ETV Bharat / state

ಸಕಲೇಶಪುರದಲ್ಲಿ ಜನೌಷಧಿ ಕೇಂದ್ರ ಪುನರಾರಂಭಿಸಲು ಮನವಿ - reopening of Janushadhi Center in Sakleshpur

ಕೆಲವು ಕಾರಣಗಳಿಂದಾಗಿ ಕಳೆದ 6 ತಿಂಗಳಿನಿಂದ ಈ ಕೇಂದ್ರವನ್ನು ಮುಚ್ಚಲಾಗಿದ್ದು, ಇದರಿಂದ ಬಡವರು ಹಾಗು ಮಧ್ಯಮ ವರ್ಗದವರು ದುಬಾರಿ ದರ ನೀಡಿ ಔಷಧಿ ಖರೀದಿಸಬೇಕಾಗಿದೆ. ಜನೌಷಧಿ ಕೇಂದ್ರವನ್ನು ಪುನರಾರಂಭಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಾನವ ಹಕ್ಕುಗಳ ರಕ್ಷಣಾ ಸಮಿತಿ ವತಿಯಿಂದ ಮನವಿ ಮಾಡಲಾಯಿತು.

ಜನೌಷಧಿ ಕೇಂದ್ರ ಪುನರಾರಂಭಿಸಲು ಮನವಿ
ಜನೌಷಧಿ ಕೇಂದ್ರ ಪುನರಾರಂಭಿಸಲು ಮನವಿ
author img

By

Published : Jul 29, 2020, 10:27 PM IST

ಸಕಲೇಶಪುರ: ಬಾಗಿಲು ಮುಚ್ಚಿರುವ ಜನೌಷಧಿ ಕೇಂದ್ರವನ್ನು ಪುನರಾರಂಭಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಾನವ ಹಕ್ಕುಗಳ ರಕ್ಷಣಾ ಸಮಿತಿ ವತಿಯಿಂದ ಮನವಿ ಮಾಡಲಾಯಿತು.

ಜನೌಷಧಿ ಕೇಂದ್ರ ಪುನರಾರಂಭಿಸಲು ಮನವಿ

ಪಟ್ಟಣದ ಉಪವಿಭಾಗಾಧಿಕಾರಿಗಳ ಕಚೇರಿಗೆ ಸಂಘಟನೆ ವತಿಯಿಂದ ಜನೌಷಧಿ ಕೇಂದ್ರ ಪುನರಾರಂಭಿಸಲು ಮನವಿ ನೀಡಿ, ನಂತರ ಮಾತನಾಡಿದ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಕಾನೂನು ಸಂಚಾಲಕ ಪ್ರದೀಪ್, ಕೇಂದ್ರ ಸರ್ಕಾರದ ಜನೌಷಧಿ ಯೋಜನೆಯಡಿ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಕೇಂದ್ರವನ್ನು ತೆರೆದು ಕಡಿಮೆ ದರದಲ್ಲಿ ಔಷಧಿಗಳನ್ನು ವಿತರಣೆ ಮಾಡಲಾಗುತ್ತಿತ್ತು. ಇದರಿಂದ ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ಬಹಳ ಅನುಕೂಲವಾಗುತ್ತಿತ್ತು. ಆದರೆ ಕೆಲ ಕಾರಣಗಳಿಂದ ಕಳೆದ 6 ತಿಂಗಳಿನಿಂದ ಈ ಕೇಂದ್ರವನ್ನು ಮುಚ್ಚಲಾಗಿದ್ದು, ಇದರಿಂದ ಬಡವರು ಹಾಗು ಮಧ್ಯಮ ವರ್ಗದವರು ದುಬಾರಿ ದರ ನೀಡಿ ಔಷಧಿ ಖರೀದಿಸಬೇಕಾಗಿದೆ ಎಂದರು.

ಜನಸಾಮಾನ್ಯರ ಅನುಕೂಲಕ್ಕಾಗಿ ಕೂಡಲೇ ಜನೌಷಧಿ ಕೇಂದ್ರವನ್ನು ತೆರೆಯಲು ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.