ETV Bharat / state

ಸಾರಿಗೆ ನೌಕರರ ಮುಷ್ಕರ: ಒಬ್ಬ ಕ್ರಿಮಿನಾಶಕ ಸೇವಿಸಿದ್ರೆ, ಮತ್ತೊಬ್ಬ ಬಸ್ಸಿನಡಿ ಮಲಗಿ ಪ್ರತಿಭಟನೆ! - ಸಾರಿಗೆ ಮುಷ್ಕರ,

ಸಾರಿಗೆ ನೌಕರರ ಮುಷ್ಕರ ತೀವ್ರ ಸ್ವರೂಪ ಪಡೆದಿದ್ದು, ಒಬ್ಬ ಕ್ರಿಮಿನಾಶಕ ಸೇವಿಸಿದ್ರೆ, ಮತ್ತೊಬ್ಬ ಬಸ್ಸಿನಡಿ ಮಲಗಿ ಪ್ರತಿಭಟನೆ ಮಾಡಿರುವ ಘಟನೆ ನಿನ್ನೆ ಹಾಸನದಲ್ಲಿ ನಡೆದಿದೆ.

Bus driver suicide attempt, Bus driver suicide attempt in Transport strike, Bus driver suicide attempt in Transport strike in Hassan, Hassan news, ಬಸ್​ ಡ್ರೈವರ್​ ಆತ್ಮಹತ್ಯೆಗೆ ಯತ್ನ, ಸಾರಿಗೆ ಮುಷ್ಕರ ವೇಳೆ ಬಸ್​ ಡ್ರೈವರ್​ ಆತ್ಮಹತ್ಯೆಗೆ ಯತ್ನ, ಹಾಸನದಲ್ಲಿ ಬಸ್​ ಡ್ರೈವರ್​ ಆತ್ಮಹತ್ಯೆಗೆ ಯತ್ನ, ಸಾರಿಗೆ ಮುಷ್ಕರ, ಸಾರಿಗೆ ಮುಷ್ಕರ ಸುದ್ದಿ,
ಒಬ್ಬ ಕ್ರಿಮಿನಾಶಕ ಸೇವಿಸಿದ್ರೆ, ಮತ್ತೊಬ್ಬ ಬಸ್ಸಿನಡಿ ಮಲಗಿ ಪ್ರತಿಭಟನೆ
author img

By

Published : Apr 13, 2021, 5:36 AM IST

ಹಾಸನ: ಆರನೇ ವೇತನ ಆಯೋಗ ಮತ್ತು ಸರಕಾರಿ ನೌಕರನಾಗಿ ಮಾಡಬೇಕು ಎಂಬ ಬೇಡಿಕೆಗಳನ್ನು ಇಟ್ಟು ನಡೆಸುತ್ತಿರುವ ಪ್ರತಿಭಟನೆ ಇಂದಿಗೆ 6ನೇ ದಿನಕ್ಕೆ ಕಾಲಿಟ್ಟಿದ್ದು, ಹಾಸನದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆಯಿತು.

ನಿನ್ನೆ ಬೆಳಗ್ಗೆ ನಿರ್ವಾಹಕ ಕಂ ಚಾಲಕನೊಬ್ಬ ವರ್ಗಾವಣೆಯಾದ ಹಿನ್ನೆಲೆ ಮನನೊಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದ ಬೆನ್ನಲ್ಲಿಯೇ, ಸಾರಿಗೆ ನೌಕರರ ಕುಟುಂಬಸ್ಥರು ಬೀದಿಗಿಳಿದವು ಶಾಂತಿಯುತ ಪ್ರತಿಭಟನೆ ನಡೆಸಿದರು. ಅಷ್ಟೇ ಅಲ್ಲದೆ ಸಾರಿಗೆ ನೌಕರರು ಹಾಗೂ ಬಸ್ ರಿಪೇರಿ ಮಾಡುವ ತಾಂತ್ರಿಕ ವರ್ಗದವರು ಹಾಸನದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಲೋಟದಿಂದ ತಟ್ಟೆ ಬಾರಿಸುವ ವಿಭಿನ್ನ ಪ್ರತಿಭಟನೆಗೆ ನಾಂದಿ ಹಾಡಿದರು.

ನಿಮ್ಮ ಹಾಗೆ ನಾವು ಮನುಷ್ಯರು. ಬೆಳಗ್ಗೆಯಿಂದ ಸಂಜೆಯ ತನಕ ಕುರ್ಚಿಯಲ್ಲಿ ಕುಳಿತು ವಾಹನ ಚಲಾಯಿಸುವುದು ಸುಲಭವಲ್ಲ. ಅದರಲ್ಲಿ ಕುಳಿತುಕೊಳ್ಳುವ ಕಷ್ಟ ಏನೆಂಬುದು ಚಾಲಕರಿಗೆ ಮತ್ತು ನಿರ್ವಾಹಕರಿಗೆ ಮಾತ್ರ ಗೊತ್ತಿದೆ. ನಮಗೆ ನಿಮ್ಮಂತೆಯೇ ಮಕ್ಕಳಿದ್ದಾರೆ. ವಿದ್ಯಾಭ್ಯಾಸ ಸೇರಿದಂತೆ ವಸತಿ ಸೌಲಭ್ಯವನ್ನು ಕೂಡ ನಾವು ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಿರುವಾಗ ನಮ್ಮ ಬೇಡಿಕೆಗಳನ್ನು ಈಡೇರಿಸದೇ ನೌಕರರನ್ನು ಬೆದರಿಸಿ ಕೆಲಸ ಮಾಡಿಸಿಕೊಳ್ಳಲು ಹೊರಟಿರುವ ಸರ್ಕಾರಕ್ಕೆ ನಮ್ಮ ಧಿಕ್ಕಾರವಿರಲಿ ಎಂದು ಪ್ರತಿಭಟನಾಕಾರರು ಆಕ್ರೋಶವನ್ನು ವ್ಯಕ್ತಪಡಿಸಿದರು.

ಕೆಲವರು ಸ್ವಯಂ ಪ್ರೇರಿತವಾಗಿ ಕರ್ತವ್ಯಕ್ಕೆ ಹಾಜರಾಗಿ ಬಸ್ಸುಗಳನ್ನು ತೆಗೆದುಕೊಂಡು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕನೊಬ್ಬ ಚಲಿಸುತ್ತಿದ್ದ ಬಸ್ಸಿಗೆ ಅಡ್ಡ ಬಂದಿದ್ದಾರೆ. ಬಳಿಕ ಚಕ್ರದ ಕೆಳಗೆ ಮಲಗಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದು, ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ತಕ್ಷಣ ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ ಆತನನ್ನ ಮನವೊಲಿಸಲು ಪ್ರಯತ್ನಪಟ್ಟರು ಯಾವುದೇ ಪ್ರಯೋಜನವಾಗಲಿಲ್ಲ. ಸ್ಪಂದಿಸಿದ ನೌಕರನನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.