ಗದಗ: ವೈದ್ಯರ ನಿರ್ಲಕ್ಷ್ಯದಿಂದ ಕೊರೊನಾ ಸೋಂಕಿತ ರೋಗಿಯೊಬ್ಬ ಚಿಕಿತ್ಸೆ ಸಿಗದೆ ನರಳಾಡಿದ ಘಟನೆ ಗದಗ ನಗರದ ಜಿಮ್ಸ್ನ ಕೋವಿಡ್ ಆಸ್ಪತ್ರೆಯಲ್ಲಿ ಕಂಡುಬಂದಿದೆ.
ಜಿಮ್ಸ್ ಆಸ್ಪತ್ರೆಯಲ್ಲಿ 28 ವೆಂಟಿಲೇಟರ್ಗಳಿವೆ. ಅದರಲ್ಲಿ 6 ಮಂದಿ ವೆಂಟಿಲೇಟರ್ ಮೂಲಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ 22 ವೆಂಟಿಲೇಟರ್ಗಳು ಖಾಲಿ ಇದ್ದರೂ, ಇಲ್ಲೊಬ್ಬ ರೋಗಿ ವೆಂಟಿಲೇಟರ್ ಇಲ್ಲದೇ ಸಾವು-ಬದುಕಿನ ಮಧ್ಯೆ ನರಳಾಡುತ್ತಿರುವ ದೃಶ್ಯ ಕಂಡುಬಂದಿದೆ.
ಕೋವಿಡ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ರೋಗಿಗಳು ಸಂಕಟ ಅನುಭವಿಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ತೀವ್ರ ಉಸಿರಾಟ ದ ತೊಂದರೆ ಆಗುತ್ತಿದ್ದು, ಮಾತನಾಡಲು ಆಗ್ತಿಲ್ಲ. ವಿಪರೀತ ಜ್ವರ, ಕೆಮ್ಮು ಇದ್ದು ಚಿಕಿತ್ಸೆ ನೀಡಿ ಅಂತ ಮನವಿ ಮಾಡಿಕೊಂಡರು ವೈದ್ಯರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ರೋಗಿಗಳು ಅಳಲು ತೋಡಿಕೊಂಡಿದ್ದಾರೆ.
ನರಗುಂದ ಪಟ್ಟಣದ ಬಸ್ ಕಂಡಕ್ಟರ್ ಹಾಗೂ ಆತನ ಸಹೋದರಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈಗ ಅವರಿಗೆ ಜಿಮ್ಸ್ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಸೋಂಕಿತರ ಪ್ರಾಣ ಉಳಿಸಿ ಎಂದು ಕುಟುಂಬಸ್ಥರು ಬೇಡಿಕೊಳ್ಳುತ್ತಿದ್ದಾರೆ.