ಚನ್ನರಾಯಪಟ್ಟಣ (ಹಾಸನ): ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಇಂದು ನಗರ ಠಾಣೆಯಲ್ಲಿ ರೌಡಿ ಪರೇಡ್ ನಡೆಸಲಾಯಿತು.
ಎಸ್ಪಿ ಶ್ರೀನಿವಾಸ್ಗೌಡ ಅವರು ಮಾತನಾಡಿ, ಇಪ್ಪತ್ತೈದು ಜನ ರೌಡಿಗಳು ಬಂದಿದ್ದು, ಕೆಲವರು ಪರಿವರ್ತನೆ ಆಗಿದ್ದಾರೆ. ಪೆರೇಡ್ಗೆ ಬಾರದೆ ಕಾರ್ಯ ಪ್ರವೃತ್ತರಾಗಿರುವ ಆಸಾಮಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಕಳೆದ ಒಂದು ತಿಂಗಳಿನಿಂದ ಅಪರಾಧ ಕೃತ್ಯಗಳು ಹೆಚ್ಚಾಗಿದ್ದು, ಸುಮಾರು ಒಂಬತ್ತು ಜನ ಮೃತರಾಗಿದ್ದಾರೆ. ಅದರಲ್ಲೂ ಹಣದ ಆಸೆಗಾಗಿ ವೃದ್ದ ದಂಪತಿಗಳನ್ನ ಕೊಲೆಮಾಡಿದ ಆರೋಪಿಗಳಲ್ಲಿ, ಸದ್ಯ ಇಬ್ಬರು ಸಿಕ್ಕಿದ್ದಾರೆ. ಇನ್ನುಳಿದವರನ್ನ ಸದ್ಯದ್ರಲ್ಲೇ ಪತ್ತೆ ಹಚ್ಚಲಾಗುವುದು. ತಾಲೂಕಿನಲ್ಲಿ ಹೆಚ್ಚು ಯುವಕರು ಮದ್ಯಪಾನದಲ್ಲಿ ತೊಡಗಿದ್ದು, ಕುಡಿದ ನಶೆಯಲ್ಲಿ ಅಪರಾಧ ಮಾಡುವುದು ಕಂಡುಬಂದಿದೆ. ಇವರುಗಳ ವಿರುದ್ಧ ಶಿಸ್ತು ಕ್ರಮ ಕೈಗೂಳ್ಳಲಾಗುವುದು ಎಂದರು.