ETV Bharat / state

ಕೊಟ್ಟ ಸಾಲ ಮರಳಿಸಲಿಲ್ಲವೆಂದು ಯುವಕನನ್ನ ಹತ್ಯೆಗೈದಿದ್ದ ಐವರ ಬಂಧನ - ಅರಳೀಕಟ್ಟೆ ಪೊಲೀಸರಿಂದ ರಘುಗೌಡ ಕೊಲೆ ಆರೋಪಿಗಳ ಬಂಧನ

ಮಗನನ್ನ ಕಳೆದುಕೊಂಡ ತಂದೆಯ ರೋಧನೆ ಮುಗಿಲು ಮುಟ್ಟಿತ್ತು. ಹಣಕೊಡದಿದ್ದರೆ ನನ್ನ ಬಳಿ ಬಂದು ಕೇಳ ಬೇಕಿತ್ತು. ಅದರ ಬದಲು ಆತನನ್ನ ಕೊಲೆ ಮಾಡುವುದು ಎಷ್ಟು ಸರಿ? ನನ್ನ ಮಗ ಮನೆ ಕಟ್ಟಿ ಮದುವೆ ಮಾಡಿಕೊಳ್ಳುತ್ತೇನೆ ಎಂದಿದ್ದ..

Arrest of 5 accused in the murder of a youth man
ಯುವಕನ ಬರ್ಬರ ಹತ್ಯೆಗೈದಿದ್ದ 5 ಆರೋಪಿಗಳ ಬಂಧನ
author img

By

Published : Dec 9, 2020, 8:23 PM IST

ಹಾಸನ : ಶನಿವಾರ ರಾತ್ರಿ ಅರಳೀಕಟ್ಟೆ ಸರ್ಕಲ್​​ನಲ್ಲಿ ನಡೆದ ಕೊಲೆ ಪ್ರಕರಣವನ್ನ ನಾಲ್ಕು ದಿನದಲ್ಲಿ ಬೇಧಿಸುವಲ್ಲಿ ಹಾಸನದ ಪೊಲೀಸರು ಯಶಸ್ವಿಯಾಗಿದ್ದಾರೆ.

ಭವಿತ್ ಅಲಿಯಾಸ್​ ಗುಡ್ಡಿ (19), ತೇಜಸ್ ಅಲಿಯಾಸ್​ ಲೋಕಿ(19), ಪುನೀತ್ ಅಲಿಯಾಸ್​ ಬಣ್ಣ (21), ನವೀನ್ ಅಲಿಯಾಸ್​ ಚಿನ್ನ (21), ವಿವೇಕ ಅಲಿಯಾಸ್​ ಸೊಳ್ಳೆ ಅಲಿಯಾಸ್​ ಬೊಂಡಾ (24) ಬಂಧಿತ ಆರೋಪಿಗಳು.

ನಗರದ ಅರಳೀಕಟ್ಟೆ ವೃತ್ತದ ಬಳಿಯಿರುವ ಜೆಪಿ ಟೀ ಸ್ಟಾಲ್‌ನಲ್ಲಿ ರಘುಗೌಡ ಎಂಬುವನನ್ನು 5 ಮಂದಿ ಸೇರಿ ಬರ್ಬರವಾಗಿ ಕೊಲೆ ಮಾಡಿದ್ದರು. ಕೊಲೆಯ ಆರೋಪಿಗಳು ಯಾರು ಎಂಬುದು ಗೊತ್ತಾಗಿರಲಿಲ್ಲ. ಹೀಗಾಗಿ ಟೀ ಅಂಗಡಿಯ ಸಮೀಪವಿದ್ದ, ಸಿಸಿಟಿವಿ ದೃಶ್ಯಾವಳಿ ಕಲೆಹಾಕಿ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ರು.

ಮೃತ ರಘಗೌಡನ ಅಕ್ಕ ಮಾತನಾಡಿದರು
ಸಾಲ ವಾಪಸ್ ನೀಡಲು ನಿರಾಕರಿಸಿದ ಹಿನ್ನೆಲೆ ಕೊಲೆ : ಮೃತ ರಘುಗೌಡ ಒಂದೂವರೆ ವರ್ಷದ ಹಿಂದೆ 2ನೇ ಆರೋಪಿಯಾಗಿರೋ ತೇಜಸ್‌ನಿಂದ ₹1.5ಲಕ್ಷವನ್ನ ಸಾಲವಾಗಿ ಪಡೆದಿದ್ದ. ತೇಜಸ್ ಅಕ್ಕನ ಮದುವೆ ಫಿಕ್ಸ್ ಆಗಿದ್ದು, ಮದುವೆಯ ನಿಮಿತ್ತ ಸಾಲದ ಹಣವನ್ನ ವಾಪಸ್ ಕೇಳಿದ್ದಕ್ಕೆ ಕೊಡುವುದಿಲ್ಲ. ಅದೇನ್ ಮಾಡ್ಕೋತಿಯೋ ಮಾಡ್ಕೋ ಎಂದು ಬೆದರಿಕೆ ಹಾಕಿದ್ದನಂತೆ. ಇದರಿಂದ ಕೋಪಗೊಂಡಿದ್ದ ತೇಜಸ್, ರಘುಗೌಡನನ್ನು ಮುಗಿಸಲು ಸ್ಕೆಚ್ ಹಾಕಿದ್ರು.
ಟೀ ಅಂಗಡಿಯಲ್ಲಿ ಸ್ಪಾಟ್ ಫಿಕ್ಸ್ : ಸಾಲ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ರೂ ಕೊಡುವುದಿಲ್ಲ ಎಂದು ಹೆದರಿಸುತ್ತಿದ್ದಾನೆ. ಹೇಗಾದ್ರೂ ಮಾಡಿ ಕೊಲೆ ಮಾಡಲೇಬೇಕೆಂದು ತೀರ್ಮಾನಿಸಿದ ತೇಜಸ್, ತನ್ನ ಸ್ನೇಹಿತರ ಬಳಿ ಈ ವಿಚಾರ ಹೇಳಿಕೊಂಡಿದ್ದ.
ಸೇಹಿತರ ಸಹಾಯದಿಂದ, ಕೊಲೆಯಾದ ರಘುಗೌಡ, ಪ್ರತಿನಿತ್ಯ ಸಂಜೆ ಟೀ ಅಂಗಡಿಗೆ ಬರುತ್ತಾನೆ. ಅಲ್ಲಿಯೇ ಆತನನ್ನ ಕೊಲೆ ಮಾಡೋಣ ಅಂತಾ ಸಂಚು ರೂಪಿಸಿದ್ರು. ಬಳಿಕ ತೇಜಸ್ ರಘುವಿಗೆ ಫೋನ್ ಮಾಡಿ ಟೀ ಅಂಗಡಿಗೆ ಬರುವಂತೆ ಹೇಳಿದ್ದು, ಸ್ವಲ್ಪ ಸಮಯದಲ್ಲಿಯೇ ಆತ ಟೀ ಅಂಗಡಿಗೆ ಬಂದ ಕೆಲವೇ ನಿಮಿಷದಲ್ಲಿ ಸ್ಥಳಕ್ಕೆ ಬಂದ ಭವಿತ್ ರಘುಗೌಡನಿಗೆ ಖಾರದ ಪುಡಿ ಎರಚಿದ್ದು, ಬಳಿಕ ಉಳಿದ ನಾಲ್ಕು ಮಂದಿ ತಾವು ತಂದಿದ್ದ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು, ದ್ವಿಚಕ್ರವಾಹನದಲ್ಲಿ ಪರಾರಿಯಾಗಿದ್ರು.

ಓದಿ: ಹಾಸನ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

ನನ್ನ ಮಗನ ರೀತಿಯೇ ಕೊಚ್ಚಿ ಹಾಕಬೇಕು : ಮಗನನ್ನ ಕಳೆದುಕೊಂಡ ತಂದೆಯ ರೋಧನೆ ಮುಗಿಲು ಮುಟ್ಟಿತ್ತು. ಹಣಕೊಡದಿದ್ದರೆ ನನ್ನ ಬಳಿ ಬಂದು ಕೇಳ ಬೇಕಿತ್ತು. ಅದರ ಬದಲು ಆತನನ್ನ ಕೊಲೆ ಮಾಡುವುದು ಎಷ್ಟು ಸರಿ? ನನ್ನ ಮಗ ಮನೆ ಕಟ್ಟಿ ಮದುವೆ ಮಾಡಿಕೊಳ್ಳುತ್ತೇನೆ ಎಂದಿದ್ದ.

ಆದ್ರೆ, ಮದುವೆಗೆ ಮುನ್ನವೇ ನನ್ನ ಮಗನನ್ನ ಕೊಚ್ಚಿ ಕೊಲೆಮಾಡಿ ಚಟ್ಟ ಕಟ್ಟಿಬಿಟ್ಟರು. ನನ್ನ ಮಗನ ಸ್ಥಿತಿಗೆ ಕಾರಣರಾದ ಅವರುಗಳನ್ನ ಅದೇ ರೀತಿಯೇ ಕೊಚ್ಚಿ ಕೊಲೆ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಲೆಯ ಹಿಂದೆ ಕುಮ್ಮಕ್ಕಿದೆ: ಇನ್ನು ಇವರುಗಳು ಕೇವಲ ನೆಪ ಮಾತ್ರ. ಆದ್ರೆ, ನನ್ನ ಅಣ್ಣನನ್ನ ಕೊಲೆ ಮಾಡಿಸಿರುವವರು ಬೇರೆಯವರು ಇದ್ದಾರೆ. ಕೊಲೆ ಮಾಡುವಷ್ಟು ಇವರು ಧೈರ್ಯವಂತರಲ್ಲ. ಸುಫಾರಿ ನೀಡಿ ಕೊಲೆ ಮಾಡಿಸಿದ್ದಾರೆ. ಇದರ ಬಗ್ಗೆ ಮತ್ತೆ ತನಿಖೆಯಾಗಬೇಕು ಎನ್ನುತ್ತಾರೆ ಸಹೋದರ ಯಶ್ವಂತ್.

ನನ್ನ ತಮ್ಮ ಚಿನ್ನದಂತವ : ನನ್ನ ತಮ್ಮ ಚಿನ್ನದಂತವ. ಅವನು ಯಾರಿಗೂ ಕೇಡು ಬಯಸಿದವನಲ್ಲ. ಆದ್ರೆ, ಈ ನಾಲ್ಕು ಮಂದಿ ಸಾಲಕ್ಕಾಗಿ ಕೊಲೆ ಮಾಡಿದ್ದು, ನಿಜಕ್ಕೂ ನಮಗೆ ದುಃಖವನ್ನ ತಡೆಯಲು ಸಾಧ್ಯವಾಗುತ್ತಿಲ್ಲ.

ನನ್ನ ತಮ್ಮನ ಸಾವಿಗೆ ಕಾರಣರಾದವರಿಗೆ ಮರಣ ದಂಡನೆಯ ಶಿಕ್ಷೆ ಕೊಡಬೇಕು. ಇಲ್ಲ, ಸಾಯುವ ತನಕ ಜೈಲಿನಲ್ಲಿಯೇ ಇರುವಂತೆ ಮಾಡಬೇಕು. ನಮ್ಮ ಕುಟುಂಬಕ್ಕೆ ಬಂದ ರೀತಿ ಅವರ ಕುಟುಂಬಕ್ಕೂ ಬಂದಾಗ ಆ ನೋವು ಗೊತ್ತಾಗುತ್ತೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.