ETV Bharat / state

ಹಾಸನದಲ್ಲಿ ಐಐಟಿ ನಿರ್ಮಾಣ: ಮಾಜಿ ಮಂತ್ರಿ ರೇವಣ್ಣಗೆ ಶಾಸಕ ಪ್ರೀತಂ ತಿರುಗೇಟು

author img

By

Published : Jan 19, 2023, 2:41 PM IST

Updated : Jan 19, 2023, 3:05 PM IST

ಐಐಟಿ ನಿರ್ಮಾಣ ಮಾಡುವ ಕುರಿತು ಹೆಚ್.ಡಿ.ರೇವಣ್ಣ ನ ಹೇಳಿಕೆಗೆ ಹಾಸನ ಕ್ಷೇತ್ರದ ಶಾಸಕ ಪ್ರೀತಂಗೌಡ ವಿರೋಧ ವ್ಯಕ್ತಪಡಿಸಿದ್ದಾರೆ.

Former Minister Revanna, MLA Pritam
ಹೆಚ್.ಡಿ.ರೇವಣ್ಣ ಹಾಗು ಶಾಸಕ ಪ್ರೀತಂಗೌಡ

ಐಐಟಿ ನಿರ್ಮಾಣ ಕುರಿತು ರೇವಣ್ಣ ಹಾಗು ಶಾಸಕ ಪ್ರೀತಂರ ವಾದ ಪ್ರತಿವಾದ

ಹಾಸನ: ಹಾಸನಕ್ಕೆ ಐಐಟಿ ತರುವುದು ಮಾಜಿ ಪ್ರಧಾನಿ ದೇವೇಗೌಡರ ಹಲವಾರು ವರ್ಷದ ಕನಸು. ಹಾಗಾಗಿ 20ವರ್ಷಗಳ ಹಿಂದೆಯ ಐಐಟಿಗೆ ಜಾಗವನ್ನು ಮೀಸಲಿಡಲಾಗಿದ್ದು, ಅದನ್ನು ಈಗ ಖಾಸಗಿಯವರಿಗೆ ಪರಭಾರೆ ಮಾಡಲು ಸರ್ಕಾರ ಮುಂದಾಗುತ್ತಿದೆ. ಹೀಗೆನಾದರೂ ಆದರೇ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹೆಚ್.ಡಿ.ರೇವಣ್ಣ ಹೇಳಿದರು. ಸಂಸದರ ನಿವಾಸದಲ್ಲಿ ಮಾತನಾಡಿದ ಅವರು, ಈ ಜಾಗವನ್ನು ಏನಾದರೂ ಬೇರೆ ಉದ್ದೇಶಕ್ಕೆ ಜಾಗವನ್ನು ಕೊಟ್ಟರೇ ಹೆಚ್.ಡಿ. ದೇವೇಗೌಡರ ನೇತೃತ್ವದಲ್ಲಿ ವಿಧಾನಸೌಧದ ಬಳಿ ಗಾಂಧಿ ಪ್ರತಿಮೆ ಮುಂದೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಕೇಂದ್ರ ಮಾನವ ಸಂಪನ್ಮೂಲ ಸಚಿವರನ್ನೂ ಹೆಚ್.ಡಿ. ದೇವೇಗೌಡರು ಈ ಹಿಂದೆಯೇ ಭೇಟಿ ಮಾಡಿದರು. ಅಂದು ಜವರೇಗೌಡರು ಐಐಟಿ ಮಾಡು ಎಂದು ನನಗೆ ಹೇಳಿದರು. ಇದರಿಂದ ದೇವೇಗೌಡರನ್ನು ನಾನೇ ಕರೆದುಕೊಂಡು ಅರ್ಜುನ್ ಸಿಂಗ್​​​​ರ ಬಳಿ ಹೋಗಿದ್ದೆವು. ಅವತ್ತು ಹೆಚ್.ಡಿ. ಕುಮಾರಸ್ವಾಮಿ ಬಿಜೆಪಿ ಜೊತೆ ಹೋದರು ಎನ್ನುವ ಒಂದೇ ಕಾರಣಕ್ಕೆ ಐಐಟಿಯನ್ನು ರಾಜಸ್ಥಾನಕ್ಕೆ ನೀಡಲಾಯಿತು. ಈ ರಾಜ್ಯದಲ್ಲಿ ಯಾರೂ ಕೂಡ ಐಐಟಿ ಕೇಳಿರಲಿಲ್ಲ. ಈಗಾಗಲೇ ಐಐಟಿಗಾಗಿ ಹಾಸನದಲ್ಲಿ 1ಸಾವಿರ ಎಕರೆ ಜಾಗ ಮೀಸಲಿಡಲಾಗಿದೆ ಎಂದರು.

ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಬಂದಾಗ ಮನಮೋಹನ್ ಸಿಂಗ್ ರ ಬಳಿ ಪ್ರಯತ್ನ ಪಟ್ಟಿದ್ದೆವು. ಸ್ಮೃತಿ ಇರಾನಿ ಕರ್ನಾಟಕಕ್ಕೆ ಐಐಟಿ ಕೊಡಲು ಒಪ್ಪಿಗೆ ನೀಡಿದ್ದರು. ಅಂದಿನ ರಾಜ್ಯ ಕಾಂಗ್ರೆಸ್ ಪಕ್ಷದವರು ಹಾಸನ ಬಿಟ್ಟು ಬೇರೆ ಹೆಸರು ಸೂಚಿಸಿದರು. ಕೆಲ ದಿನಗಳ ಹಿಂದೆ ದೇವೇಗೌಡರು ರಾಜ್ಯಸಭೆ ಭಾಷಣದಲ್ಲಿ ಐಐಟಿ ಬಗ್ಗೆ ಚರ್ಚೆ ಮಾಡಿದ್ದು, ಈ ಬಗ್ಗೆ ಮೋದಿ ಅವರು ಪರಿಶೀಲನೆ ನಡೆಸಿದ್ದಾರೆ. ದೇವೇಗೌಡರ ಬಳಿ ಐಐಟಿ ವಿಚಾರವಾಗಿ ಪ್ರಸ್ಥಾಪ ಮಾಡಿದ್ದಾರೆ. ಐಐಟಿಗಾಗಿ ಮೀಸಲಿರುವ ಜಾಗವನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಬೇರೆ ಉದ್ದೇಶಕ್ಕೆ ಬಳಸಲು ಪ್ಲಾನ್ ಮಾಡಿದ್ದಾರೆ.

ಐಐಟಿ ಜಾಗ ವರ್ಗಾವಣೆ ಮಾಡಿದರೆ ಉಗ್ರ ಹೋರಾಟ: ಈ ವಿಚಾರವಾಗಿ ದೇವೇಗೌಡರು ಈ ಬಗ್ಗೆ ಮುಖ್ಯಮಂತ್ರಿ, ಸಚಿವರಿಗೆ ಪತ್ರ ಬರೆದಿದ್ದಾರೆ ಎಂದರು. ಐಐಟಿ ಜಾಗವನ್ನು ಬೇರೆ ಉದ್ದೇಶಕ್ಕೆ ಬಳಸುವುದಿಲ್ಲ ಎಂದು ಸಚಿವರು ಭರವಸೆ ನೀಡಿದ್ದಾರೆ. ಇದರಲ್ಲಿ ನನ್ನ ವೈಯಕ್ತಿಕ ಉದ್ದೇಶ ಏನಿಲ್ಲ. ಜಿಲ್ಲೆಯ, ರಾಜ್ಯದ ಯುವಕರಿಗೆ ಅನುಕೂಲ ಆಗುತ್ತದೆ ಎಂಬ ಉದ್ದೇಶ ನನ್ನದು. ಇದನ್ನು ಮೀರಿ ಬೇರೆ ಉದ್ದೇಶಕ್ಕೆ ಜಾಗ ಏನಾದರು ಬಳಸಿದರೆ ನಾವು ಹೆಚ್.ಡಿ. ದೇವೇಗೌಡರ ನೇತೃತ್ವದಲ್ಲಿ ವಿಧಾನಸೌಧದ ಬಳಿ ಗಾಂಧಿ ಪ್ರತಿಮೆ ಮುಂದೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಭೂಮಿ ಬೇಕಾದರೆ ಅವರ ಕ್ಷೇತ್ರದಲ್ಲಿ ಮಾಡ್ಕೊಳ್ಳಿ: ಇನ್ನು ಹಾಸನದಲ್ಲಿ ಐಐಟಿ ನಿರ್ಮಾಣಕ್ಕೆ 260 ಎಕರೆ ಭೂಮಿ ಸಾಕು. 1057 ಎಕರೆ ಜಾಗ ಬೇಕಾದರೆ ಹೊಳೆನರಸೀಪುರ ಕ್ಷೇತ್ರದಲ್ಲಿ ಮಾಡಿಕೊಳ್ಳಲಿ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣನವರ ಈ ಹೇಳಿಕೆಗಳಿಗೆ ಹಾಸನ ಕ್ಷೇತ್ರದ ಶಾಸಕ ಪ್ರೀತಂಗೌಡ ತಿರುಗೇಟು ನೀಡಿದರು. ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಪ್ರೀತಂಗೌಡ, ಬೆಲೆ ಬಾಳುವ ರೈತರ ಭೂಮಿಯನ್ನು ಲಕ್ಷ ರೂ.ಗಳ ಪರಿಹಾರ ನೀಡಿ ಕಿತ್ತು ಕೊಳ್ಳಲಾಗುತ್ತಿದೆ. ರೈತರು ಶ್ರೀಮಂತರಾಗುವುದನ್ನು ದೇವೇಗೌಡರ ಕುಟುಂಬ ಸಹಿಸುವುದಿಲ್ಲ. ಬೇರೆಯವರ ಜಾಗಕ್ಕೆ ಬಂದು ಬಂಗಲೆ ಕಟ್ಟುತ್ತೇನೆ ಎಂದರೆ ಆಗುವುದಿಲ್ಲ.

ಸಾವಿರ ಎಕರೆಯಲ್ಲಿ ಐಐಟಿ ಸ್ಥಾನಪನೆಯಾಗಬೇಕು ಎಂದರೆ ಹೊಳೆನರಸೀಪುರದಲ್ಲಿ ಮಾಡಿಕೊಳ್ಳಲಿ. ಐಐಟಿ ಸ್ಥಾಪನೆಗಾಗಿ ಸ್ವಾಧೀನ ಪಡಿಸಿಕೊಂಡಿರುವ ಜಾಗವನ್ನು ಬೇರೆ ಉದ್ದೇಶಕ್ಕೆ ಬಳಸದೆ ಮೀಸಲಿಡಬೇಕೆಂದು ಮಾಜಿ ಸಚಿವರು ಹೇಳಿದ್ದಾರೆ. ಅದರಂತೆ ಐಐಟಿಗೆ ಬೇಕಿರುವ 260ಎಕರೆ ಜಾಗವನ್ನು ಹಾಸನ ಕ್ಷೇತ್ರದಲ್ಲಿ ಮೀಸಲಿಡಲಾಗುವುದು. ಸಾವಿರ ಎಕರೆ ವಿಸ್ತೀರ್ಣದಲ್ಲಿ ಸ್ಥಾಪನೆ ಯಾಗಬೇಕೆಂದರೆ ಹೊಳೆನರಸೀಪುರ ಕ್ಷೇತ್ರದಲ್ಲಿ ಮಾಡಿಕೊಳ್ಳಲಿ ಎಂದರು.

ರಾಜ್ಯಕ್ಕೆ ಈಗಾಗಲೇ ಒಂದು ಐಐಟಿ ನೀಡಲಾಗಿದೆ. ಹಾಸನಕ್ಕೆ ಮತ್ತೊಂದು ಐಐಟಿ ನೀಡುವುದು ಕಷ್ಟವಿದೆ. ಆದ್ದರಿಂದ ನಗರದಲ್ಲಿ ಕೆಎಐಡಿಬಿ ವತಿಯಿಂದ ಭೂಸ್ವಾಧೀನ ಪಡಿಸಿಕೊಂಡಿರುವ 1057 ಎಕರೆ ಜಮೀನಿನಲ್ಲಿ 260 ಎಕರೆ ಐಐಟಿ ಸ್ಥಾಪನೆಗೆ ಮೀಸಲಿಟ್ಟು, ಉಳಿದ ಜಾಗವನ್ನು ಕೈಗಾರಿಕಾ ವಲಯ, ವಸತಿ ಯೋಜನೆಗೆ ಬಳಸಿಕೊಳ್ಳಲಾಗುವುದು. ರೈತರಿಗೆ ಉತ್ತಮ ಪರಿಹಾರವನ್ನು ನೀಡಲಾಗುತ್ತದೆ.

ಆದರೆ, ಕೈಗಾರಿಕಾ ಅಭಿವೃದ್ಧಿ ಜಿಲ್ಲೆಯಲ್ಲಿ ಸ್ಥಾಪನೆಯಾದರೆ ಜಿಲ್ಲೆಯ ಐಐಟಿ ಮಕ್ಕಳಿಗೆ, ಇಲ್ಲಿನ ಪ್ರೊಫೆಸರ್ ಗಳಿಗೇನು ವಿಶೇಷ ಅವಕಾಶ ಸಿಗುವುದಿಲ್ಲ. ಒಂದಿಷ್ಟು ಜನರಿಗೆ ಸೆಕ್ಯೂರಿಟಿ ಗಾರ್ಡ್ ಕೆಲಸ ಸಿಗಬಹುದಷ್ಟೇ. ಅದೇ ಕೈಗಾರಿಕೆಗಳು ಸ್ಥಾಪನೆಯಾದರೆ ಜಿಲ್ಲೆಯ 10 ಸಾವಿರ ಯುವಕರಿಗೆ ಉದ್ಯೋಗ ಸಿಗುತ್ತದೆ ಎಂದರು.

ಇದನ್ನೂ ಓದಿ:'ಕಲ್ಯಾಣ ಕರ್ನಾಟಕದಲ್ಲಿ ಹೊಸ ಮೃಗಾಲಯ ತೆರೆಯಲು ಚಿಂತನೆ'

Last Updated : Jan 19, 2023, 3:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.