ಗದಗ: ಮುಂಬೈನಿಂದ ಜಿಲ್ಲೆಗೆ ಇಂದು ರೈಲು ಆಗಮಿಸಿದ್ದು, 124 ಜನ ಪ್ರಯಾಣಿಕರನ್ನು ಕರೆತಂದಿದೆ. ಈ ಹಿನ್ನೆಲೆಯಲ್ಲಿ ಗದಗ ಜಿಲ್ಲಾಡಳಿತ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ.
ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ನಡೆಸಲಾಗಿದೆ. ಆರೋಗ್ಯ ತಪಾಸಣೆಗೆ ಎಂದು 2 ಕೌಂಟರ್ಗಳನ್ನು ಮಾಡಲಾಗಿದ್ದು, ಪ್ರಯಾಣಿಕರ ಆಧಾರ್ ಕಾರ್ಡ್ ನೋಡಿದ ಬಳಿಕ ಸ್ಕ್ರೀನಿಂಗ್ ನಡೆಸಲಾಗುತ್ತಿದೆ. ಅಷ್ಟೇ ಅಲ್ಲದೆ, ಪೊಲೀಸ್ ಇಲಾಖೆಯೂ ಕ್ರಮಗಳನ್ನು ಕೈಗೊಂಡಿದೆ.
ಸಿಪಿಐ ಬಿ.ಎ ಬಿರಾದಾರ ನೇತೃತ್ವದಲ್ಲಿ 25 ಪೊಲೀಸ್ ಸಿಬ್ಬಂದಿ ಮತ್ತು 17 ಜನ ರೈಲ್ವೆ ಪೊಲೀಸ್, 10 ಜನ ಆರ್ಪಿಎಫ್ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ. ಸದ್ಯ ಸ್ಥಳಕ್ಕೆ ರೈಲ್ವೆ ನಿಲ್ದಾಣದಲ್ಲಿ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ, ಎಸ್ಪಿ ಎನ್. ಯತೀಶ್, ಎಸಿ ರಾಯಪ್ಪ, ತಹಶೀಲ್ದಾರ್ ಶ್ರೀನಿವಾಸ್ ಮೂರ್ತಿ, ಉಪತಹಶೀಲ್ದಾರ್ ಸಂಜೀವ್ ಸಿಂಪರ್ ಠಿಕಾಣಿ ಹೂಡಿದ್ದಾರೆ.
ಇನ್ನು ಮುಂಬೈದಿಂದ ಬಂದ ಎಲ್ಲ ಪ್ರಯಾಣಿಕರಿಗೆ ಗದಗದ ವಿವಿಧೆಡೆ ಮೊದಲೇ ನಿಯೋಜನೆಗೊಂಡಿದ್ದ ಕ್ವಾರಂಟೈನ್ ಪ್ರದೇಶದಲ್ಲಿ 14 ದಿನಗಳ ಕಾಲ ಕ್ವಾರೆಂಟೈನ್ ಮಾಡಲಾಗುತ್ತದೆ. ಪ್ರತ್ಯೇಕ ವಾಹನದ ಮೂಲಕ ಅವರನ್ನು ಶಿಫ್ಟ್ ಮಾಡಲಾಗುತ್ತದೆ.