ETV Bharat / state

ಹಾಸನದಲ್ಲಿ ಕುಖ್ಯಾತ ಮನೆಗಳ್ಳನ ಬಂಧನ: 34 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ - hassan today news

ಹಾಸನ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಕಳ್ಳತನ ಮಾಡಿ ಲಕ್ಷಾಂತರ ರೂ. ಚಿನ್ನಾಭರಣ ಕಳವು ಮಾಡಿದ್ದ ಕುಖ್ಯಾತ ಮನೆಗಳ್ಳನನ್ನು ಹಾಸನ ಗ್ರಾಮಾಂತರ ಪೊಲೀಸರು ಬಂಧಿಸಿ 35 ಲಕ್ಷ ರೂ. ಮೌಲ್ಯದ 650 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

14 criminal cases accused arrest in hassan
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ
author img

By

Published : Aug 29, 2020, 9:45 PM IST

ಹಾಸನ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುಲಿಗೆ ಮತ್ತು ಕಳ್ಳತನ ಆರೋಪದ 14 ಪ್ರಕರಣಗಳಲ್ಲಿ ಬೇಕಾಗಿದ್ದ ಆಪಾದಿತನನ್ನು ಪೊಲೀಸರು ಬಂಧಿಸಿದ್ದು, ಸುಮಾರು 34 ಲಕ್ಷ ರೂ. ಮೌಲ್ಯದ 675 ಗ್ರಾಂ. ಚಿನ್ನಾಭರಣ ವಶಪಡಿಸಿಕೊಂಡ ಘಟನೆ ಹಾಸನದಲ್ಲಿ ನಡೆದಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕವಲಂದೆ ಹೋಬಳಿ ಹೆಡತಲೆ ಗ್ರಾಮದ ಹೆಚ್.ಬಿ. ಗಿರೀಶ್‌ಕುಮಾರ್ (29) ಬಂಧಿತ ಆರೋಪಿ. ಸಹಚರ ಬೆಳಗಾವಿ ಜಿಲ್ಲೆಯ ರಾಜೇಶ್ ಎಂಬುವವನು ತಲೆ ಮರೆಸಿಕೊಂಡಿದ್ದಾನೆ.

14 criminal cases accused arrest in hassan
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ

ಹಾಸನ ಗ್ರಾಮಾಂತರ ವೃತ್ತದ ಸಿಪಿಐ ತಂಡದ ಯಶಸ್ವಿ ಕಾರ್ಯಾಚರಣೆ ಮೂಲಕ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ತಿಳಿಸಿದರು.

ಜನವರಿಯಲ್ಲಿ ದುದ್ದ ಪೊಲೀಸ್ ಠಾಣಾ ವ್ಯಾಪ್ತಿಯ ಅಟ್ಟಾವರ ಹೊಸಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಂಜೇಗೌಡರ ಮನೆಯ ಲಾಕರ್ ಒಡೆದು ಸುಮಾರು 2.25 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಕಳ್ಳತನವಾಗಿದ್ದವು. ಈ ಕುರಿತು ದುದ್ದ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಸಿಪಿಐ ವೈ. ಸತ್ಯನಾರಾಯಣ ನೇತೃತ್ವದಲ್ಲಿ ಗೊರೂರು ಪಿಎಸ್​ಐ ಜಗದೀಶ್.ಬಿ.ಸಿ ಮತ್ತು ಸಿಬ್ಬಂದಿ ಒಳಗೊಂಡಂತೆ ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು.

ಈ ತಂಡವು ಆರೋಪಿಗಳ ಖಚಿತ ಮಾಹಿತಿ ಸಂಗ್ರಹಿಸಿ, ತಾಲೂಕಿನ ಶಾಂತಿ ಗ್ರಾಮ ಟೋಲ್ ಬಳಿ ಮೋಟಾರ್ ಬೈಕ್ ಸಮೇತ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು, ವಿಚಾರಣೆಗೆ ಒಳಪಡಿಸಲಾಯಿತು ಎಂದು ವಿವರಿಸಿದರು. ಸಹಚರ ರಾಜೇಶನೊಂದಿಗೆ ಸೇರಿಕೊಂಡು ಗಿರೀಶ್​ ಬೇರೆ ಪ್ರಕರಣಗಳ ಭಾಗಿ ಆಗಿದ್ದಾನೆ.

ಹಾಸನ ಬಡಾವಣೆ 4, ಅರಸೀಕೆರೆ ಹಾಗೂ ದುದ್ದ ತಲಾ 2, ಜಾವಗಲ್ ನುಗ್ಗೇಹಳ್ಳಿ ಹಳೇಬೀಡು, ಹಾಸನ ನಗರ, ತುಮಕೂರು ಜಿಲ್ಲೆಯ ಕುಣಿಗಲ್ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ತಾವರಕೆರೆಯಲ್ಲಿ ತಲಾ ಒಂದರಂತೆ ಒಟ್ಟು 14 ಪ್ರಕರಣಗಳಲ್ಲಿ ಭಾಗಿ ಆಗಿರುವುದು ತನಿಖೆಯಿಂದ ತಿಳಿದು ಬಂದಿದೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗೆ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆ ನಡೆಸಿದ ವಿಶೇಷ ತಂಡದ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಂಡದಲ್ಲಿ ಸಿಬ್ಬಂದಿ ರವಿಕುಮಾರ್, ಬಿ.ಆರ್.ಮಂಜುನಾಥ್, ಸುಬ್ರಮಣ್ಯ, ನಿಶಾಂತ ಹಾಗೂ ತಾಂತ್ರಿಕ ವಿಭಾಗದ ಪೀರ್ ಖಾನ್ ಇದ್ದು, ಈ ತಂಡಕ್ಕೆ ಎಸ್ಪಿ ಶ್ರೀನಿವಾಸ ಗೌಡರು ವಿಶೇಷ ಬಹುಮಾನ ನೀಡಿದರು.

ಎಎಸ್ಪಿ ನಂದಿನಿ, ಡಿವೈಎಸ್ಪಿ ಪುಟ್ಟಸ್ವಾಮಿಗೌಡ ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.