ETV Bharat / state

ಬೇಲೂರು ಚೆನ್ನಕೇಶವನ ರಥೋತ್ಸವಕ್ಕೂ ತಟ್ಟುತ್ತಾ ಕೊರೊನಾ ಬಿಸಿ​​​​?

ಇತಿಹಾಸ ಪ್ರಸಿದ್ಧ ಬೇಲೂರು ಚೆನ್ನಕೇಶವನ ಜಾತ್ರೆ, ರಥೋತ್ಸವ ಇದೇ ತಿಂಗಳ 28ರಂದು ನಿಗದಿಯಾಗಿದ್ದು, ಈ ಧಾರ್ಮಿಕ ಕಾರ್ಯಕ್ಕೂ ಕೊರೊನಾ ಅಡ್ಡಿಯಾಗಲಿದೆಯಾ ಎಂಬ ಆತಂಕ ಭಕ್ತರನ್ನು ಕಾಡುತ್ತಿದೆ.

corona  Disruption
ಬೇಲೂರು ಚನ್ನಕೇಶವ ರಥೋತ್ಸವಕ್ಕೆ ಕೊರೊನಾ ಅಡ್ಡಿ
author img

By

Published : Mar 17, 2020, 11:16 PM IST

ಹಾಸನ: ಕೊರೊನಾ ಭೀತಿ ರಾಜ್ಯಾದ್ಯಂತ ದೇವಾಲಯಗಳಿಗೂ ತಟ್ಟುತ್ತಿದೆ. ಇಂದು ಹಾಸನ ಜಿಲ್ಲೆಯ ವಿಶ್ವವಿಖ್ಯಾತ ಬೇಲೂರು, ಹಳೇಬೀಡು, ಶ್ರವಣಬೆಳಗೊಳಕ್ಕೆ ಬರೋ ಪ್ರವಾಸಿಗರಿಗೆ ದೇವಾಲಯಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಈ ಆದೇಶವನ್ನು ಮಾ. 31ರವರೆಗೂ ಮುಂದುವರೆಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇತಿಹಾಸ ಪ್ರಸಿದ್ಧ ಬೇಲೂರು ಚೆನ್ನಕೇಶವನ ಜಾತ್ರೆ, ರಥೋತ್ಸವ ಇದೇ ತಿಂಗಳ 28ರಂದು ನಿಗದಿಯಾಗಿದ್ದು, ಈ ಧಾರ್ಮಿಕ ಕಾರ್ಯಕ್ಕೂ ಕೊರೊನಾ ಅಡ್ಡಿಯಾಗಲಿದೆಯಾ ಎಂಬ ಆತಂಕ ಭಕ್ತರನ್ನು ಕಾಡುತ್ತಿದೆ.

ಆರ್. ಗಿರೀಶ್ ಜಿಲ್ಲಾಧಿಕಾರಿ
ರಾಜ್ಯದ ಪ್ರಮುಖ ರಥೋತ್ಸವಗಳಲ್ಲಿ ಚೆನ್ನಕೇಶವನ ರಥೋತ್ಸವ ಕೂಡ ಒಂದು. ಸಾವಿರಾರು ಭಕ್ತರು ಈ ರಥೋತ್ಸವದಲ್ಲಿ ಒಟ್ಟಿಗೆ ಪಾಲ್ಗೊಳ್ಳಲಿದ್ದಾರೆ. ಈಗಿನ ಮಟ್ಟಿಗೆ ಕೊರೊನಾ ನಿಯಂತ್ರಣದಲ್ಲಿದ್ದು, ಇದೇ ಪರಿಸ್ಥಿತಿ ಇದ್ದರೆ ಜಾತ್ರೆಗೆ ಯಾವುದೇ ಅಡ್ಡಿ ಆತಂಕಗಳಿಲ್ಲ. ಮುಂದಿನ ದಿನಗಳಲ್ಲಿ ಕೊರೊನಾ ಉಲ್ಬಣಗೊಂಡರೆ ಜಿಲ್ಲಾಡಳಿತ ನಿರ್ಬಂಧ ಹೇರುವ ಸಾಧ್ಯತೆಗಳು ಹೆಚ್ಚಿವೆ. ಪ್ರತಿ ವರ್ಷವೂ ಸುಮಾರು 20ಕ್ಕೂ ಹೆಚ್ಚು ದಿನ ಕಾರ್ಯಕ್ರಮಗಳು ನಡೆಯಲಿದ್ದು, ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಿಘ್ನ ಎದುರಾಗುವ ಸಾಧ್ಯತೆಗಳಿವೆಯಾ ಎಂಬ ಪ್ರಶ್ನೆ ಎದುರಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.