ETV Bharat / state

ಕೆರೆಕೋಡಿ ಸಮೀಪವೇ ಮತ್ತೊಂದು ಚೆಕ್​ ಡ್ಯಾಂ ನಿರ್ಮಾಣ : ರೈತರಲ್ಲಿ ಆತಂಕ - Bisalehalli -Chikkabommanahalli Lake

ಒಂದು ಕೋಡಿ ಇರುವಾಗಲೇ ಅದರ ಪಕ್ಕದಲ್ಲೇ ಇನ್ನೊಂದು ಚೆಕ್​ ಡ್ಯಾಂ ನಿರ್ಮಿಸುತ್ತಿರುವುದರಿಂದ ಕೆರೆಯ ಸುತ್ತಮುತ್ತಲಿನ ರೈತರ ಜಮೀನುಗಳು ಮುಳುಗಡೆಯಾಗುವ ಭೀತಿ ಎದುರಾಗಿದೆ..

Another check dam was built near Chikkabommanahalli Lake
ಕೆರೆಕೋಡಿ ಸಮೀಪವೇ ಮತ್ತೊಂದು ಚೆಕ್​ ಡ್ಯಾಂ ನಿರ್ಮಾಣ
author img

By

Published : Feb 20, 2021, 2:37 PM IST

ಅರಕಲಗೂಡು (ಹಾಸನ) : ತಾಲೂಕಿನ ಕೊಣನೂರು ಹೋಬಳಿ ಬಿಸಲೆಹಳ್ಳಿ-ಚಿಕ್ಕಬೊಮ್ಮನಹಳ್ಳಿ ಕೆರೆಕೋಡಿ ಸಮೀಪವೇ ಅವೈಜ್ಞಾನಿಕ ಕಾಮಗಾರಿಯೊಂದಕ್ಕೆ ಚಾಲನೆ ನೀಡಿದ್ದು, ಇದರಿಂದ ಕೆರೆಯ ಸುತ್ತಮುತ್ತಲಿನ ರೈತರ ಜಮೀನು ನೀರಿನಲ್ಲಿ ಮುಳುಗಡೆಯಾಗುವ ಭೀತಿ ಎದುರಾಗಿದೆ.

ಕೆರೆಕೋಡಿ ಸಮೀಪವೇ ಮತ್ತೊಂದು ಚೆಕ್​ ಡ್ಯಾಂ ನಿರ್ಮಾಣ..

ಶಿವಮೊಗ್ಗ ಮಲೆನಾಡು ಅಭಿವೃದ್ದಿ ಮಂಡಳಿ ಅಡಿ ಬರುವ ಹಾಸನ ಜಿಲ್ಲಾ ಪಂಚಾಯತ್ ಇಂಜಿನಿಯರ್​ಗಳು ಬಿಸಲೆಹಳ್ಳಿ-ಚಿಕ್ಕಬೊಮ್ಮನಹಳ್ಳಿ ಕೆರೆ ಮೇಲೆಯೇ ಅವೈಜ್ಞಾನಿಕವಾಗಿ ಡಾಂಬರು ರಸ್ತೆ ಹಾಗೂ 200 ಮೀಟರ್ ಅಂತರದಲ್ಲಿ ಚೆಕ್ ಡ್ಯಾಂ ನಿರ್ಮಿಸಲು ಮುಂದಾಗಿದ್ದಾರೆ. ಅಕಸ್ಮಾತ್​ ಈ ರಸ್ತೆ ಕುಸಿದರೆ ಕೆರೆಕೋಡಿ ಒಡೆಯುವ ವಾತಾವರಣ ಸೃಷ್ಟಿಯಾಗಿದೆ ಎಂದು ರೈತರು ಆರೋಪಿಸಿದ್ದಾರೆ.

ಈ ಕೆರೆ ತುಂಬಿದ ಬಳಿಕ ನೀರು ಹರಿದು ಹೋಗಲು ಈಗಾಗಲೇ ಕೋಡಿ ನಿರ್ಮಿಸಲಾಗಿದೆ. ಈ ಕೆರೆ ಮೇಲೆಯೇ ಅವೈಜ್ಞಾನಿಕವಾಗಿ ಡಾಂಬರು ರಸ್ತೆ ನಿರ್ಮಿಸಿ 200 ಮೀಟರ್ ಅಂತರದಲ್ಲೇ 5 ಲಕ್ಷ ವೆಚ್ಚದಲ್ಲಿ ಇನ್ನೊಂದು ಚೆಕ್ ಡ್ಯಾಂ ನಿರ್ಮಿಸಲು ಇಂಜಿನಿಯರ್​ಗಳು ಕೈ ಹಾಕಿದ್ದಾರೆ.

ಒಂದು ಕೋಡಿ ಇರುವಾಗಲೇ ಅದರ ಪಕ್ಕದಲ್ಲೇ ಇನ್ನೊಂದು ಚೆಕ್​ ಡ್ಯಾಂ ನಿರ್ಮಿಸುತ್ತಿರುವುದರಿಂದ ಕೆರೆಯ ಸುತ್ತಮುತ್ತಲಿನ ರೈತರ ಜಮೀನುಗಳು ಮುಳುಗಡೆಯಾಗುವ ಭೀತಿ ಎದುರಾಗಿದೆ.

ಓದಿ: ಹೆಚ್​ ವಿಶ್ವನಾಥ್​ ವಿರುದ್ಧ ಗುಡುಗಿದ ಬಿ.ವೈ.ವಿಜಯೇಂದ್ರ

ಚಿಕ್ಕಬೊಮ್ಮನಹಳ್ಳಿ ಕೆರೆಗೆ ಇನ್ನೊಂದು ಚೆಕ್ ಡ್ಯಾಂ ನಿರ್ಮಿಸುವ ಅವಶ್ಯಕತೆಯೇ ಇಲ್ಲ. ಆದರೆ, ಅಧಿಕಾರಿಗಳು ಈ ಕೆರೆ ಅರಕಲಗೂಡು ಶಾಸಕ ಎ ಟಿ ರಾಮಸ್ವಾಮಿ ಅವರ ಜಮೀನಿನ ಪಕ್ಕದಲ್ಲೇ ಇದೆ.

ಚೆಕ್​ ಡ್ಯಾಂ ನಿನರ್ಮಿಸಿದರೆ ಅವರ ಜಮೀನುಗಳಿಗೆ ಅನುಕೂವಾಗಲಿದೆ ಎಂಬ ಕಾರಣಕ್ಕೆ ಈ ಕಾಮಗಾರಿ ನಡೆಸುತ್ತಿದ್ದಾರೆಂದು ರೈತರು ಆರೋಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.