ಗದಗ: ತೋಟಕ್ಕೆ ಹೋಗಿದ್ದ ತಾಯಿ-ಮಕ್ಕಳು ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಗದಗ ತಾಲೂಕಿನ ಶಿರೋಳ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟವರನ್ನು ಶಿರೋಳ ಗ್ರಾಮದ ಚನ್ನಬಸವ್ವ ಬಸಯ್ಯ ದಂಡಿನ (38), ಮಕ್ಕಳಾದ ಕೊಟ್ರಯ್ಯ (8) ಮಾಲಾ (5) ಎಂದು ಗುರುತಿಸಲಾಗಿದೆ.
ತಮ್ಮ ಹೊಲದ ಕೆಲಸಕ್ಕೆ ತನ್ನೆರಡು ಮಕ್ಕಳೊಂದಿಗೆ ಹೊಗಿದ್ದರಂತೆ. ಊಟ ಮಾಡಿದ ನಂತರ ಈ ಘಟನೆ ನಡೆದಿದ್ದು ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಮುಳಗುಂದ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.