ಗದಗ: ಲಾಕ್ಡೌನ್ನಿಂದಾಗಿ ರೈತರು ಸಾಕಷ್ಟು ಪರದಾಡುತ್ತಿದ್ದಾರೆ. ಒಂದೆಡೆ ಮಾರ್ಕೆಟ್ ತೆರೆದರೆ, ಸರಿಯಾದ ಬೆಲೆ ಸಿಗುತ್ತಿಲ್ಲ. ಸಿಕ್ಕಷ್ಟು ಬೆಲೆಗೆ ಮಾರಿದರೆ ಸಾಕು ಅಂತ ಮಾರಾಟಕ್ಕೆ ಹೋದರೆ ಪೊಲೀಸರು ಬಿಡುತ್ತಿಲ್ಲ ಅಂತ ವಿಡಿಯೋ ಮುಖೇನ ಅಳಲು ತೋಡಿಕೊಂಡಿದ್ದಾನೆ.
ಸರ್ಕಾರ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಮತಿಸಿದೆ. ಆದರೆ ನಮಗೆ ವ್ಯಾಪರ ಮಾಡಲು ಪೊಲೀಸರು ಬಿಡುತ್ತಿಲ್ಲಾ. ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಿಂದ ಪೇರಳೆ (ಸೀಬೆಹಣ್ಣು) ತೆಗೆದುಕೊಂಡು ಹೊರಟಿದ್ದ ಯುವಕನಿಗೆ ಪೊಲೀಸರು ತಡೆದಿದ್ದಾರೆ. ಅಲ್ಲದೆ ಹೊಡಿಯೋಕೆ ಬಂದಿದ್ದಾರೆ. ಬಾಗಲಕೋಟೆಯ ಬಾದಾಮಿ ತಾಲೂಕಿನ ಗೋವಿನಕೊಪ್ಪ ಗ್ರಾಮಕ್ಕೆ ಹೊರಟಿದ್ದ ಯುವಕನನ್ನು ಪೊಲೀಸರು ವಾಪಸ್ ಕಳುಹಿಸಿದ್ದಾರೆ ಎಂದು ದೂರಿದ್ದಾನೆ.
ಹೀಗೆಯೇ ಮುಂದುವರಿದರೆ ರೈತರು ಇನ್ನಷ್ಟು ಸಂಕಷ್ಟ ಎದುರಿಸುತ್ತಾರೆ. ನಾವು ಬೆಳೆದ ಪೇರಳೆ ಬೆಳೆ ಬಿದ್ದು ಹಾಳಾಗ್ತಿದೆ. ರೈತ ಆತ್ಮಹತ್ಯೆ ಮಾಡಿಕೊಳ್ಳೋ ಸಂದರ್ಭ ಬರುತ್ತೆ ಅಂತ ರೈತ ನೊಂದು ಕಷ್ಟ ವಿವರಿಸಿದ್ದಾನೆ.