ETV Bharat / state

ಹಾಸನ: ನಕಲಿ ಗೊಬ್ಬರ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

ನಕಲಿ ಗೊಬ್ಬರ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕೊಣನೂರು ಪೊಲೀಸರು ಬಂಧಿಸಿದ್ದಾರೆ.

2 arrested in duplicate fertilizer selling case at hasana
ಹಾಸನದಲ್ಲಿ ನಕಲಿ ಗೊಬ್ಬರ ಮಾರಾಟ ಮಾಡುತ್ತಿದ್ದ ಜಾಲ ಅಂದರ್
author img

By

Published : Oct 14, 2021, 12:29 PM IST

ಹಾಸನ: ನಕಲಿ ಗೊಬ್ಬರ ಮಾರಾಟ ಮಾಡುತ್ತಿದ್ದ ಜಾಲವನ್ನು ಹಾಸನ ಜಿಲ್ಲೆಯ ಪೊಲೀಸರು ಭೇದಿಸಿದ್ದಾರೆ. ಮೈಸೂರು ಜಿಲ್ಲೆಯ ಕೆ.ಆರ್.ನಗರ ಪಟ್ಟಣದ ಅವಿನಾಶ್ ಹಾಗೂ ಭೇರ್ಯ ಗ್ರಾಮದ ಅಪ್ಪು ಅಲಿಯಾಸ್ ಆನಂದ್ ಬಂಧಿತರು.

ಈ ಆರೋಪಿಗಳು ಮೈಸೂರು ನಗರದ ಹೊರವಲಯದಿಂದ ನಕಲಿ ಗೊಬ್ಬರ ತರಿಸಿಕೊಂಡು ಅದಕ್ಕೆ ಉಪ್ಪು ಮತ್ತು ರೆಡ್ ಆಕ್ಸೈಡ್ ಬೆರೆಸಿ ಮಾಮೂಲಿ ಪೊಟ್ಯಾಷ್ ಗೊಬ್ಬರ ಚೀಲದಲ್ಲಿ ತುಂಬಿ ರೈತರಿಗೆ ಮಾರಾಟ ಮಾಡುತ್ತಿದ್ದರು.

ರೈತರಿಂದ ಬಂದಿರುವ ದೂರಿನನ್ವಯ ಕಾರ್ಯಾಚರಣೆಗಿಳಿದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಹಾಸನ ಜಿಲ್ಲೆಯ ರಾಮನಾಥಪುರ ಬಳಿ ಬರುತ್ತಿದ್ದ ವಾಹನವನ್ನು ತಪಾಸಣೆ ಮಾಡಿದಾಗ ನಕಲಿ ಗೊಬ್ಬರ ಮಾರಾಟ ಪ್ರಕರಣ ಪತ್ತೆಯಾಗಿದೆ.

ಇದನ್ನೂ ಓದಿ: ಕಲಬುರಗಿ: ಐಪಿಎಲ್ ಕ್ರಿಕೆಟ್​​ ಬೆಟ್ಟಿಂಗ್ ದಂಧೆಕೋರರ ಬಂಧನ

ರೈತರು ಗೊಬ್ಬರ ಖರೀದಿ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕು. ನಕಲಿ ಅಥವಾ ಅಸಲಿಯೋ ಎಂದು ಪರೀಕ್ಷಿಸಿ ನಂತರ ಪಡೆಯುವ ಕಾರ್ಯ ಮಾಡಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.