ETV Bharat / state

ಪ್ರೀ ವೆಡ್ಡಿಂಗ್​ ಶೂಟ್​ ನೆಪದಲ್ಲಿ ದರೋಡೆ: ಖತರ್ನಾಕ್​ ಗ್ಯಾಂಗ್​​ ಅಂದರ್​​ - ಹಾಸನ ಅಪರಾಧ ಸುದ್ದಿ

ಪ್ರೀ ವೆಡ್ಡಿಂಗ್ ಶೂಟ್‌ಗೆ ಕರೆದುಕೊಂಡು ಹೋಗಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

Arrest of accused who Does robbery
ಪ್ರೀ ವೆಡ್ಡಿಂಗ್ ಶೂಟ್​ನೆಪದಲ್ಲಿ ದರೋಡೆ
author img

By

Published : Feb 25, 2020, 6:15 PM IST

ಹಾಸನ: ಪ್ರೀ ವೆಡ್ಡಿಂಗ್ ಶೂಟ್‌ಗೆ ಕರೆದುಕೊಂಡು ಹೋಗಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಎಸ್​​​ಪಿ ಶ್ರೀನಿವಾಸಗೌಡ ಮಾಹಿತಿ ನೀಡಿದ್ದಾರೆ. ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳಿಂದ 6.50 ಲಕ್ಷ ರೂ. ಮೌಲ್ಯದ ದ್ರೋಣ್ ಕ್ಯಾಮರಾ, ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಶರಥ(24) ಹಾಗೂ ಕೋಲಾರದ ಬಾಬು (22), ಹೊಸಕೋಟೆ ಮೂಲದ ಮಲ್ಲಿಕಾರ್ಜುನ (29), ಆನಂದ್ (23) ಎಂಬುವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರೀ ವೆಡ್ಡಿಂಗ್ ಶೂಟ್​ ನೆಪದಲ್ಲಿ ದರೋಡೆ

ಈ ಹಿಂದೆಯೂ ಸಹ ಹಲವು ಪ್ರಕರಣಗಳಲ್ಲಿ ಈ ಆರೋಪಿಗಳು ಭಾಗಿಯಾಗಿದ್ದರು. ಸದ್ಯ ಪ್ರಮುಖ ಆರೋಪಿ ಚಲಪತಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. ಚಕಪತಿ ತಂಡ ಮೈಸೂರು ಸೇರಿದಂತೆ ರಾಜ್ಯದ ಹಲವೆಡೆ ಪ್ರಿ ವೆಡ್ಡಿಂಗ್ ಶೂಟಿಂಗ್ ನೆಪದಲ್ಲಿ ಜಸ್ಟ್ ಡಯಲ್ ಮೂಲಕ ಇದೇ ರೀತಿ ದರೋಡೆಗಳನ್ನು ಮಾಡುತ್ತಿತ್ತು ಎಂದು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.