ETV Bharat / state

ಆ ಹಣ ನಮ್ಮ ಮನೆಗೆ ಹೋಗಿದೆ ಅನ್ನೋಕೆ ಅವನಿಗೆ ತಾಕತ್​ ಇಲ್ಲ: ರೇವಣ್ಣನ ಆರೋಪಕ್ಕೆ ಎ.ಮಂಜು ತಿರುಗೇಟು - A Manju

ದಿನ ಕಳೆದರೆ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಈ ನಡುವೆ ಲೋಕೋಪಯೋಗಿ ಸಚಿವ ಹೆಚ್‌.ಡಿ ರೇವಣ್ಣ ಅವರ ಹೇಳಿಕೆಗೆ ಬಿಜೆಪಿ ಅಭ್ಯರ್ಥಿ ಎ.ಮಂಜು ತಾಕತ್ತಿನ ಪ್ರಶ್ನೆಯೊಂದನ್ನು ಹಾಕಿದ್ದಾರೆ.

ಬಿಜೆಪಿ ಅಭ್ಯರ್ಥಿ ಎ ಮಂಜು
author img

By

Published : Apr 17, 2019, 12:54 PM IST

ಹಾಸನ: ಐಟಿ ಕೇಂದ್ರ ಸರ್ಕಾರದ ಕೈಗೊಂಬೆ ಅಲ್ಲ. ಮಂತ್ರಿಯಾಗಿದ್ದುಕೊಂಡು ಅಂತಹ ಸಂಸ್ಥೆ ಬಗ್ಗೆ ಆ ರೀತಿ ಮಾತನಾಡಬಾರದು ಎಂದು ಲೋಕೋಪಯೋಗಿ ಸಚಿವ ಹೆಚ್‌.ಡಿ ರೇವಣ್ಣನ ಆರೋಪಕ್ಕೆ ಬಿಜೆಪಿ ಅಭ್ಯರ್ಥಿ ಎ.ಮಂಜು ತಿರುಗೇಟು ನೀಡಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಐಟಿ ಇಲಾಖೆಯು ಬಿಜೆಪಿಯ ಕೈಗೊಂಬೆ ಎಂದಿರುವ ರೇವಣ್ಣ ಅವರ ಹೇಳಿಕೆ ಸರಿಯಲ್ಲ.‌ ಇದು ಒಂದು ದಿನದ ಕಾರ್ಯಾಚರಣೆ ಅಲ್ಲ.‌ ಅವರಿಗೆ ಸರ್ವ ಸ್ವಾತಂತ್ರ್ಯವಿದೆ. ರೇವಣ್ಣ ಹತಾಶೆಯಿಂದ ಹೀಗೆಲ್ಲ ಮಾತಾಡುತ್ತಿದ್ದಾರೆ. ಒಂದು ವೇಳೆ ಐಟಿ ದುರುಪಯೋಗಪಡಿಸಿಕೊಂಡಿದ್ದರೆ ಒಬ್ಬ ಜವಾಬ್ದಾರಿ ಸ್ಥಾನದಲ್ಲಿ ಇದ್ದುಕೊಂಡು ಸಿಬಿಐ ತನಿಖೆ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಿ ಎಂದು ಸವಾಲು ಹಾಕಿದರು. ‌

ಪಿಡಬ್ಲ್ಯೂಡಿ ಸಚಿವ ಹೆಚ್‌.ಡಿ ರೇವಣ್ಣ ಆರೋಪಕ್ಕೆ ಬಿಜೆಪಿ ಅಭ್ಯರ್ಥಿ ಎ. ಮಂಜು ತಿರುಗೇಟು

ರೇವಣ್ಣನವರ ಬೆಂಗಾವಲು ವಾಹನದಲ್ಲಿ ಹಣ ಸಿಕ್ಕಿದೆ. ಮೊದಲಿಂದಲೂ ಇವರು ಹೀಗೆ ಮಾಡುತ್ತಿದ್ದಾರೆ. ಅಧಿಕಾರಿಗಳ ಮೂಲಕ ಚುನಾವಣೆ ನಡೆಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಹಿಂದಿನಿಂದಲೂ ಡೈರಿ ಮೇಲ್ವಿಚಾರಕರಿಂದ ಹಣ ಹಂಚುತ್ತಿರುವುದು ಗೊತ್ತಿರುವ ವಿಚಾರ ಎಂದು ಆರೋಪಿಸಿದರು.

ರಿಂಗ್​​ ರಸ್ತೆಯಲ್ಲಿ ಹಣ ನಮ್ಮ ಮನೆಗೆ ಹೋಗಿದೆ ಅಂತಾ ಹೇಳುವುದಕ್ಕೆ ಅವನಿಗೆ ಪಾಪ ಹೆದರಿಕೆ. ನಮ್ಮ ಮನೆಗೆ ಹೋಗಿದೆ ಅನ್ನೋಕೆ ತಾಕತ್​ ಬೇಕಲ್ಲಾ ಎಂದು ಕಿಚಾಯಿಸಿದ ಎ.ಮಂಜು, ಇಲ್ಲಿ ಅವರ ಪೊಲೀಸರೇ ಇದ್ದಾರೆ. ಉದ್ದೇಶ ಪೂರ್ವಕವಾಗಿ ಈ ರೀತಿ ಆರೋಪ ಮಾಡುತ್ತಿದ್ದಾರೆ. ಈ ಬಾರಿ ಎಷ್ಟೇ ಹಣ ಹಂಚಿದರೂ ಜಿಲ್ಲೆಯಲ್ಲಿ ಬದಲಾವಣೆ ಆಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಚನ್ನರಾಯಪಟ್ಟಣದಲ್ಲಿ ಸಿಕ್ಕಿರುವ ಹಣ ನಿಮಗೆ ಸೇರಿದೆ ಎಂಬ ಆರೋಪಕ್ಕೆ ಪ್ರತಿಕ್ರಿಸಿದ ಅವರು, ಹಣ ಯಾರದ್ದೇ ಆಗಿರಲಿ, ಮೊದಲು ದೂರು ದಾಖಲಿಸಲಿ. ಇದರಲ್ಲಿ ತಾರತಮ್ಯ ಬೇಡ ಎಂದರು. ಇದೇ ವೇಳೆ ವಿಡಿಯೋ ಬಿಡುಗಡೆ ಬಗ್ಗೆ ಪ್ರಸ್ತಾಪ ಮಾಡಿದ ಎ.ಮಂಜು, ಸಮಯ ಬಂದಾಯ ಆ ವಿಡಿಯೋವನ್ನು ಬಿಡುಗಡೆ ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Intro:ಸಿಬಿಐ ತನಿಖೆಗೆ ರೇವಣ್ಣ ಪತ್ರ ಬರೆಲಿ: ಎ.ಮಂಜು

ಹಾಸನ: ಐಟಿ ಕೇಂದ್ರ ಸರ್ಕಾರದ ಕೈಗೊಂಬೆ ಅಲ್ಲ. ಮಂತ್ರಿಯಾಗಿದ್ದುಕೊಂಡು ಸಂಸ್ಥೆ ಬಗ್ಗೆ ಆ ರೀತಿ ಮಾತನಾಡಬಾರದು ಎಂದು ಸಚಿವ ರೇವಣ್ಣನ ಆರೋಪಕ್ಕೆ ಎ.ಮಂಜು ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಐಟಿ ಅವರು ಬಿಜೆಪಿ ಕೈ ಗೊಂಬೆ ಎಂದಿರುವ ರೇವಣ್ಣ ಅವರ ಹೇಳಿಕೆ ಸರಿಯಲ್ಲ.‌ಇದು ಒಂದು ದಿನದ ಕಾರ್ಯಚರಣೆ ಅಲ್ಲ.‌ ಅವರಿಗೆ ಸರ್ವ ಸ್ವಾತಂತ್ರ್ಯವಿದೆ. ಹತಾಶೆಯಿಂದ ಹೀಗೆಲ್ಲ ಮಾತಾಡ್ತಿದಾರೆ. ಒಂದು ವೇಳೆ ಐಟಿ ದುರುಪಯೋಗಪಡಿಸಿಕೊಂಡಿದ್ದರೆ ಒಬ್ಬ ಜವಾಬ್ದಾರಿ ಸ್ಥಾನದಲ್ಲಿ ಇದ್ದುಕೊಂಡು ಸಿಬಿಐ ತನಿಖೆ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಿ ಎಂದು ಟಾಂಗ್ ನೀಡಿದರು.‌
ರೇವಣ್ಣ ತಮ್ಮ ಬೆಂಗಾವಲು ವಾಹನದಲ್ಲಿ ಹಣ ಸಿಕ್ಕಿದೆ.ಮೊದಲಿಂದಲೂ ಇವರು ಹೀಗೆ ಮಾಡ್ತಿದ್ದಾರೆ.ಅಧಿಕಾರಿಗಳ ಮೂಲಕ ಚುನಾವಣೆ ನಡೆಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಹಿಂದಿನಿಂದಲೂ ಡೇರಿಯ ಮೇಲ್ವಿಚಾರರಿಂದ ಹಣ ಹಂಚುತ್ತಿರುವುದು ಗೊತ್ತಿರುವ ವಿಚಾರ ಎಂದು ಆರೋಪಿಸಿದರು.
ರಿಂಗ್ ರಸ್ತೆಯಲ್ಲಿ ಹಣ ನಮ್ಮ‌ ಮನೆಗೆ ಹೋಗಿದೆ ಅಂತ ಹೇಳೊಕೆ ಅವನಿಗೆ ಪಾಪ ಹೆದರಿಕೆ.ಮಂಜು ಮನೆಗೆ ಹೋಗಿದೆ ಅನ್ನೋಕೆ ತಾಕತ್ ಬೇಕಲ್ಲ.  ಪೊಲೀಸರು ಅವರದ್ದೆ ಇದ್ದಾರೆ.ಚುನಾವಣೆ ಗಿಮಿಕ್ ಗೆ ಉದ್ದೇಶ ಪೂರ್ವಕವಾಗಿ ಈ ರೀತಿ ಆರೋಪ ಮಾಡುತ್ತಿದ್ದಾರೆ. ಈ ಬಾರಿ ಎಷ್ಟೇ ಹಣ ಹಂಚಿದರೂ ಜಿಲ್ಲೆಯಲ್ಲಿ ಬದಲಾವಣೆ ಆಗುತ್ತೆ. ಇನ್ನು ಚನ್ನರಾಯಪಟ್ಟಣದಲ್ಲಿ ಸಿಕ್ಕಿರುವ ಹಣ ನಿಮಗೆ ಸೇರಿದೆ ಎಂಬ ಆರೋಪಕ್ಕೆ ಪ್ರತಿಕ್ರಿಸಿ, ಹಣ ಯಾರದ್ದೆ ಸಿಕ್ಕರೊ ಪ್ರಕರಣ ದಾಖಲಿಸಲಿ. ಇದರಲ್ಲಿ ತಾರತಮ್ಯ ಬೇಡ ಎಂದರು.
ವೀಡಿಯೋ ರಿಲೀಜ್ ‌ಮಾಡಿದ್ರೆ, ರೇವಣ್ಣನನ್ನು   ಅವರ ಮನೆಯಿಂದ ಬಿಡಿಸಿ ಬಿಡ್ತಾರೆ. ಇದೀಗ ಬೇಡ ಬಿಡಿ.ಸಮಯ ಬಂದಾಯ ಬಿಡ್ತಿನಿ. ಇಡೀ ಜಗತ್ತಲ್ಲಿ  ದೇವೇಗೌಡ್ರಿಗೆ ಹೆಚ್ಚು ತೊಂದರೆನಾ ನಾವು ಕೊಟ್ಟಿದ್ದೇವಾ ಅಥವಾ ರೇವಣ್ಣ ಅವರ ಸೊಸೆ ಕೊಟ್ಟಿದ್ದಾರಾ ಹೇಳಲಿ ನೋಡೊಣ ಎಂದರು.‌
ಕೊಲೆಯಾಗಿರುವ ಬಸವಾಪಟ್ಟಣ ಎಂಜಿನಿಯರ್ ನಮ್ಮ ಕ್ಷೇತ್ರಕ್ಕೆ ಬರುವುದರಿಂದಲೇ ನಾನು ಕೇಳಿದ್ದು.
ಆ ವಿಷಯ ಇದೀಗ ಬೇಡ ಇದು ಚುನಾವಣೆ ಸಮಯ ಎಂದರು.
ಈ ಚುನಾವಣೆಯಲ್ಲಿ 1999 ರ ಸಮಯ ಮರುಕಳಿಸುತ್ತೆ. ಅವರು ಹೊಳೆನರಸೀಪುರ ಮತ್ತು  ಚನ್ನರಾಯಪಟ್ಟಣದಲ್ಲಿ ಅಧಿಕ ಮತಗಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ.ನಾನು ಈಗಾಗಲೇ ಆ ಭಾಗದಲ್ಲಿ ಪಂಚಾಯಿತಿ ವ್ಯಾಪ್ತಿ ಸಂಚರಿಸಿದ್ದೇನೆ  ಎಂದರು.
ಪ್ರಧಾನಿ ಮೋದಿ ಅವರು 3680 ಕೋಟಿಯನ್ನು  ಅಂಬೇಡ್ಕರ್ ಜನ್ಮಸ್ಥಳ, ನಾಗಪುರ, ಇಂಗ್ಲೇಂಡಿನ  ವಿದ್ಯಾಭ್ಯಾಸ ಪೊರೈಸಿದ ಜಾಗಕ್ಕೆ ಕೊಡುಗೆ ನೀಡಿದ್ದಾರೆ.‌ಧ್ವನಿ ಇಲ್ಲದ ಸಮುದಾಯಕ್ಕೆ ಧ್ವನಿಯಾಗಿದ್ದಾರೆ ಎಂದು ಹೇಳಿದರು‌.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಭಾರತ.

Body:0

Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.