ಹಾಸನ: ಮಂಡ್ಯದ ನಾಗಮಂಗಲ ತಾಲೂಕಿನ ಡಿ. ಸಾತೇನಹಳ್ಳಿ ಗ್ರಾಮದ ಸೋಂಕಿತನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 8 ಜನರ ವರದಿ ನೆಗೆಟಿವ್ ಬಂದಿದ್ದು, ಹಾಸನ ಜಿಲ್ಲಾಡಳಿತ ಹಾಗೂ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಹಸಿರು ವಲಯವಾಗಿರುವ ಜಿಲ್ಲೆಗೂ ಕೊರೊನಾ ವಕ್ಕರಿಸಿತಾ ಎಂಬ ಆತಂಕ ಎಲ್ಲೆಡೆ ಮನೆ ಮಾಡಿತ್ತು. ಇನ್ನು ಸೋಂಕಿತನ ಜೊತೆ ನೇರ ಸಂಪರ್ಕ ಹೊಂದಿದ್ದ 8 ಜನ ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದ 30 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರೆಲ್ಲರ ವರದಿ ನೆಗೆಟಿವ್ ಬಂದಿದ್ದು, ಜಿಲ್ಲೆಯ ಜನತೆಗೆ ಸಂತಸ ಉಂಟಾಗಿದೆ.
ನಿನ್ನೆಯಿಂದ ತೀವ್ರ ಆತಂಕ ಸೃಷ್ಟಿಸಿದ್ದ ನಾಗಮಂಗಲದ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಕೇಳಿ ವೈದ್ಯಕೀಯ ವರದಿಯಿಂದ ಅಧಿಕಾರಿಗಳು ಕೊಂಚ ನಿರಾಳವಾಗಿದ್ದಾರೆ. ಮಂಡ್ಯದ ನಾಗಮಂಗಲದ ವ್ಯಕ್ತಿಯ ಟ್ರಾವೆಲ್ ಇತಿಹಾಸ ಹುಡುಕಿದ್ದಾಗ ಇಷ್ಟು ಜನ ಕಂಡು ಬಂದಿದ್ದರು. ಇನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದು , ಜಿಲ್ಲೆಯ ಗಡಿ ಭಾಗವನ್ನು ಸಂಪೂರ್ಣ ಬಂದ್ ಮಾಡಬೇಕು ಎಂದು ಡಿಸಿ ಆದೇಶ ಹೊರಡಿಸಿದ್ದಾರೆ.