ETV Bharat / state

ಕೊರೊನಾ ಹಾವಳಿ ನಡುವೆಯೇ ರಾಜೀನಾಮೆಗೆ ಮುಂದಾದ 550 ಗುತ್ತಿಗೆ ಆಧಾರಿತ ವೈದ್ಯರು! - Contract based doctors resign news

ಕಳೆದ ಮೂರ್ನಾಲ್ಕು ವರ್ಷದಿಂದ ಸೇವೆಯಲ್ಲಿದ್ದರೂ ಸಹ ಖಾಯಂ ಮಾಡದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಹಾಸನ ಜಿಲ್ಲೆಯ 35 ವೈದ್ಯರು ಸೇರಿದಂತೆ ರಾಜ್ಯಾದ್ಯಂತ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ 550 ವೈದ್ಯರು ರಾಜೀನಾಮೆಗೆ ಮುಂದಾಗಿದ್ದಾರೆ.

doctor
ವೈದ್ಯ
author img

By

Published : May 21, 2020, 4:58 PM IST

Updated : May 21, 2020, 5:16 PM IST

ಹಾಸನ: ಕೊರೊನಾ ಭೀತಿ ನಡುವೆಯೇ ರಾಜ್ಯದ 550 ಗುತ್ತಿಗೆ ಆಧಾರದ ವೈದ್ಯರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಈ ಮೂಲಕ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರಕ್ಕೆ ಶಾಕ್ ನೀಡಲು ಸಜ್ಜಾಗಿದ್ದಾರೆ.

doctor
ರಾಜೀನಾಮೆ ನೀಡಲು ಬರೆದ ಪತ್ರ

ಕಳೆದ ಮೂರ್ನಾಲ್ಕು ವರ್ಷಗಳಿಂದ ಸೇವೆಯಲ್ಲಿದ್ದರೂ ಸಹ ತಮ್ಮನ್ನು ಖಾಯಂ ಮಾಡದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಖಾಯಂ ಸೇವೆ, ವೇತನ ಹೆಚ್ಚಳ ಸೇರಿದಂತೆ ಸೇವಾ ಭದ್ರತೆಗೆ ಆಗ್ರಹಿಸಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ‌. ಸಾಮೂಹಿಕ ರಾಜೀನಾಮೆ ಮೂಲಕ ಒತ್ತಡ ಹೇರಲು ಮುಂದಾದ ವೈದ್ಯ ಸಮೂಹ, ಹಾಸನದ 35 ವೈದ್ಯರು ಸೇರಿದಂತೆ ರಾಜ್ಯದ 550 ವೈದ್ಯರೆಲ್ಲ ಒಟ್ಟಿಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಜೊತೆಗೆ ಕೂಡಲೇ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ.

ರಾಜೀನಾಮೆ ಕುರಿತು ವೈದ್ಯರಿಂದ ಪ್ರತಿಕ್ರಿಯೆ

ಇನ್ನು, ಮನವಿ ಪತ್ರದಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಸ್ಪಂದಿಸದಿರುವುದರಿಂದ ಮನನೊಂದು ರಾಜೀನಾಮೆ ನೀಡುವುದಾಗಿ ಉಲ್ಲೇಖಿಸಿದ್ದಾರೆ. ಕೋವಿಡ್-19 ಕಂಟಕದ ವೇಳೆ ಜೀವದ ಹಂಗು ತೊರೆದು ಕೆಲಸ ಮಾಡಿದ್ದೇವೆ. ರಾಜ್ಯದ ಎಲ್ಲಾ ವೈದ್ಯರು ಖಾಯಂ ವೈದ್ಯರಷ್ಟೇ ಶ್ರದ್ಧೆಯಿಂದ ಕೆಲಸ ಮಾಡಿದ್ದೇವೆ. ಆದ್ರೂ ತಮ್ಮನ್ನ ಕಡೆಗಣಿಸಲಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಈ ಹಿಂದೆ ಮೂರು ವರ್ಷ ಸೇವೆ ಸಲ್ಲಿಸಿದ್ದ ಗುತ್ತಿಗೆ ವೈದ್ಯರನ್ನು ಖಾಯಂ ಮಾಡಲಾಗುತ್ತಿತ್ತು. ಅದೇ ನಿಯಮ ಅನುಸರಿಸಿ ಸೇವೆ ಖಾಯಂ ಮಾಡಲು ವೈದ್ಯರು ಆಗ್ರಹಿಸಿದ್ದಾರೆ.

Last Updated : May 21, 2020, 5:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.