ಹಾಸನ: ಹೋಂ ಕ್ವಾರಂಟೈನ್ನಲ್ಲಿರಬೇಕಾಗಿದ್ದ ಮಹಿಳೆಯೊಬ್ಬರು ರಸ್ತೆಗೆ ಬಂದು ಆತಂಕ ಮೂಡಿಸಿದ ಘಟನೆ ಜಿಲ್ಲೆಯ ಹೊಳೆನರಸೀಪುರ ರಸ್ತೆಯ ಹೊಸಕೊಪ್ಪಲು ಬಳಿ ನಡೆದಿದೆ.
ಹೋಂ ಕ್ವಾರಂಟೇನ್‌ನಲ್ಲಿರಬೇಕಾದ ಮಹಿಳೆಯನ್ನು ರಸ್ತೆಯಲ್ಲಿ ಕಂಡು ಜನ ಗಾಬರಿಗೊಂಡಿದ್ದಾರೆ. ಮಹಿಳೆ ಕೈ ಮೇಲಿನ ಸ್ಟ್ಯಾಂಪಿಂಗ್ ಕಂಡು ಮಹಿಳೆಯನ್ನ ತಡೆದು ನಿಲ್ಲಿಸಿದ್ದಾರೆ. ಬಳಿಕ ಕೊರೊನಾ ನಿಗ್ರಹ ಪಡೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಆ್ಯಂಬುಲೆನ್ಸ್ ಮೂಲಕ ಮಹಿಳೆಯನ್ನ ಅಧಿಕಾರಿಗಳು ಕರೆದೊಯ್ದಿದ್ದಾರೆ.