ETV Bharat / state

ಹಾಸನದಲ್ಲಿ ಮತ್ತೆ 3 ಪಾಸಿಟಿವ್: 9ಕ್ಕೇರಿದ ಸೋಂಕಿತರು- 'ಆತಂಕ ಬೇಡ'ವೆಂದ ಡಿಸಿ - Hassan news

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಎರಡು ಪ್ರಕರಣಗಳು ಪತ್ತೆಯಾದರೆ ಅರಕಲಗೂಡಿನಲ್ಲಿ ಮೊದಲ ಬಾರಿಗೆ ಒಂದು ಪ್ರಕರಣ ಪತ್ತೆಯಾಗಿದೆ.

12 Corona Case Positive
ನೇರವಾಗಿ ಆಸ್ಪತ್ರೆಗೆ ದಾಖಲಾದ ಹಿನ್ನೆಲೆ ಯಾವುದೇ ಆತಂಕ ಬೇಡ ಎಂದ ಜಿಲ್ಲಾಧಿಕಾರಿ
author img

By

Published : May 15, 2020, 8:21 PM IST

ಹಾಸನ: ಹೊರ ರಾಜ್ಯಗಳಿಂದ ಸೇವಾಸಿಂಧು ಅರ್ಜಿಯಡಿ ಜಿಲ್ಲೆಗೆ ಮರಳುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಮೂರು ಹೊಸ ಪ್ರಕರಣಗಳು ಪತ್ತೆಯಾಗಿವೆ.

ಸೇವಾಸಿಂಧು ಅರ್ಜಿ ಸಲ್ಲಿಸಿ ಮುಂಬೈಯಿಂದ ಹಾಸನ ಜಿಲ್ಲೆಗೆ ಬರುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದೆ. ಬರುವಂತಹ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇವರಲ್ಲಿ ಇಂದು ಮೂರು ಮಂದಿಗೆ ಕೊರೊನಾ ಪಾಸಿಟಿವ್​ ವರದಿ ಬಂದಿದ್ದು, ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿದ್ದರೇ ಅರಕಲಗೂಡಿನಲ್ಲಿ ಮೊದಲ ಬಾರಿಗೆ ಒಂದು ಪ್ರಕರಣ ದೃಢಪಟ್ಟಿದೆ. ಚನ್ನರಾಯಪಟ್ಟಣದ ಅಪ್ಪ ಮತ್ತು ಮಗನಿಗೆ ಹಾಗೂ ಅರಕಲಗೂಡಿನ ಮಹಿಳೆಯಲ್ಲಿ ಸೋಂಕು ಕಂಡುಬಂದಿದೆ.

ಇವರೆಲ್ಲರೂ ಮುಂಬೈನಿಂದ ಹಾಸನ ಜಿಲ್ಲೆಗೆ ಬಂದ ಬಳಿಕ ಜಿಲ್ಲಾಡಳಿತ ಪರೀಕ್ಷೆಗೆ ಒಳಪಡಿಸಿ ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಸಮೂಹದೊಂದಿಗೆ ಇವರು ಒಡನಾಟ ಇಲ್ಲದಿರುವ ಕಾರಣ ಜಿಲ್ಲೆಯ ಜನರು ಆತಂಕ ಪಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.