ETV Bharat / state

ಬಿಎಸ್​ವೈ ಕೊಟ್ಟ ಮಾತು ಮುರಿಯದ ಸಿಎಂ; ಸಚಿವ ಸ್ಥಾನಕ್ಕೆ ಗ್ಯಾರಂಟಿ ನೀಡಿದ ಗೋಪಾಲಯ್ಯ - Chief Minister BSY lagtest news

ಕೊಟ್ಟ ಮಾತಿನಂತೆ ನಡೆದುಕೊಳ್ಳುವವರು ರಾಜಕಾರಣದಲ್ಲಿ ಯಾರಾದರೂ ಇದ್ದರೆ ಅದು ಯಡಿಯೂರಪ್ಪನವರು ಮಾತ್ರ. ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಪಕ್ಷ. ಹಾಗಾಗಿ ಒಮ್ಮೆ ಮಾತು ಕೊಟ್ಟರೆ ಅದರಂತೆ ನಡೆದುಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಸಚಿವ ಗೋಪಾಲಯ್ಯ ಮಿನಿಸ್ಟರ್​ ಕನಸು ಕಾಣುತ್ತಿರುವ ಮುನಿರತ್ನ ಪರ ಬ್ಯಾಟ್ ಬೀಸಿದರು.

CM BSY will never forget those who sacrificed; Minister K Gopalaiah reaction
ಸಚಿವ ಗೋಪಾಲಯ್ಯ
author img

By

Published : Nov 12, 2020, 9:32 PM IST

Updated : Nov 12, 2020, 10:44 PM IST

ಹಾಸನ: ಕೆ.ಆರ್. ಪೇಟೆಯಲ್ಲಿ ಅಳವಡಿಸಿದ್ದ ತಂತ್ರಗಾರಿಕೆಯನ್ನೇ ಶಿರಾದಲ್ಲಿ ಅಳವಡಿಸಿ ಉಪಚುನಾವಣೆಯಲ್ಲಿ ಗೆದ್ದಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಸಂತಸ ವ್ಯಕ್ತಪಡಿಸಿದರು.

ಹಾಸನಾಂಬೆ ದರ್ಶನ ಮುಗಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರ ನಾಯಕತ್ವದಲ್ಲಿ ನಡೆದ ಎರಡು ಕ್ಷೇತ್ರದ ಉಪಾಚುನಾವಣೆಯಲ್ಲಿ ನಿರೀಕ್ಷೆಯಂತೆ ಗೆದ್ದಿದ್ದೇವೆ. ಜನ ಕೆಲಸ ಮಾಡಿರುವುದಕ್ಕೆ ಓಟು ಕೊಟ್ಟಿದ್ದಾರೆ ಎಂಬುದಕ್ಕೆ ಶಿರಾ ಕ್ಷೇತ್ರವೇ ಸಾಕ್ಷಿಯಾಗಿದೆ. ಇನ್ನು ಮುನಿರತ್ನ ಅವರು ರಾಜೀನಾಮೆ ಕೊಟ್ಟಿದ್ದರೂ ಕೊರೊನಾ ಸಮಯದಲ್ಲಿ ಕೆಲಸ ಮಾಡಿದ್ದಾರೆ‌. ಹಾಗಾಗಿ ಅವರು ಅಲ್ಲಿ ಗೆದಿದ್ದಾರೆ ಎಂದರು.

ಮಾಜಿ ಸಚಿವ ರೇವಣ್ಣ ಮಾಡಿದ್ದ ಆರೋಪಕ್ಕೆ ಪ್ರತಿಕ್ರಿಯಿಸಿ, ಪ್ರತಿಪಕ್ಷದಲ್ಲಿದ್ದವರು ಬೇರೆಯವರು ಅಧಿಕಾರಿದಲ್ಲಿದ್ದಾಗ ಮಾತನಾಡುತ್ತಾರೆ. ಈಗ ಚುನಾವಣೆ ಗೆದ್ದಾಗಿದೆ. ಮತ ಕೊಟ್ಟವರು ಬುದ್ಧಿವಂತರು, ಪ್ರಬುದ್ಧರಿದ್ದಾರೆ. ಚುನಾವಣೆ ಸೋತ ನಂತರ ಈ ರೀತಿ ಹೇಳಿಕೆ ಕೊಡುವುದು ಸಹಜ ಎಂದು ಹೇಳಿದರು‌.

ಸಚಿವ ಗೋಪಾಲಯ್ಯ

ಸಚಿವ ಸಂಪುಟ ವಿಸ್ತರಣೆ ಕಗ್ಗಂಟಾಗಿದೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಕೊಟ್ಟ ಮಾತಿನಂತೆ ನಡೆದುಕೊಳ್ಳುವವರು ರಾಜಕಾರಣದಲ್ಲಿ ಯಾರಾದರೂ ಇದ್ದರೆ ಅದು ಯಡಿಯೂರಪ್ಪನವರು ಮಾತ್ರ. ಹೈಕಮಾಂಡ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ. ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಪಕ್ಷ. ಹಾಗಾಗಿ ಮುಖ್ಯಮಂತ್ರಿಗಳು ಒಮ್ಮೆ ಮಾತು ಕೊಟ್ಟರೆ ಅದರಂತೆ ನಡೆದುಕೊಳ್ಳುತ್ತಾರೆ ಎಂದರು.

Last Updated : Nov 12, 2020, 10:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.