ETV Bharat / state

ಕೊಲೆಯಾದ ವ್ಯಕ್ತಿಯ ಶವ ಅರೆಬೆಂದ ಸ್ಥಿತಿಯಲ್ಲಿ ಶಿರಾಡಿ ಘಾಟ್‌ನಲ್ಲಿ ಪತ್ತೆ - burned dead body found in shiradi ghat

ಕೊಲೆ ಮಾಡಿದ ಬಳಿಕ ಬೆಂಕಿಹಚ್ಚಿ ಅರೆಬೆಂದ ಶವವನ್ನು ಚೀಲಕ್ಕೆ ತುಂಬಿ ದುಷ್ಕರ್ಮಿಗಳು ಶಿರಾಡಿ ಘಾಟ್​ನಲ್ಲಿ ಎಸೆದು ಹೋಗಿದ್ದಾರೆ.

police
ಕಾರ್ಯಾಚರಣೆಯಲ್ಲಿರುವ ಪೊಲೀಸರು
author img

By

Published : Sep 29, 2021, 8:16 PM IST

ಹಾಸನ/ಸಕಲೇಶಪುರ: ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ. ಮಾಗೇರಿ ಬಳಿ ದುಷ್ಕೃತ್ಯ ಸಂಭವಿಸಿದೆ.

ಕೊಲೆಗೈದ ಬಳಿಕ ಬೆಂಕಿಹಚ್ಚಿ ಅರೆಬೆಂದ ಶವವನ್ನು ಚೀಲಕ್ಕೆ ತುಂಬಿರುವ ಆರೋಪಿಗಳು ಶಿರಾಡಿ ಘಾಟ್​ನಲ್ಲಿ ಎಸೆದಿದ್ದಾರೆ. ವ್ಯಕ್ತಿಗೆ ಸುಮಾರು 45 ವರ್ಷ ಎಂದು ಅಂದಾಜಿಸಲಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ. ಹಂತಕರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಕುಪ್ಪೂರು ಗದ್ದಿಗೆ ಮಠದ ಸ್ವಾಮೀಜಿಗೆ ಚಿಕಿತ್ಸೆ ನಿರ್ಲಕ್ಷ್ಯ ಆರೋಪ, ತನಿಖೆ ಆರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.