ಹಾಸನ: ಜಿಲ್ಲೆಯ 42 ಮಂದಿ ಶಿಕ್ಷಕರು ಅಂಗವಿಕಲರ ಅನುದಾನದಲ್ಲಿ ನಕಲಿ ದಾಖಲಾತಿಯನ್ನು ಪಡೆದು ಶಿಕ್ಷಕರ ಹುದ್ದೆ ಪಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಾಸನ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪ್ರಕಾಶ್, ಅಂಗವಿಕಲತೆಯ ಮರು ಪರೀಕ್ಷೆಯಲ್ಲಿ ನಕಲಿ ದಾಖಲಾತಿಯ ಮೂಲಕ ಕೆಲಸ ಗಿಟ್ಟಿಸಿಕೊಂಡಿರುವುದು ದೃಢಪಟ್ಟಿದೆ. ಅಂಗವಿಕಲ ಅನುದಾನದಡಿ ಕೆಲಸ ಸಿಗಲು ಶೇ 40ರಷ್ಟು ಕಡಿಮೆ ಅಂಗವೈಕಲ್ಯತೆ ಹೊಂದಿರಬೇಕು. ಆದರೆ, ಪ್ರಕರಣದಲ್ಲಿ ಸಿಲುಕಿಕೊಂಡಿರುವ 42 ಮಂದಿ ಶಿಕ್ಷಕರು ಶೇ. 40ಕ್ಕಿಂತ ಹೆಚ್ಚಿರೋದು ಮರು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಈಗಾಗಲೇ ಈ ಪ್ರಕರಣ ಲೋಕಾಯುಕ್ತದ ಮೆಟ್ಟಿಲೇರಿದ್ದು, ಪ್ರಕರಣ ತನಿಖೆಯ ಹಂತದಲ್ಲಿದೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಪತ್ರದ ಮೂಲಕ ಒತ್ತಾಯಿಸಿದ್ದಾರೆ.