ಅರಕಲಗೂಡು (ಹಾಸನ): ಪಟ್ಟಣದ 8 ವರ್ಷದ ಬಾಲಕನೋರ್ವ ಮೂಲಭೂತ ಸೌಕರ್ಯಗಳ ಕೊರತೆಯ ನಡುವೆಯೂ ಕಳೆದ ನಾಲ್ಕು ವರ್ಷಗಳಿಂದ ಮನೆಯಂಗಳ ಹಾಗೂ ಬೀದಿಯಲ್ಲೇ ಸ್ಕೇಟಿಂಗ್ ಅಭ್ಯಾಸ ಮಾಡುತ್ತಿದ್ದಾನೆ.
ಬಾಲಕ ಹೇಮ್ ತನಯ್ ಸೂಕ್ತವಾದ ಮಾರ್ಗದರ್ಶನ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯ ಮಧ್ಯೆ ನಿರಂತರವಾಗಿ ಸ್ಕೇಟಿಂಗ್ ಅಭ್ಯಾಸ ಮಾಡುತ್ತಿದ್ದಾನೆ. ಈತನ ತಂದೆ ಮೋಹನ್ ಕುಮಾರ್ ಪೊಲೀಸ್ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತನಯ್ ಮುಂಜಾನೆ ಖಾಲಿ ರಸ್ತೆಯಲ್ಲಿ ಸ್ಕೇಟಿಂಗ್ ಅಭ್ಯಾಸ ಮಾಡುತ್ತಿದ್ದು, ಪೋಷಕರು ಕೂಡ ಸಾಥ್ ನೀಡುತ್ತಿದ್ದಾರೆ.
ಬಾಲಕನ ಸ್ಕೇಟಿಂಗ್ನಿಂದ ಆಕರ್ಷಿತರಾಗಿರುವ ಇತರೆ ಮಕ್ಕಳು ಕೂಡ ಸ್ಕೇಟಿಂಗ್ ಕಲಿಯುವ ಹಂಬಲ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಟ್ರ್ಯಾಕ್ ಹಾಗೂ ಮಾರ್ಗದರ್ಶಕರ ಕೊರತೆದ್ದು, ತಾಲೂಕು ಆಡಳಿತ ಈ ಕುರಿತು ಕ್ರಮವಹಿಸಬೇಕಾಗಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.