ಗದಗ: ಮದುವೆಗೆ ಹೋಗಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, 18ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಶಿರಹಟ್ಟಿ ಪಟ್ಟಣದ ಸಮೀಪದ ಹಂಗನಕಟ್ಟಿ ತಿರುವಿನಲ್ಲಿ ಸಂಜೆ ಘಟನೆ ನಡೆದಿದೆ.
ಹಂಗನಕಟ್ಟಿಯಿಂದ ಮದುವೆ ಸಮಾರಂಭ ಮುಗಿಸಿ ಅಣ್ಣಿಗೇರಿಗೆ ಹೊರಟಿದ್ದ ಟ್ರ್ಯಾಕ್ಟರ್ ಹುಕ್ ಮುರಿದು ಬಿದ್ದು ಟ್ರ್ಯಾಲಿ ಪಲ್ಟಿಯಾಗಿದೆ. ಅಣ್ಣಿಗೇರಿ ಪಟ್ಟಣದ ಪ್ರದೀಪ್ ಕರಿಬಸಣ್ಣನವರ (13) ವಿನಾಯಕ ಸಬನೇಶಿ (18) ಮೃತರು. ಗಾಯಾಳುಗಳನ್ನು ಶಿರಹಟ್ಟಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗಂಭೀರವಾಗಿ ಗಾಯಗೊಂಡ ಆರು ಜನರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಜೀವಜಲಕ್ಕಾಗಿ ಪ್ರಾಣ ಪಣಕ್ಕಿಡುವ ಮಹಿಳೆಯರು: 2ಕಿಮೀ ದೂರದಿಂದ ನೀರು ತರುವ ದುಸ್ಥಿತಿ!