ಬೆಳಗಾವಿ: ರಾಜ್ಯದಲ್ಲಿ ನಡೆದಿರುವ ಐಟಿ ದಾಳಿ ಚುನಾವಣೆ ಪ್ರೇರಿತ ಎಂಬ ಮಾತು ಕೇಳಿ ಬಂದಿರುವ ಬೆನ್ನಲ್ಲೇ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಮೈತ್ರಿ ಪಕ್ಷದ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ದುಡ್ಡು ಇದ್ದವರ ಮನೆ ಮೇಲೆ ಐಟಿ ದಾಳಿ ಆಗುತ್ತದೆಯೇ ಹೊರತು ಪಕ್ಷಗಳ ಮುಖಂಡರ ನೋಡಿ ಅಲ್ಲ. ಆದಾಯ ತೆರಿಗೆ ಪಾವತಿ ಮಾಡದವರ ಮೇಲೆ ಇಂತಹ ದಾಳಿಗಳು ಸಹಜ. ಬಿಜೆಪಿ ಮುಖಂಡರ ಮನೆಗಳ ಮೇಲೆಯೂ ಈ ಹಿಂದೆ ಹಲವು ಸಲ ದಾಳಿ ನಡೆದಿವೆ. ದುಡ್ಡಿದ್ದವರ ಮನೆಗೆ ಮಾತ್ರ ಐಟಿ ಅಧಿಕಾರಿಗಳು ಬರುತ್ತಾರೆ. ಚುನಾವಣೆ, ಪಕ್ಷಗಳಿಗೂ ಹಾಗೂ ಈ ದಾಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.
ದುಡ್ಡು ಇದ್ದವರ ಬಗ್ಗೆ ಐಟಿ ಅಧಿಕಾರಿಗಳಿಗೆ ಮಾಹಿತಿ ಇರುತ್ತೆ. ಸಮಗ್ರ ಅಧ್ಯಯನ ಮಾಡಿಯೇ ದಾಳಿ ನಡೆಸುತ್ತಾರೆ. ಐಟಿ ಇಲಾಖೆ ಕೇಂದ್ರದ ಕೈಗೊಂಬೆ ಎಂಬ ಕಾಂಗ್ರೆಸ್ ಮುಖಂಡರ ಆರೋಪ ಹೊಸದೇನಲ್ಲ. ಅವರು ಇಂತಹ ಡೈಲಾಗ್ ಈ ಹಿಂದೆ ಕೂಡ ನೀಡಿದ್ದಾರೆ. ಅವರ ಸರ್ಕಾರ ಇದ್ದಾಗಲೂ ದಾಳಿಗಲು ನಡೆದಿವೆ ಎಂದು ತಿರುಗೇಟು ನೀಡಿದರು.