ಗದಗ: ಕೊರೊನಾ ಸೋಂಕಿಗೆ ಹೆದರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕದಡಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಕಳೆದ 15 ದಿನಗಳಿಂದ ಈ ಮಹಿಳೆ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರಿಗೆ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಕುಟುಂಬಸ್ಥರು ಹೇಳಿದ್ದರು.
ಟೆಸ್ಟ್ ಮಾಡಿಸಿಕೊ ಎಂದಿದ್ದಕ್ಕೇ ತನಗೆ ಕೊರೊನಾ ಬಂದಿರಬಹುದು ಎಂದು ಹೆದರಿದ ಮಹಿಳೆ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದ್ದು, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಓದಿ: ಸಮಾಜದ ಗಣ್ಯರು ಸಿನಿಮಾ ಕಲಾವಿದರ ಸಹಾಯಕ್ಕೆ ಬರಬೇಕು: ಡಿಸಿಎಂ ಅಶ್ವತ್ಥ್ ನಾರಾಯಣ