ETV Bharat / state

ಅರಕಲಗೂಡು: MSIL ಮದ್ಯದಂಗಡಿ ತೆರೆಯದಂತೆ ಮಹಿಳೆಯರಿಂದ ಮನವಿ - ಅಧಿಕಾರಿಗಳು ಹಾಗು ಶಾಸಕರಿಗೆ ಸ್ಥಳೀಯ ಮಹಿಳೆಯರಿಂದ ಮನವಿ

ಮಲ್ಲಿ ಪಟ್ಟಣ ರಸ್ತೆಯಲ್ಲಿ ಖಾಸಗಿ ವ್ಯಕ್ತಿಗೆ ಸೇರಿದ ಮಳಿಗೆಯಲ್ಲಿ ಸರ್ಕಾರದ MSIL ಮದ್ಯದಂಗಡಿ ತೆರೆಯಲಾಗುತ್ತದೆ ಎಂಬ ಗಾಳಿ ಸುದ್ದಿಗೆ ಎಚ್ಚೆತ್ತ ವಾರ್ಡ್​ನ ಎಲ್ಲಾ ಮಹಿಳೆಯರು ತಾಲೂಕು ಅಬಕಾರಿ ಇಲಾಖೆ ಮತ್ತು ತಾಲೂಕು ಆಡಳಿತ ಹಾಗೂ ಸ್ಥಳೀಯ ಶಾಸಕರಿಗೆ ಮನವಿ ನೀಡುವ ಮುಖಾಂತರ MSIL ಮದ್ಯದಂಗಡಿ ಪ್ರಾರಂಭಿಸಲು ಅವಕಾಶ ನೀಡಬಾರದು ಎಂದು ಕೇಳಿಕೊಂಡರು.

Arakkalagudu women appeal not to open MSIL liquor store
ಅರಕಲಗೂಡು: MSIL ಮದ್ಯದಂಗಡಿ ತೆರೆಯದಂತೆ ಅಧಿಕಾರಿಗಳು ಹಾಗು ಶಾಸಕರಿಗೆ ಮಹಿಳೆಯರಿಂದ ಮನವಿ
author img

By

Published : Aug 26, 2020, 11:56 AM IST

ಅರಕಲಗೂಡು: ಪಟ್ಟಣದಲ್ಲಿ ಸರ್ಕಾರಿ ಮದ್ಯದಂಗಡಿ (MSIL) ತೆರೆಯದಂತೆ ಒತ್ತಾಯಿಸಿ ಸ್ಥಳೀಯ ಮಹಿಳೆಯರು ತಾಲೂಕು ಅಬಕಾರಿ ಇಲಾಖೆ ಅಬಕಾರಿ ನಿರೀಕ್ಷಕಿ ಚಂದನ ಮತ್ತು ತಹಶೀಲ್ದಾರ್ ಪಾರ್ಥಸಾರಥಿ ಹಾಗೂ ಶಾಸಕ ಎ.ಟಿ.ರಾಮಸ್ವಾಮಿಯವರಿಗೆ ಮನವಿ ಸಲ್ಲಿಸಿದರು.

ಅರಕಲಗೂಡು: MSIL ಮದ್ಯದಂಗಡಿ ತೆರೆಯದಂತೆ ಮಹಿಳೆಯರಿಂದ ಮನವಿ

ಪಟ್ಟಣದ ಎರಡನೇ ವಾರ್ಡ್​ನ ಮಲ್ಲಿ ಪಟ್ಟಣ ರಸ್ತೆಯಲ್ಲಿ ಖಾಸಗಿ ವ್ಯಕ್ತಿಗೆ ಸೇರಿದ ಮಳಿಗೆಯಲ್ಲಿ ಸರ್ಕಾರದ MSIL ಮದ್ಯದಂಗಡಿ ತೆರೆಯಲಾಗುತ್ತದೆ ಎಂಬ ಗಾಳಿ ಸುದ್ದಿಗೆ ಎಚ್ಚೆತ್ತ ವಾರ್ಡ್​ನ ಎಲ್ಲಾ ಮಹಿಳೆಯರು ತಾಲೂಕು ಅಬಕಾರಿ ಇಲಾಖೆ ಮತ್ತು ತಾಲೂಕು ಆಡಳಿತ ಹಾಗೂ ಸ್ಥಳೀಯ ಶಾಸಕರಿಗೆ ಮನವಿ ನೀಡುವ ಮುಖಾಂತರ MSIL ಮದ್ಯದಂಗಡಿ ಪ್ರಾರಂಭಿಸಲು ಅವಕಾಶ ನೀಡಬಾರದು ಎಂದು ಕೇಳಿಕೊಂಡರು.

ಮಲ್ಲಿ ಪಟ್ಟಣ ರಸ್ತೆಯಲ್ಲಿ ಈಗಾಗಲೇ ನಿವೇದಿತಾ ವಿದ್ಯಾ ಸಂಸ್ಥೆ ಹಾಗೂ ಕಂಚೀರಾಯ ಪ್ರೌಢ ಶಾಲೆ ಕಾರ್ಯ ನಡೆಸುತ್ತಿದ್ದು,‌ ರಸ್ತೆಗೆ ಹೊಂದಿಕೊಂಡಂತೆ ಪುರಾತನ ಇತಿಹಾಸವುಳ್ಳ ಕೋಟೆ ಕೊತ್ತಲು, ಗಣಪತಿ ದೇವಸ್ಥಾನ, ಅಮೃತೇಶ್ವರ ದೇವಸ್ಥಾನ ಹಾಗೂ ಲಕ್ಷ್ಮೀ ನರಸಿಂಹ ದೇವಾಲಯಗಳ ಜಾತ್ರೆ ಮತ್ತು ದಿನನಿತ್ಯ ಪೂಜಾ ಕೈಂಕರ್ಯ ನಡೆಯುತ್ತದೆ. ಈ ಸ್ಥಳಗಳಲ್ಲಿ ಮದ್ಯದಂಗಡಿ ತೆರೆಯುವುದು ಕಾನೂನು ಬಾಹಿರವೆಂದು ‌ವಾರ್ಡ್​ನ ಎಲ್ಲಾ ಮಹಿಳೆಯರು ಸಾರ್ವಜನಿಕವಾಗಿ ಪ್ರಶ್ನಿಸುತ್ತಿರುವುದು ಕಂಡು ಬಂತು.

ವಾರ್ಡ್​ನ ಪಟ್ಟಣ ಪಂಚಾಯತ್​ ಸದಸ್ಯೆ ಸುಮಿತ್ರಾ ಮಾತನಾಡಿ, ರಸ್ತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚು ಕಡು ಬಡವರು ವಾಸಿಸುತ್ತಿದ್ದು, ಇಂತಹ ಸ್ಥಳದಲ್ಲಿ MSIL ಮದ್ಯದ ಅಂಗಡಿ ಅಥವಾ ಅಕ್ರಮ ಚಟುವಟಿಕೆ ನಡೆಸುವ ಯಾವುದೇ ಮಳಿಗೆಗಳನ್ನು ತೆರೆಯಲು ಅವಕಾಶವನ್ನು ಸರ್ಕಾರ ಮತ್ತು ಅಧಿಕಾರಿಗಳು ನೀಡಬಾರದು ಎಂದರು. ‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.