ಇಲ್ಲ: ಸಿ.ಟಿ.ರವಿ ವಾಗ್ದಾಳಿ - Southern Graduate Election

ಅಕ್ಬರ್ ದಿ ಗ್ರೇಟ್ ಅಂತ ಎಪ್ಪತ್ತು ವರ್ಷ ಕಲಿಸಿದ್ರು. ಅದೇ ನಮ್ಮ ದೇಶವನ್ನು ಕಾಯ್ದ ಮಯೂರ ವರ್ಮಾ ದಿ ಗ್ರೇಟ್, ಇಮ್ಮಡಿ ಪುಲಿಕೇಶಿ ದಿ ಗ್ರೇಟ್ ಅಂತ ಹೇಳಿ ಕೊಟ್ರಾ ?. ನಮ್ಮವರ ಬಗ್ಗೆ ಅಭಿಮಾನ ಪಡುವ ಸಂಗತಿಗಳನ್ನು ಅವರು ಹೇಳಿಕೊಡಲಿಲ್ಲ, ಅವರು ಮಾಡಿದ್ದೇಲ್ಲಾ ಸರಿ?, ನಾವು ಮಾಡೋದು ಮಾತ್ರ ತಪ್ಪಾ?. ಅವರು ಮಾಡಿದ ತಪ್ಪುಗಳನ್ನು ಸರಿಪಡಿಸುವ ಕಾಲ ಬಂದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

ಸಿ.ಟಿ.ರವಿ
ಸಿ.ಟಿ.ರವಿ
author img

By

Published : Jun 2, 2022, 2:12 PM IST

ಹಾಸನ : ಪಠ್ಯ-ಪುಸ್ತಕದಲ್ಲಿ ಇದುವರೆಗೂ ನಮ್ಮವರ ಬಗ್ಗೆ ಅಭಿಮಾನ ಪಡುವ ಸಂಗತಿಗಳನ್ನು ಅವರು ಹೇಳಿಕೊಡಲಿಲ್ಲ. ನಮ್ಮ ದೇಶದ ಮೇಲೆ ಆಕ್ರಮಣ ಮಾಡಿದವರು ಗ್ರೇಟ್ ಅಂತ ಮಕ್ಕಳಿಗೆ ಹೇಳಿಕೊಡಲು ಸಾಧ್ಯವೇ?, ಈಗ ಸರಿಪಡಿಸುವ ಕಾಲ ಬಂದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ದಕ್ಷಿಣ ಪದವೀಧರ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಮೈವಿವಿ ರವಿಶಂಕರ್ ಪರ ಮತಯಾಚನೆ ಮಾಡಲು ಹಾಸನಕ್ಕೆ ಭೇಟಿ ನೀಡಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೊಟ್ಟೆ ನೋವು ಬಂದರೆ ಅದಕ್ಕೆ ಔಷಧಿ ಇದೆ. ಆದರೆ, ಹೊಟ್ಟೆ ಕಿಚ್ಚಿಗೆ ಔಷಧಿ ಇಲ್ಲ. ಇದು ಟೂಲ್ ಕಿಟ್ ರಾಜಕಾರಣ. ಹಾಗಾಗಿ, ನಮ್ಮ ಹತ್ತಿರ ಔಷಧಿ ಇಲ್ಲ ಎಂದು ಪ್ರತಿಪಕ್ಷಗಳಿಗೆ ಟಾಂಗ್ ನೀಡಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಟಿ.ರವಿ

ಪ್ರತಿಪಕ್ಷಗಳು ಮಾಡಿದ್ದೆಲ್ಲಾ ಸರಿನಾ?, ಅಕ್ಬರ್ ದಿ ಗ್ರೇಟ್ ಅಂತ 70 ವರ್ಷ ಕಲಿಸಿದ್ರು. ಅದೇ ನಮ್ಮ ದೇಶವನ್ನು ಕಾಯ್ದ ಮಯೂರ ವರ್ಮಾ ದಿ ಗ್ರೇಟ್, ಇಮ್ಮಡಿ ಪುಲಿಕೇಶಿ ದಿ ಗ್ರೇಟ್, ರಾಜ ರಾಜಾಧಿ ಗ್ರೇಟ್ ಅಂತ ಹೇಳಿ ಕೊಟ್ರಾ ?. ನಮ್ಮವರ ಬಗ್ಗೆ ಅಭಿಮಾನ ಪಡುವ ಸಂಗತಿಗಳನ್ನು ಅವರು ಹೇಳಿಕೊಡಲಿಲ್ಲ, ಅವರು ಮಾಡಿದ್ದೆಲ್ಲಾ ಸರಿ?, ನಾವು ಮಾಡೋದು ಮಾತ್ರ ತಪ್ಪಾ?. ಅವರು ಮಾಡಿದ ತಪ್ಪುಗಳನ್ನು ಸರಿಪಡಿಸುವ ಕಾಲ ಬಂದಿದೆ. ಹಾಗಾಗಿ, ಅಭಿಮಾನ ಮೂಡಿಸುವಂತಹ ಕೆಲಸ ಪಠ್ಯ- ಪುಸ್ತಕದಲ್ಲಿ ಆಗುತ್ತಿದೆ. ಅದಕ್ಕೆ ವಿವಾದ ರೂಪ ಕೊಡುವಂತಹ ಕೆಲಸ ನಡೆಯುತ್ತಿದೆ. ಇದು ಹೊಸದೇನಲ್ಲ, ಮೋದಿ ಪ್ರಧಾನ ಮಂತ್ರಿಯಾದಾಗಿನಿಂದಲೂ ಈ ತರ ಟೂಲ್ ಕಿಟ್ ರಾಜಕಾರಣ ಮಾಡುತ್ತಾ ಬಂದಿದ್ದು, ಇದು ಹೊಸದೇನೆಲ್ಲ. ಟೂಲ್ ಕಿಟ್ ರಾಜಕಾರಣವನ್ನು ನಾವೆಲ್ಲರೂ ನೋಡಿದ್ದೇವೆ. ನಾವು ಅದನ್ನು ಎದುರಿಸುತ್ತೇವೆ ಎಂದು ಸವಾಲು ಹಾಕಿದರು.

ದಲಿತ ವಿರೋಧಿ, ಅಂಬೇಡ್ಕರ್ ವಿರೋಧಿ ಅನ್ನೋದು ಹಳೇ ಕಾಯಿಲೆ. ಈ ರೀತಿ ಆರೋಪವನ್ನು ಷಡ್ಯಂತ್ರದ ಮೂಲಕ ಮಾಡಿದ್ದಾರೆ. ಹಿಂದೆ ಇದೇ ಮಹಾನುಭಾವರು ಪ್ರಶಸ್ತಿ ವಾಪಸ್ ಮಾಡ್ತಿವಿ ಅಂತ ಹೇಳಿದ್ರು. ಬಹಳ ಜನ ಬರೀ ಹೇಳಿಕೆ ಕೊಟ್ಟರು. ಪ್ರಶಸ್ತಿ ವಾಪಸ್ ಕೊಡಲಿಲ್ಲ. ಪ್ರಶಸ್ತಿಗೆ ಕೊಟ್ಟ ಕ್ಯಾಶ್ ಬಗ್ಗೆ ಚಕಾರನೇ ಎತ್ತಲಿಲ್ಲ. ಆ ರೀತಿ ಬಹಳ ಜನ ಮಾಡಿದ್ದಾರೆ. ಇದೇನ್ ಹೊಸದಾ, ಕೆಲವರು ತಪ್ಪು ಕಲ್ಪನೆಯಿಂದ, ಕೆಲವರು ದುರುದ್ದೇಶದಿಂದ ಮಾಡ್ತಿದ್ದಾರೆ ಎಂದು ಹೇಳಿದರು.

ತಪ್ಪು ಕಲ್ಪನೆಯಿಂದ ಯಾರೂ ಪಠ್ಯ ವಾಪಸ್ ತೆಗೆದುಕೊಳ್ಳಿ ಅಂತ ಹೇಳ್ತಾರೋ ಅವರಿಗೆ ಮನವಿ ಮಾಡಿಕೊಡ್ತಿವಿ. ಮನವರಿಕೆ ಮಾಡಿ ಕೊಟ್ಟಾಗ, ಸತ್ಯದ ಅರಿವಾದಾಗ ನಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ಯಾರು ದುರುದ್ದೇಶದಿಂದ ಮಾಡ್ತಿದ್ದಾರೆ ಅವರನ್ನು ಎದುರಿಸುತ್ತೀವಿ. ಅವರು ಕೊಡುವ ಸಲಹೆಯನ್ನ ಒಪ್ಪಿಕೊಳ್ಳುವುದು ಬಿಡೋದು ಸರ್ಕಾರ ತೀರ್ಮಾನ ಮಾಡುತ್ತದೆ. ಕೊಟ್ಟ ಸಲಹೆಗಳನ್ನು ಒಪ್ಪಿಕೊಳ್ಳಬೇಕು ಅಂತ ಏನಿಲ್ಲ. ರೋಹಿತ್ ಚಕ್ರತೀರ್ಥನನ್ನು ಏಕೆ ವಿರೋಧ ಮಾಡಬೇಕು. ರೋಹಿತ್ ಚಕ್ರತೀರ್ಥಗೆ ಏನ್ ಕ್ರಿಮಿನಲ್ ಅಥವಾ ನಕ್ಸಲರ ಜೊತೆ ಸಂಬಂಧವಿದೆಯೇ? ಬಹಳ ಜನ ನಕ್ಸಲರ ಜೊತೆ ಸಂಬಂಧ ಇಟ್ಟುಕೊಂಡು ಅವರ ಬಗ್ಗೆ ಸಿಂಪಥಿಯಿಂದ ಮಾತಾಡ್ತಿರೋರೆಲ್ಲಾ ಇವತ್ತು ಹೇಳಿಕೆ ಕೊಡ್ತಿದ್ದಾರೆ. ಅವರು ಬುದ್ಧಿವಂತರೇ, ಆಳವಾಗಿ ಇತಿಹಾಸ, ಕನ್ನಡದ ಭಾಷೆಯ ಬಗ್ಗೆ ಅಧ್ಯಯನ ಮಾಡಿದಂತವರು ಎಂದರು.

ರಾಜ್ಯಸಭೆಗೆ ಬಿಜೆಪಿಯಿಂದ ಮೂರನೇ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಇಬ್ಬರು ಅಧಿಕೃತ ಅಭ್ಯರ್ಥಿ ಗೆದ್ದ ನಂತರವೂ ನಮ್ಮ ಬಳಿ 32 ಮತಗಳು ಉಳಿಯುತ್ತದೆ. ಕಾಂಗ್ರೆಸ್​ನಲ್ಲಿ 19 ರಿಂದ 20 ಮತಗಳು ಉಳಿದಿದೆ. ಜನತಾದಳದಿಂದ ಎಲ್ಲರೂ ವೋಟ್ ಹಾಕಿದ್ರೆ 32 ವೋಟ್ ಉಳಿಯುತ್ತದೆ. ರಾಜಕಾರಣದಲ್ಲಿ ಆ ರೀತಿ ಆಗುವುದಿಲ್ಲ. ಕೆಲವೊಮ್ಮೆ ಅಧಿಕೃತ ಅಭ್ಯರ್ಥಿಗಳು ಸೋತಿರೋದು, ಬಂಡಾಯ ಅಭ್ಯರ್ಥಿಗಳು ಗೆದ್ದಿರೋದು ಎಲ್ಲಾ ನೋಡಿದ್ದೇವೆ. ರಣತಂತ್ರ ಹೇಳಲು ಆಗುವುದಿಲ್ಲ. ನನಗೆ ವಿಶ್ವಾಸವಿದೆ ಮೂರನೇ ಅಭ್ಯರ್ಥಿಯು ಗೆಲ್ಲುತ್ತಾರೆ. ನಮ್ಮ ಪಕ್ಷದ ಮೂರು ಅಭ್ಯರ್ಥಿಗಳು ಗೆಲ್ಲುತ್ತಾರೆ. ಹೇಗೆ ಏನು ಅಂತ ಕೇಳಬೇಡಿ ಎಂದು ತಿಳಿಸಿದರು.

ಫಲಿತಾಂಶ ಬಂದ ನಂತರ ಗೊತ್ತಾಗಲೇಬೇಕು. ಮತದಾನದ ನಂತರ ಯಾರು ಉದ್ದ, ಯಾರು ಅಡ್ಡ ಮತ ಹಾಕಿದ್ದಾರೆ ಅಂತ ತಿಳಿಯುತ್ತದೆ. ಯಾರು ಅಡ್ಡ ಮತ ಹಾಕಿದ್ದಾರೆ, ಯಾರು ಯಾರಿಗೆ ನಾಮ ಹಾಕಿದ್ದಾರೆ ಎಲ್ಲವೂ ಗೊತ್ತಾಗುತ್ತೆ. ಅಲ್ಲಿಯವರೆಗೆ ಕಾಯಬೇಕು. ಹಿಂದಿನ ರಾಜಕಾರಣದ ಅನುಭವ ನೋಡಬಹುದು. ಬಹಳ ಜನ ಕ್ರಾಸ್ ವೋಟ್ ಮಾಡಿ ಮತ ಹಾಕಿದ್ದಾರೆ ಎಂದರು.

ಜೆಡಿಎಸ್​ವರು ಬೆಂಬಲ ಕೇಳಿದ್ದಾರಾ? ಎಂಬ ಪ್ರಶ್ನೆಗೆ ಸಿ.ಟಿ.ರವಿ ಪ್ರತಿಕ್ರಿಯಿಸಿ, ಆ ಸಂದರ್ಭ ಬಂದಾಗ ವಿಚಾರ ಮಾಡ್ತೇವೆ. ಇದುವರೆಗೂ ನಮ್ಮ ಹತ್ತಿರ ಅವರು ಬೆಂಬಲ ಕೇಳಿರುವುದಿಲ್ಲ. ಅಷ್ಟಕ್ಕೂ ಅವರಿಗೆ ನಾವು ಕೋಮುವಾದಿಗಳು. ಅವರ ದೃಷ್ಟಿಯಲ್ಲಿ ನಾವು ಸೆಕ್ಯೂಲರ್ ಅಲ್ವ ಎಂದು ಟಾಂಗ್ ನೀಡಿದರು.

ಇದನ್ನೂ ಓದಿ: ಹಿಜಾಬ್ ವಿವಾದ.. 16 ವಿದ್ಯಾರ್ಥಿನಿಯರಿಗೆ ಕಾಲೇಜ್​​ ಪ್ರವೇಶ ನಿರಾಕರಣೆ, 6 ವಿದ್ಯಾರ್ಥಿನಿಯರು ಡಿಬಾರ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.