ಹಾಸನ: ಜಿಲ್ಲೆಯಲ್ಲಿಂದು 196 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಮೂವರು ಮೃತಪಟ್ಟಿದ್ದಾರೆ ಎಂದು ಸಂತಾನೋತ್ಪತ್ತಿ ಮತ್ತು ಮಕ್ಕಳ ಇಲಾಖೆ ಅಧಿಕಾರಿ ಡಾ. ಕಾಂತರಾಜ್ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಲೂರು 2, ಅರಕಲಗೂಡು 25, ಅರಸೀಕೆರೆ 22, ಬೇಲೂರು 27, ಚನ್ನರಾಯಪಟ್ಟಣ 28, ಹಾಸನ 69, ಹೊಳೆನರಸೀಪುರ 17, ಸಕಲೇಶಪುರ 04 ಹಾಗೂ ಇತರೆ 2 ಪ್ರಕರಣಗಳು ಸೇರಿ, ಒಟ್ಟು 196 ಪಾಸಿಟಿವ್ ಕೇಸ್ ದಾಖಲಾಗಿವೆ ಎಂದರು.
ಜಿಲ್ಲೆಯಲ್ಲಿ ಈವರೆಗೆ ಕೊರೊನಾ ಪ್ರಕರಣಗಳ ಸಂಖ್ಯೆ 5,420ಕ್ಕೆ ಏರಿಕೆಯಾಗಿದೆ. 117 ಜನರು ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ 3,435 ಮಂದಿ ಬಿಡುಗಡೆಯಾಗಿದ್ದಾರೆ. ಇನ್ನೂ 1,832 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿನ ಸಂಖ್ಯೆ 153ಕ್ಕೆ ತಲುಪಿದೆ.
ಕೊರೊನಾ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಯಾರಿಗಾದರೂ ಉಸಿರಾಟ ಸಂಬಂಧಿತ ಸಮಸ್ಯೆಗಳು, ಜ್ವರ, ಶೀತ, ಕೆಮ್ಮು ಕಂಡು ಬಂದರೇ ಹಿಮ್ಸ್, ಸಾರ್ವಜನಿಕ ಆಸ್ಪತ್ರೆ ಸೇರಿದಂತೆ, ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆಗೆ ಒಳಪಡಬೇಕು. ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಉತ್ತಮ ದರ್ಜೆಯ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ. ಸಭೆ ಸಮಾರಂಭವನ್ನು ಆದಷ್ಟು ಕಡಿಮೆ ಮಾಡಿ ಎಂದು ಅವರು ಮನವಿ ಮಾಡಿದರು.
ತಾಲೂಕುವಾರು ಕೋವಿಡ್ ಪ್ರಕರಣಗಳು:
01) ಆಲೂರು - 144
02) ಅರಕಲಗೂಡು -459
03) ಅರಸೀಕೆರೆ -810
04) ಬೆಲೂರು -379
05) ಚನ್ನರಾಯಪಟ್ಟಣ - 759
06) ಹಾಸನ -2,165
07) ಹೊಳೆನರಸೀಪುರ- 593
08) ಸಕಲೇಶಪುರ - 151
09) ಇತರೆ 37 ಪ್ರಕರಣಗಳು ವರದಿಯಾಗಿವೆ.