ETV Bharat / state

ಸರಳವಾಗಿ ಹಾಸನಾಂಬ ಮಹೋತ್ಸವ ಆಚರಣೆ ಹಿನ್ನಲೆ ಸಾರ್ವಜನಿಕರ ಪ್ರವೇಶ ನಿಷೇಧ

author img

By

Published : Nov 2, 2020, 11:22 PM IST

ಕೋವಿಡ್ ಹಿನ್ನೆಲೆ ಹಾಸನಾಂಬೆ ದೇವಿ ದರ್ಶನಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಿದ್ದು, ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ಡಿಸಿ ಮನವಿ ಮಾಡಿದರು.

Ban on public in Hasanamba Mahotsava
ಸರಳವಾಗಿ ಹಾಸನಾಂಬ ಮಹೋತ್ಸವ ಆಚರಣೆ ಹಿನ್ನಲೆ ಸಾರ್ವಜನಿಕರ ಪ್ರವೇಶ ನಿಷೇಧ

ಹಾಸನ: ಕೊರೊನಾ ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಯಾವುದೇ ತೊಂದರೆಗೆ ಸಿಲುಕುವುದು ಬೇಡ ಎಂಬ ಉದ್ದೇಶದಿಂದ ಸರಳವಾಗಿ ಹಾಸನಾಂಬ ಮಹೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದರು.

ಸಿದ್ದೇಶ್ವರ ಸ್ವಾಮಿ ದೇವಾಲಯದಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆ ಹಾಸನಾಂಬೆ ದೇವಿ ದರ್ಶನಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಿದ್ದು, ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿದರು.

ಪ್ರವೇಶ ನಿಷೇಧದ ಬಗ್ಗೆ ಒಂದು ತಿಂಗಳ ಹಿಂದೆಯೇ ಈ ಕುರಿತು ಹೇಳಿಕೆ ಪ್ರಕಟಿಸಲಾಗಿತ್ತು. ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆ ಬಾರದ ಹಿನ್ನೆಲೆಯಲ್ಲಿ ತೆಗೆದುಕೊಂಡಿರುವ ನಿರ್ಧಾರ ಸಮಯೋಚಿತ ಎಂದು ಅನಿಸಿದೆ. ಆದ್ದರಿಂದ ಎಲ್‌ಇಡಿ ಪರದೆ ಮೂಲಕವೇ ದೇವಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು.

ನಗರದ ತಣ್ಣೀರುಹಳ್ಳ, ಹೊಸ ಬಸ್ ನಿಲ್ದಾಣ, ಹೇಮಾವತಿ ನಗರ, ವಿದ್ಯಾ ನಗರ ಲೇಡಿಸ್ ಹಾಸ್ಟೆಲ್, ಉಪನೋಂದಣಾಧಿಕಾರಿ ಕಚೇರಿ, ರೈಲ್ವೆ ನಿಲ್ದಾಣ ಸಮೀಪ ಹಾಗೂ ಹಾಸನಾಂಬ ದೇವಾಲಯ ಸುತ್ತಲು ನಾಲ್ಕು ಕಡೆ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಿಕೊಳ್ಳಲಾಗುವುದು. ಜಾತ್ರಾ ಮಹೋತ್ಸವ ಅಂಗವಾಗಿ ನಗರದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ ಎಂದರು.

ಪರಸ್ಪರ ಅಂತರ ಪಾಲನೆ ಮೂಲಕ ಭಕ್ತರಿಗೆ ಅವಕಾಶ ಮಾಡಿಕೊಡಬೇಕೆಂಬ ಚರ್ಚೆ ನಡೆಯಿತು. ಆದರೆ ಸರತಿ ಸಾಲಿನಲ್ಲಿ ಬರುವ ಭಕ್ತರು ದೇವಿ ದರ್ಶನ ಪಡೆದು ಹೊರ ಹೋಗಬೇಕೆಂದರೆ ಕನಿಷ್ಠ ಮೂರು ಗಂಟೆ ಸಮಯ ಬೇಕಾಗುತ್ತದೆ. ಇದರಿಂದ ಕೊರೊನಾ ಸೋಂಕು ಹಬ್ಬುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಆನ್‌ಲೈನ್ ಮೂಲಕವೇ ಹಾಸನಾಂಬೆ ದರ್ಶನ ಪಡೆಯಬೇಕು ಎಂದರು.

ಹೊರ ಜಿಲ್ಲೆಯ ಹಾಗೂ ರಾಜ್ಯದ ಭಕ್ತರು ಫೇಸ್‌ಬುಕ್, ಟಿವಿ ಚಾನಲ್‌ಗಳ ಮೂಲಕ ಸಂಭ್ರಮದಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ, ಉಪವಿಭಾಗಾಧಿಕಾರಿ ಬಿ.ಎ. ಜಗದೀಶ್, ತಹಶೀಲ್ದಾರ್ ಶಿವಶಂಕರಪ್ಪ ಭಾಗವಹಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.