ETV Bharat / state

ಶ್ರವಣಬೆಳಗೊಳದ ಜೈನ ಮಠಕ್ಕೆ ಆಗಮಕೀರ್ತಿ ಭಟ್ಟಾರಕ ನೂತನ ಪೀಠಾಧ್ಯಕ್ಷ.. ಭಂಡಾರ ಬಸದಿಯಲ್ಲಿ ಪಟ್ಟಾಭಿಷೇಕ

ಶ್ರವಣಬೆಳಗೊಳದ ಜೈನ ಮಠದ ನೂತನ ಪೀಠಾಧ್ಯಕ್ಷರಾಗಿ ಆಗಮಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಗೆ ಇಂದು ಪಟ್ಟಾಭಿಷೇಕ ಮಾಡಲಾಯಿತು.

agama keerthi bhattaraka
ಆಗಮಕೀರ್ತಿ ಭಟ್ಟಾರಕ ಸ್ವಾಮೀಜಿ
author img

By

Published : Mar 27, 2023, 3:04 PM IST

Updated : Mar 27, 2023, 6:03 PM IST

ಭಂಡಾರ ಬಸದಿಯಲ್ಲಿ ಪಟ್ಟಾಭಿಷೇಕ

ಹಾಸನ: ದಕ್ಷಿಣ ಜೈನ ಕಾಶಿ ಎಂದೇ ಕರೆಯಲ್ಪಡುವ ಶ್ರವಣಬೆಳಗೊಳದ ದಿಗಂಬರ ಜೈನ ಮಠದ ಪೀಠಾಧ್ಯಕ್ಷರಾಗಿ ಆಗಮಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಇಂದು ಪೀಠಾರೋಹಣ ಮಾಡಿದರು.

ಜಿನೈಕ್ಯ ಶ್ರೀ ಕರ್ಮಯೋಗಿ ಸ್ವಸ್ತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಂದ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದ ಶಿವಮೊಗ್ಗ ಜಿಲ್ಲೆಯ ಸಾಗರದ ಆಗಮ ಇಂದ್ರ ಅವರು ಇಂದು ಆಗಮಕೀರ್ತಿಯಾಗಿ ಪಟ್ಟಾಭಿಷೇಕ ಮಹೋತ್ಸವ ನೆರವೇರಿಸಿಕೊಳ್ಳುವ ಮೂಲಕ ಶ್ರವಣಬೆಳಗೊಳದ ಜೈನ ಮಠದ ಪೀಠಾಧ್ಯಕ್ಷರಾಗಿ ಪಟ್ಟ ಅಲಂಕಾರ ಮಾಡಿದ್ರು.

ನಾಲ್ಕು ತಿಂಗಳ ಹಿಂದೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಆಗಮ ಇಂದ್ರ ಇವರಿಗೆ ಕ್ಷುಲ್ಲಕ ದೀಕ್ಷೆ ನೀಡುವ ಮೂಲಕ ಆಗಮಕೀರ್ತಿ ಎಂದು ನಾಮಕರಣ ಮಾಡಿದ್ರು. ತಮ್ಮ ಮಠದಲ್ಲಿಯೇ ಅವರಿಗೆ ಆಶ್ರಯ ನೀಡಿ ಮಠದ ಪರಂಪರೆ ಸಂಸ್ಕಾರ ಕ್ಷೇತ್ರದ ಪರಿಚಯ ಮಾಡಿಸಿದ್ದರು. ಆದರೆ, ಅಕಾಲಿಕ ಮರಣಕ್ಕೆ ಒಳಗಾದ ಭಟ್ಟಾರಕ ಸ್ವಾಮೀಜಿಯವರ ಉತ್ತರ ಅಧಿಕಾರಿಯಾಗಿದ್ದ ಆಗಮಕೀರ್ತಿ ಸ್ವಾಮೀಜಿ ಅವರಿಗೆ ಇಂದು ಜೈನ ಮಠದ ಮತ್ತು ವಿವಿಧ ಭಟ್ಟಾರಕ ಸ್ವಾಮೀಜಿಗಳ ನೇತೃತ್ವದಲ್ಲಿ ಪಟ್ಟಾಭಿಷೇಕ ಮಹೋತ್ಸವ ಬಹಳ ವಿಜೃಂಭಣೆಯಿಂದ ನೆರವೇರಿತು.

ಇದನ್ನೂ ಓದಿ: ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಸ್ತಂಗತ; ಸಿಎಂ, ಗಣ್ಯರ ಸಂತಾಪ

ಆಗಮ ಶ್ರೀಗಳ ಪರಿಚಯ: ಇವರು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಅಶೋಕ್ ಕುಮಾರ್ ಇಂದಿರಾ ಮತ್ತು ಅನಿತಾ ಅಶೋಕ್ ಕುಮಾರ್ ದಂಪತಿಗಳ ಪುತ್ರ. 26-2-2001ನೇ ಇಸವಿಯಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನ ಸಾಗರ ಪಟ್ಟಣದ ರೋಟರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಎಂಜೆಎನ್ ಪೈ ಪ್ರೌಢಶಾಲೆಯಲ್ಲಿ ಮತ್ತು ಪದವಿಪೂರ್ವ ಶಿಕ್ಷಣವನ್ನು ಎಸ್‌ಡಿಎಂ ಪಿಯು ಕಾಲೇಜ್ ಉಜಿರೆಯಲ್ಲಿ, ಪದವಿ ಶಿಕ್ಷಣವನ್ನು ಎಲ್​ಬಿ ಮತ್ತು ಎಸ್ ಬಿ ಎಸ್ ಕಾಲೇಜು ಸಾಗರದಲ್ಲಿ ಪಡೆದಿದ್ದಾರೆ. ಗಣಕಯಂತ್ರ ತರಬೇತಿಯನ್ನು ಪಡೆದಿರುವ ಇವರು ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನು ಸುಲಲಿತವಾಗಿ ಮಾತನಾಡುತ್ತಾರೆ.

agama keerthi bhattaraka
ಆಗಮಕೀರ್ತಿ ಭಟ್ಟಾರಕ ಸ್ವಾಮೀಜಿ ಪೀಠಾರೋಹಣ

ಇದನ್ನೂ ಓದಿ : ವಿರಾಟ್‌ ವಿರಾಗಿಯ ಮಹಾಮಸ್ತಕಾಭಿಷೇಕದ ರೂವಾರಿ; ಸರಳ ಸಜ್ಜನಿಕೆಯ ಕರ್ಮಯೋಗಿ

ಇವರ ತಂದೆ ಮೋಹನ್ ಕುಮಾರ್ ಅವರು ಪ್ರತಿಷ್ಠಾಚಾರ್ಯ ಕಾರ್ಯ ಮಾಡುತ್ತಿದ್ದು, ಇವರ ಜೊತೆ ಆರಾಧನೆ ಇನ್ನಿತರೆ ಕಾರ್ಯಗಳಲ್ಲಿ ಭಾಗವಹಿಸಿ, ಧರ್ಮಪ್ರಚಾರದಲ್ಲೂ ಮುಂಚೂಣಿ ಪಾತ್ರ ವಹಿಸಿದ್ದಾರೆ. ಶ್ರವಣಬೆಳಗೊಳದ ಕರ್ಮಯೋಗಿ ಜಗದ್ಗುರು ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ನಿಧನರಾದ ಬಳಿಕ, ಇವರನ್ನೇ ಉತ್ತರಾಧಿಕಾರಿಯಾಗಿ ಮಾಡಬೇಕೆಂದು ಸ್ವಾಮೀಜಿ ಇಚ್ಛಾ ಮರಣ ಪತ್ರದಲ್ಲಿ ಬರೆದಿದ್ದರು.

ಜೈನ ಮಠದ ಕಾರ್ಯಕಾರಿ ಸಮಿತಿ ತೀರ್ಮಾನದ ಪ್ರಕಾರ ರೋಹಿಣಿ ನಕ್ಷತ್ರದಲ್ಲಿ ಅಂದರೆ ಇಂದು (ಮಾ. 27, 2023) ರಂದು ಶ್ರವಣಬೆಳಗೊಳದ ಭಂಡಾರ ಬಸದಿಯಲ್ಲಿ ಪಟ್ಟಾಭಿಷೇಕ ಮಹೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.

ಇದನ್ನೂ ಓದಿ : ಪ್ರತಿಯೊಬ್ಬರೂ ಆತ್ಮಕಲ್ಯಾಣ ಮಾಡಿಕೊಂಡು ಧರ್ಮ ಸೇವೆ ಮಾಡಬೇಕು: ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

Last Updated : Mar 27, 2023, 6:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.