ETV Bharat / state

ಅರಸೀಕೆರೆ : ಸಾಲ ವಾಪಸ್​ ನೀಡದ್ದಕ್ಕೆ ರೌಡಿಶೀಟರ್​ ಹತ್ಯೆ, ಇಬ್ಬರು ಆರೋಪಿಗಳ ಬಂಧನ - hassan rowdy murder case

ಇದರಿಂದ ಬೇಸತ್ತ ಯಶವಂತ್ ತನ್ನ ಸ್ನೇಹಿತರೊಂದಿಗೆ ವಿಚಾರ ತಿಳಿಸಿ ಕೊಲೆಗೆ ಸಂಚು ರೂಪಿಸಿದ್ದರು. ಅದರಂತೆ ರಾಜಿ ಸಂಧಾನ ಮಾಡಿಕೊಳ್ಳೋಣ ಅಂತಾ ನವಾಜ್​ಗೆ ಫೋನ್ ಮಾಡಿ ಕಾರೆಹಳ್ಳಿ ಸಮೀಪದ ಸ್ಥಳವೊಂದಕ್ಕೆ ಕರೆಸಿಕೊಂಡು ಆತನ ಮೇಲೆ ಯಶವಂತ ಮತ್ತು ಆತನ ಸಹಚರರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು..

arasikere-rowdy-murder-case-accused-arrested
ಅರಸೀಕೆರೆ: ಸಾಲ ವಾಪಸ್​ ನೀಡದ್ದಕ್ಕೆ ರೌಡಿಶೀಟರ್​ ಹತ್ಯೆ, ಇಬ್ಬರು ಆರೋಪಿಗಳ ಬಂಧನ
author img

By

Published : Aug 13, 2021, 7:35 PM IST

ಹಾಸನ/ಅರಸೀಕೆರೆ : ಅರಸೀಕೆರೆ ನಗರದ ಹೊರವಲಯದ ಚಿಕ್ಕತಿರುಪತಿ ರಸ್ತೆಯ ಕಾರೇಹಳ್ಳಿಯಲ್ಲಿ ಆಗಸ್ಟ್‌ 11ರಂದು ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧ 6 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿ ಇಬ್ಬರನ್ನು ಅರಸೀಕೆರೆ ಪೊಲೀಸರು ಬಂಧಿಸಿದ್ದಾರೆ.

ನವಾಜ್ (27) ಕೊಲೆಯಾಗಿದ್ದ ರೌಡಿಶೀಟರ್ ಆಗಿದ್ದು, ಅರಸೀಕೆರೆ ತಾಲೂಕಿನ ಕಾರೆಹಳ್ಳಿ ನಿವಾಸಿಗಳಾದ ಯಶವಂತ್ (23) ಶಿವಸ್ವಾಮಿ (22) ಎಂಬುವರನ್ನು ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳಾಗಿರುವ ತೇಜಸ್ (23) ಮನು(23) ಹಾಗೂ ಗುರುರಾಜ್ (24) ತಲೆಮರೆಸಿಕೊಂಡಿದ್ದಾರೆ.

ಕೊಲೆಯಾದ ನವಾಜ್, ಆರೋಪಿ ಯಶವಂತ್​ ಬಳಿ ಸಾಲ ಪಡೆದಿದ್ದ. ಈ ಹಣ ಹಿಂತಿರುಗಿಸಬೇಕೆಂದು ಹಲವು ಬಾರಿ ಯಶವಂತ್ ಕೇಳಿದ್ದ. ಆದರೆ, ನಾನು ಅರಸೀಕೆರೆಗೆ ಡಾನ್ ಇದ್ದಂಗೆ, ನನ್ನ ಬಳಿಯೇ ಹಣವನ್ನು ವಾಪಸ್ ಕೇಳ್ತಿಯಾ ಅಂತಾ ನವಾಜ್ ಬೆದರಿಕೆ ಹಾಕಿದ್ದನಂತೆ.

arasikere-rowdy-murder-case-accused-arrested
ಆರೋಪಿಗಳು ಹಾಗೂ ಕೊಲೆಗೀಡಾದ ರೌಡಿಶೀಟರ್

ಇದರಿಂದ ಬೇಸತ್ತ ಯಶವಂತ್ ತನ್ನ ಸ್ನೇಹಿತರೊಂದಿಗೆ ವಿಚಾರ ತಿಳಿಸಿ ಕೊಲೆಗೆ ಸಂಚು ರೂಪಿಸಿದ್ದರು. ಅದರಂತೆ ರಾಜಿ ಸಂಧಾನ ಮಾಡಿಕೊಳ್ಳೋಣ ಅಂತಾ ನವಾಜ್​ಗೆ ಫೋನ್ ಮಾಡಿ ಕಾರೆಹಳ್ಳಿ ಸಮೀಪದ ಸ್ಥಳವೊಂದಕ್ಕೆ ಕರೆಸಿಕೊಂಡು ಆತನ ಮೇಲೆ ಯಶವಂತ ಮತ್ತು ಆತನ ಸಹಚರರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ನಂತರ ಮೃತನ ಗುರುತು ತಿಳಿಯಬಾರದೆಂದು ಕಲ್ಲಿನಿಂದ ಮುಖ ಜಜ್ಜಿ ಸ್ಥಳದಿಂದ ಪರಾರಿಯಾಗಿದ್ದರು.

ಎರಡು ದಿನದ ಬಳಿಕ ಇಬ್ಬರು ಆರೋಪಿಗಳನ್ನು ಅರಸೀಕೆರೆ ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದು, ಇನ್ನುಳಿದ ನಾಲ್ವರನ್ನು ಶೀಘ್ರದಲ್ಲೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹೆಂಡತಿಗೆ ಕೊಡಲಿಯಿಂದ ಹೊಡೆದು ಸಾಯಿಸಿದೆ ಎಂದ್ಕೊಂಡು ಪೊಲೀಸರಿಗೆ ಶರಣಾದ.. ಆದರೆ, ಆಕೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.