ಹಾಸನ : ನರೇಂದ್ರ ಮೋದಿ ಅವರು ಪ್ರಧಾನಿಯಾದಾಗ ರೈತರು ಅನೇಕ ನಿರೀಕ್ಷೆಯಲ್ಲಿದ್ದರು. ಆದರೆ, ರೈತರಿಗೆ ಮೋದಿ ಒಂದೇ ಒಂದು ಉತ್ತಮ ಯೋಜನೆ ಸೃಷ್ಟಿಸಿರುವ ಉದಾಹರಣೆಯಿಲ್ಲ ಎಂದು ಅಗಿಲೆ ಯೋಗೀಶ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು ಯೋಗಿಶ್, ಕೇವಲ ಕಾರ್ಪೋರೇಟ್ ಪರವಾಗಿ ಮೋದಿ ಅಧಿಕಾರವನ್ನು ನಡೆಸಿದ್ದಾರೆ. ಯುಪಿಎ ಆಡಳಿತಾವಧಿಯಲ್ಲಿ ಬೆಲೆ ಏರಿಕೆ ವಿರುದ್ಧ ನಾವು ಹೋರಾಟ ಮಾಡಿದ್ದೆವು. ಆದರೆ, ಮೋದಿ ಆಡಳಿತದಲ್ಲಿ ಯುಪಿಎ ಆಡಳಿತಕ್ಕಿಂತ ಹೆಚ್ಚು ಬೆಲೆ ಏರಿಕೆಯಾಗಿದೆ. ಪೆಟ್ರೋಲಿಯಂ ಉತ್ಪನ್ನಗಳು ಗಗನಕ್ಕೇರಿವೆ ಎಂದರು.
ರಿಲಯನ್ಸ್, ಶೆಲ್ ಪೆಟ್ರೋಲ್ ಬಂಕ್ಗಳು ದೇಶಾದ್ಯಂತ ಬಾಗಿಲು ಮುಚ್ಚಿದ್ದವು. ಮೋದಿ ದಯೆಯಿಂದ ದೇಶಾದ್ಯಂತ ಮತ್ತೆ ಖಾಸಗಿ ತೈಲ ಉತ್ಪನ್ನ ಕಂಪನಿಗಳು ಬಾಗಿಲು ತೆರೆದಿವೆ. ಮೂವತ್ತು ವರ್ಷ ನಾನು ಬಿಜೆಪಿಯಲ್ಲಿ ಕೆಲಸ ಮಾಡಿದ್ದೇನೆ. ಮೋದಿ ಆಡಳಿತ ಬೇಸರ ತಂದಿದೆ. ಹಾಸನದ ಬಿಜೆಪಿ ಶಾಸಕರಿಂದ ಮನನೊಂದು ಜೆಡಿಎಸ್ ಸೇರುತ್ತಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನಪರ ಕಾಳಜಿ ಇಲ್ಲದ ಶಾಸಕನ ಮತ್ತು ಪ್ರಧಾನಿಯ ಜೊತೆ ಕೆಲಸ ಮಾಡಲು ಸಾಧ್ಯವಿಲ್ಲ. ರೈತರ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸುವ ನಾಯಕರಿದ್ದರೆ ಅದು ದೇವೇಗೌಡರು. ಅವರ ರೈತಪರ ಕಾಳಜಿ ನೋಡಿ ಜೆಡಿಎಸ್ಗೆ ಬರಲು ನಿರ್ಧರಿಸಿದ್ದೇವೆ. ನೂರಾರು ಕಾರ್ಯಕರ್ತರೊಂದಿಗೆ ಜೆಡಿಎಸ್ ಸೇರ್ಪಡೆಗೊಳ್ಳುತ್ತೇವೆ ಎಂದು ಹೇಳಿದರು.