ETV Bharat / state

ಹಾಸನದಲ್ಲಿ ನಡೆಯಿತು ವಿಶೇಷ ಮದುವೆ ನಿಶ್ಚತಾರ್ಥ...! - ಚಾಮರಾಜನಗರ ಜಿಲ್ಲೆ ರಾಮನಾಥಪುರ ಗ್ರಾಮ

ಹಾಸನ ಜಿಲ್ಲೆಯಲ್ಲೊಂದು ವಿಶೇಷ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಿತು. ವಿದ್ಯಾವಂತ ಆದರೆ ಮಾತು ಬಾರದ ಜೋಡಿಯಂದು ಸಾಂಸಾರಿಕ ಜೀವನಕ್ಕೆ ಮುನ್ನುಡಿ ಬರೆಯಿತು.

ಹಾಸನದಲ್ಲಿ ನಡೆಯಿತು ವಿಶೇಷ ಮದುವೆ ನಿಶ್ಚತಾರ್ಥ...!
author img

By

Published : Oct 11, 2019, 5:05 AM IST

ಹಾಸನ: ಅವರಿಬ್ಬರು ಸ್ಪುರದ್ರೂಪಿ ಯುವಕ ಯುವತಿ, ಇಬ್ಬರು ಉನ್ನತ ವ್ಯಾಸಂಗ ಮಾಡಿದ್ದಾರೆ. ಆದರೆ ಇಬ್ಬರಿಗೂ ಕೊರತೆಯೊಂದಿತ್ತು. ಅದೇ ಮಾತು... ಹೌದು, ಮಾತು ಬಾರದ ಮೂಕ ಜೋಡಿಯೊಂದು ವಿವಾಹ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಹೊಸ ಬಾಳು ನಡೆಸಲು ಸಜ್ಜಾಗಿದ್ದಾರೆ.

ಹಾಸನದಲ್ಲಿ ನಡೆಯಿತು ವಿಶೇಷ ಮದುವೆ ನಿಶ್ಚತಾರ್ಥ...!

ಹೊಳೆನರಸೀಪುರ ತಾಲೂಕಿನ ಕೆರಗೋಡು ಗ್ರಾಮದ ಕೃಷ್ಣೇಗೌಡರ ಪುತ್ರಿ ಸುಪ್ರಿಯಾ, ಬಿ.ಕಾಂ ಪದವಿಧರೆಯಾಗಿದ್ದು, ವಯಸ್ಸಿಗೆ ಬಂದ ಮಗಳನ್ನು ಮದುವೆ ಮಾಡಿಕೊಡಲು ಪೋಷಕರು ಸಿದ್ಧತೆ ನಡೆಸಿದ್ದರು. ಆದರೆ ಮಾತು ಬಾರದ ಕಾರಣ ಈಕೆ ಮದುವೆಗೆ ಒಪ್ಪಿರಲಿಲ್ಲ. ತಮಗಿರುವ ಸಮಸ್ಯೆ ಬೇರೆಯವರಿಗೆ ಹೊರೆಯಾಗಬಾರದು ಎಂಬುದು ಇದಕ್ಕೆ ಕಾರಣ. ಕೊನೆಗೆ ಪೋಷಕರ ಒತ್ತಾಯಕ್ಕೆ ಮಣಿದು ಕಂಡೀಷನ್​ ಹಾಕಿ ವಿವಾಹಕ್ಕೆ ಸಜ್ಜಾದರು ಸುಪ್ರಿಯಾ.

ಬಳಿಕ ಮ್ಯಾಟ್ರಿಮೊನಿಯಲ್ಲಿ ರಿಜಿಸ್ಟ್ರೆಡ್​ ಮಾಡಿಕೊಂಡ ಇವರಿಗೆ ತಮ್ಮಂತೇ ಮಾತು ಬಾರದ ಹುಡುಗ ಸಿಕ್ಕಿದ್ದಾನೆ. ಚಾಮರಾಜನಗರ ಜಿಲ್ಲೆ ರಾಮನಾಥಪುರ ಗ್ರಾಮ ನಿವಾಸಿ ಪ್ರಜ್ವಲ್​ ಎಂಬಾತ ಬಿ.ಟೆಕ್​ ಪದವಿಧರನಾಗಿದ್ದು ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾನೆ. ಈತನಿಗೂ ಮಾತು ಬಾರದು. ಹೀಗಾಗಿ ಇಬ್ಬರು ಪರಸ್ಪರ ಒಪ್ಪಿಕೊಂಡು ಬಾಳೋದಿಕೆ ಸಿದ್ಧವಾಗಿದ್ದು, ಹೊಳೆನರಸೀಪುರ ಪಟ್ಟಣದ ಪಿಆರ್ ಕಲ್ಯಾಣ ಮಂಟಪದಲ್ಲಿ ಇಬ್ಬರ ಮದುವೆಗೆ ಮುನ್ನುಡಿ ಇಟ್ಟಿದ್ದಾರೆ.

Intro:ಹಾಸನ: ಅವರಿಬ್ಬರು ಸುರದ್ರೂಪಿ ಯುವಕ ಯುವತಿ. ಯುವತಿ ಬೀಕಾಂ ಪಧವಿದರೇಯಾಗಿದ್ದರೆ ಯುವಕ ಬಿಟೆಕ್ ಮಾಡಿ ಖಾಸಾಗಿ ಕಂಪೆನಿಯಲ್ಲಿ ಉದ್ಯೋಗ. ಆದ್ರೆ ಇಬ್ಬರಿಗೂ ಆ ದೇವರು ಒಂದನ್ನು ಮಾತ್ರ ಕೊರತೆ ಮಾಡಿದ್ದಾನೆ. ಅದೇನಪ್ಪಾ ಅಂದ್ರೆ ಇಬ್ಬರಿಗೂ ಕೂಡ ಹುಟ್ಟಿನಿಂದ ಮಾತು ಬರೋಲ್ಲ, ಅವರಿಬ್ಬರು ಇಂದು ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಬಾಳ ಸಂಗಾತಿಗಳಾಗಲು ಮುಂದಾಗಿದ್ದಾರೆ.
ವಯಸ್ಸಿಗೆ ಬಂದು ಮದುವೆ ಮಾಡಿಕೊಲ್ಲೊದಿಕ್ಕೆ ಪೋಷಕರು ಒತ್ತಾಯ. ಆದ್ರೆ ಇಬ್ಬರೂ ಕೂಡ ಸುತಾರಾಂ ಒಪ್ಪಲಿಲ್ಲ. ತಮಗಿರುವ ಸಮಸ್ಯೆಗಳನ್ನು ಬೇರೇಯವರ ಮೇಲೆ ಹೇರಬಾರದು ಎನ್ನುವ ದೃಷ್ಟಿಯಿಂದ ಮದುವೆ ಆಗೋದಿಕ್ಕೆ ಒಪ್ಪಲೇ ಇಲ್ಲ. ಪೋಷಕರಿಗೂ ಇವರಿಬ್ಬರದ್ದೆ ಚಿಂತೆ ಕಾಡುತಿತ್ತು. ವಯಸ್ಸಿಗೆ ಬಂದ ಮಕ್ಕಳಿಬ್ಬರು ವೆಲ್ ಎಜುಕೇಡೆಡ್ .ಯಾವುದರಲ್ಲಿಯೂ ಕಡಿಮೆ ಇರಲಿಲ್ಲ. ಆದ್ರೆ ದೇವರುನೀಡಿದ ಈ ಮೂಗತನ ಇಬ್ಬರಿಗೂ ಮದುವೆ ಎಂದರೆ ಬೇಡ ಎನ್ನವಂತೆ ಮಾಡಿತ್ತು. ಕೊನೆಗೂ ಪೋಷಕರ ಒತ್ತಾಯ ಮತ್ತು ಒತ್ತಡಕ್ಕೆ ಮಣಿದು ಕೊನೆಗೂ ಕಂಡೀಷನ್ ಹಾಕಿದ್ರು
ನಮ್ಮಂತೆಯೆ ಸಮಸ್ಯೆ ಇರುವ ಜೊತೆ ಸಂಗಾತಿಯಾಗುವ ಆಶಯ ವ್ಯಕ್ತಪಡಿಸಿದ್ದರು. ಮ್ಯಾಟ್ರಿಮೋನಿಯಲ್‌ನಲ್ಲಿಸರ್ಚ್ ಹಾಕಿದ್ದ ಇಬ್ಬರಿಗೂ ಈಗ ತಮಗಿಷ್ಟವಾದವರೇ ಸಿಕ್ಕಿದ್ದಾರೆ. ವಧು ಹೊಳೆನರಸೀಪುರ ತಾಲೂಕಿನ ಕೆರಗೋಡು ಗ್ರಾಮದ ಕೃಷ್ಣೇಗೌಡರ ಪುತ್ರಿ ಸುಪ್ರಿಯಾ. ವರನ ಹೆಸರು ಪ್ರಜ್ವಲ್ ,ಚಾಮರಾಜನಗರದ ರಾಮನಾಥಪುರ ಗ್ರಾಮ ನಿವಾಸಿ. ಸದ್ಯ ಇಬ್ಬರೂ ಕೂಡ ಒಬ್ಬರನ್ನೊಬ್ಬರು ಒಪ್ಪಿಕೊಂಡು ಅರ್ಥಮಾಡಿಕೊಂಡು ಮದುವೆ ಆಗೋದಿಕ್ಕೆ ಒಪ್ಪಿಕೊಂಡಿದ್ದಾರೆ. ಇಬ್ಬರಿಗೂ ಸಂಗಾತಿಗಳು ಸಿಕ್ಕಿದ ಸಂತೋಷ. ಇಬ್ಬರ ಪೋಷಕರು ಕೂಡ ಈಗ ಮಾತುಕತೆಮಾಡಿ ನಿಶ್ಚಿತಾರ್ಥವನ್ನು ನಡೆಸಿದ್ದಾರೆ. ಹೊಳೆನರಸೀಪುರ ಪಟ್ಟಣದ ಪಿಆರ್ ಕಲ್ಯಾಣ ಮಂಟಪದಲ್ಲಿ ಇಬ್ಬರ ಮದುವೆಗೆ ಮುನ್ನುಡಿ ಇಟ್ಟಿದ್ದಾರೆ. ಇಬ್ಬರಿಗೂ ಕಂಗ್ರಾಜುಲೇಷನ್..Body:-ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.