ETV Bharat / state

ಹಾಸನಲ್ಲಿ ಕುಟುಂಬ ರಾಜಕಾರಣ ಅಂತ್ಯ, ಪ್ರಜಾಪ್ರಭುತ್ವದ ಪರ್ವ ಆರಂಭ: ಸಿ.ಟಿ. ರವಿ

author img

By

Published : Mar 2, 2020, 4:59 AM IST

ಹಾಸನದಲ್ಲಿ ನಡೆದ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಪದಗ್ರಹಣ ಕಾರ್ಯಕ್ರಮದಲ್ಲಿ ಸಚಿವ ಸಿ.ಟಿ.ರವಿ. ಜಿಲ್ಲೆಯಲ್ಲಿ ಇದೀಗ ಕುಟುಂಬ ರಾಜಕಾರಣದಿಂದ ಪ್ರಜಾಪ್ರಭುತ್ವದ ಕಡೆ ಹೋಗುವ ಪರ್ವ ಆರಂಭವಾಗಿದೆ ಎಂದು ಸಚಿವ ಸಿ.ಟಿ. ರವಿ ಅವರು ಅಭಿಪ್ರಾಯಪಟ್ಟರು.

C T Ravi
ಸಿ.ಟಿ. ರವಿ

ಹಾಸನ: ಕುಟುಂಬ ರಾಜಕಾರಣದಿಂದ ಪ್ರಜಾಪ್ರಭುತ್ವದ ಕಡೆ ಹೋಗುವ ಪರ್ವ ಜಿಲ್ಲೆಯಲ್ಲೀಗ ಆರಂಭವಾಗಿದೆ ಎಂದು ಬಹಿರಂಗ ವೇದಿಕೆಯಲ್ಲಿಯೇ ದೇವೇಗೌಡ ಕುಟುಂಬ ರಾಜಕಾರಣದ ಬಗ್ಗೆ ಸಚಿವ ಸಿ.ಟಿ.ರವಿ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.

ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ ಸಿ.ಟಿ. ರವಿ

ಹಾಸನದಲ್ಲಿ ನಡೆದ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಸಿ.ಟಿ. ರವಿ, ನಾನು ಹಾಸನ ಜಿಲ್ಲೆಯ ಅಳಿಯ, ಹೀಗಾಗಿ ಚಿಕ್ಕಮಗಳೂರಿನಲ್ಲಿ ಹಬ್ಬ ನಡೆಯುತ್ತಿದ್ದರೂ ಬಂದಿದ್ದೇನೆ. ಹಾಸನದಲ್ಲಿ ಕುಟುಂಬ ರಾಜಕಾರಣ ಬಿಟ್ಟು ಪ್ರಜಾಪ್ರಭುತ್ವದ ಕಡೆ ಹೋಗುವ ಹೊಸ ರಾಜಕೀಯ ಪರ್ವ ಆರಂಭವಾಗಿದೆ. ಕೌಟುಂಬಿಕ ಅಭಿವೃದ್ಧಿಯಿಂದ ಜಿಲ್ಲೆಯ ಅಭಿವೃದ್ಧಿ ಕಡೆ ಹೋಗುವ ಪರ್ವ ಆರಂಭವಾಗಿದ್ದು, ಹಾಸನದ ಏಳು ಕ್ಷೇತ್ರದಲ್ಲೂ, ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೆ ಕಮಲ ಅರಳಬೇಕು. ನಮ್ಮದು ವ್ಯಕ್ತಿ ನಿಷ್ಟೆ, ಜಾತಿ ನಿಷ್ಟೆ ಸಿದ್ದಾಂತ ಅಲ್ಲ. ನಮ್ಮದು ರಾಷ್ಟ್ರ ನಿಷ್ಟೆಯ ಸಿದ್ದಾಂತ. ನಾವು ಪಾಳೆಗಾರಿಕೆಯ ಬುಡವನ್ನು ಬೇರು ಸಹಿತ ಕಿತ್ತು ಹಾಕುತ್ತೇವೆ ಎಂದು ಪರೋಕ್ಷವಾಗಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ರಾಜಕಾರಣದ ಬಗ್ಗೆ ಕಿಡಿಕಾರಿದ್ದಾರೆ.

ಇದೇ ವೇಳೆ ಎನ್ ಆರ್ ಸಿ ಬಗ್ಗೆ ಮಾತನಾಡುತ್ತಾ, ಎನ್ ಆರ್ ಸಿ ಅಕ್ರಮ ನುಸುಳುಕೋರರ ತಡೆಗೆ ಇರೋದು. ಇದೇ ಕಾರಣಕ್ಕೆ ಎನ್ ಆರ್ ಸಿ ಅಸ್ಸಾಂನಲ್ಲಿ ಜಾರಿ ಇದೆ. ಪಾಕ್​ನ ಅಕ್ರಮ ನುಸುಳು ಕೋರರನ್ನ ಹೊರಹಾಕಿದ್ರೆ ಕಾಂಗ್ರೆಸ್, ಜೆಡಿಎಸ್ ಯಾಕೆ ಸಂಕಟ ಪಡಬೇಕು. ಅವರ ಭಯ ಓಟು ಬ್ಯಾಂಕ್ ಕಮ್ಮಿ ಆಗುತ್ತೆ ಅನ್ನೋದು. ಈಗ ಕೆಲವರು ಸಿಎಎ ಬಂದ ಮೇಲೆ ಸಮಾನತೆ ಬಗ್ಗೆ ಮಾತಾಡ್ತಿದ್ದಾರೆ. ದೇಶದಲ್ಲಿ ಸಮಾನ ನಾಗರಿಕತೆ ಕಾನೂನು ತರಲೇಬೇಕು. ಇಂತಹ ಕೆಲಸಕ್ಕೆ ಬೆಂಬಲಿಸಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಸಿ.ಟಿ. ರವಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.