ಅರಕಲಗೂಡು: ತಾಲೂಕಿನ ಹೊನ್ನವಳ್ಳಿ ಸಾಲುಮರದ ತಿಮ್ಮಕ್ಕ ಉದ್ಯಾನಕ್ಕೆ ಹೊಂದಿಕೊಂಡಿರುವ ಸ.ನಂ 47ರ ಭೂಮಿಯನ್ನು ಖಾಸಗಿಯವರು ಅರಣ್ಯ ಒತ್ತುವರಿ ಮಾಡಿದ್ದರು. ಇವರನ್ನು ಮನವೊಲಿಸಿ 4 ಎಕರೆ ಭೂಮಿಯನ್ನು ಮಂಗಳವಾರ ತೆರವುಗೊಳಿಸಲಾಯಿತು.
ಸರ್ವೆ ನಂ. 47 ರಲ್ಲಿ ಸುಮಾರು 4 ಎಕರೆ ಒತ್ತುವರಿ ಮಾಡಲಾಗಿತ್ತು. ಈ ಜಮೀನಿನ ಬೆಲೆ ಈಗ ಎಕರೆಗೆ ಅಂದಾಜು 50 ಲಕ್ಷ ರೂ. ಇದೆ. ಒಟ್ಟು 2 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯವುಳ್ಳದ್ದಾಗಿದೆ ಎಂದು ಅಂದಾಜಿಸಲಾಗಿದೆ. ಈ ಜಾಗದಲ್ಲಿ ಖಾಸಗಿಯವರು ಬೇಸಾಯ ಮಾಡಿಕೊಂಡಿದ್ದರು. ಈ ಸಂಬಂಧ ನೋಟಿಸ್ ನೀಡಲಾಗಿತ್ತು. ಇದು ಅರಣ್ಯ ಇಲಾಖೆಯದು ಎಂದು ತಿಳಿದು ಬಂದ ಮೇಲೆ ಸ್ವಯಂ ಪ್ರೇರಿತರಾಗಿ ಜಾಗ ಬಿಟ್ಟುಕೊಡಲು ಒತ್ತುವರಿದಾರರು ಮುಂದಾದರು. ನಂತರ ಆ ಜಾಗದಲ್ಲಿ ಗುಂಡಿ ತೆಗೆದು ಮಿಶ್ರಜಾತಿಯ ಗಿಡಗಳನ್ನು ನೆಡಲಾಗಿದೆ.
ಸಾಮಾನ್ಯ ಅರಣ್ಯ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮಿ ನಾರಾಯಣ, ಗುರುಸ್ವಾಮಿ, ರಘು ಮತ್ತು ಇಲಾಖೆಯ ಸಿಬ್ಬಂದಿ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು ಎಂದು ವಲಯ ಅರಣ್ಯಾಧಿಕಾರಿ ಅರುಣ್ ತಿಳಿಸಿದ್ದಾರೆ.