ಹಾಸನ: ಜನಸಂದಣಿ ತಡೆಯಲು ನಗರದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ತರಕಾರಿ ವ್ಯಾಪಾರವನ್ನು ಹೊಸ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ ಹಾಗೂ ಜಿಲ್ಲಾ ಕ್ರೀಡಾಂಗಣಕ್ಕೆ ಶಿಫ್ಟ್ ಮಾಡಲಾಗಿತ್ತು. ಮಂಗಳವಾರ ಮೊದಲ ದಿನ ಭರ್ಜರಿ ತರಕಾರಿ ವ್ಯಾಪಾರ ನಡೆಯಿತು. ಆದರೆ ಗುರುವಾರ ವ್ಯಾಪಾರವಿಲ್ಲದೇ ವ್ಯಾಪಾರಸ್ಥರು ವಾಪಸ್ ಮನೆಗೆ ತೆರಳಬೇಕಾಯಿತು.
ವಾರದಲ್ಲಿ 4 ದಿನ ಹಾಸನ ನಗರದ ಮೂರು ಭಾಗಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ತರಕಾರಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಜೊತೆಗೆ ನೋಡಿಕೊಳ್ಳಲು ಪೊಲೀಸರು ಮತ್ತು ನಗರಸಭೆ ಸಿಬ್ಬಂದಿ ಕಾಯುತ್ತಿದ್ದರು.
ಬೆಳಗ್ಗೆ 7 ಗಂಟೆಯಿಂದ 12 ಗಂಟೆಯವರೆಗೂ ತರಕಾರಿ ವ್ಯಾಪಾರ ಮಾಡಲು ಅವಕಾಶ ನೀಡಲಾಗಿದ್ದರೂ 11 ಗಂಟೆಗೆ ತೆರವು ಮಾಡಲು ಸೂಚಿಸಿದ್ದರಿಂದ ತರಕಾರಿ ವ್ಯಾಪಾರಸ್ಥರು ಕೂಡ ನಿರಾಸೆಯಲ್ಲಿ ವಾಪಸ್ ಹೋದರು.