ಅರಕಲಗೂಡು(ಹಾಸನ): ಇಂದು ರಾಮನಾಥಪುರ ಗ್ರಾಮ ಪಂಚಾಯತ್‌ನ ಆಡಳಿತ ಅಧಿಕಾರಿಗಳಾಗಿ ಅರಕಲಗೂಡು ತಾಲೂಕು ತಹಶೀಲ್ದಾರ್ ವೈ ಎಂ ರೇಣುಕುಮಾರ್ ಅಧಿಕಾರ ವಹಿಸಿಕೊಂಡರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಸ್ವಚ್ಛತೆ, ವಿದ್ಯುತ್ ಸಮಸ್ಯೆ ಬಗೆಹರಿಸಬೇಕು. ಅಷ್ಟೇ ಅಲ್ಲ, ಕಾಮಗಾರಿಗಳ ಅಪೂರ್ಣತೆ ಇದ್ದು, ಈ ನಿಟ್ಟಿನಲ್ಲಿ ತುರ್ತು ಕ್ರಮಕೈಗೊಳ್ಳುವಂತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಸೂಚಿಸಿದರು.
ಇದೇ ಸಂದರ್ಭ ನಿರ್ಗಮಿತ ಮಾಜಿ ಗ್ರಾಪಂ ಅಧ್ಯಕ್ಷರಾದ ಕಾಳೇಗೌಡ, ಪಿಡಿಒ ವಿಜಯಕುಮಾರ್, ರಾಜಸ್ವ ನಿರೀಕ್ಷಕರಾದ ಸಿ. ಸ್ವಾಮಿ, ತಾಲೂಕು ಕಚೇರಿಯ ಶಿರಸ್ತೇದಾರರಾದ ರಮೇಶ್. ಉಪತಹಶೀಲ್ದಾರರಾದ ಜಿ ಸಿ ಚಂದ್ರು, ಕಾರ್ಯದರ್ಶಿ ನಿಂಗಣ್ಣ ಗ್ರಾಮಲೆಕ್ಕಿಗರಾದ ಧರ್ಮೇಶ್ ಹಾಗೂ ಮಾಜಿ ಗ್ರಾಪಂ ಸದಸ್ಯ ದಿವಾಕರ್ ಹಾಜರಿದ್ದರು.