ಗದಗ: ಬಾದಾಮಿಯ ಶ್ರೀ ಬನಶಂಕರಿ ದೇವಿಯ ರಥ ಎಳೆಯಲು ಗದಗದಿಂದ ಹಗ್ಗ ಒಯ್ಯುವ ಸಂಪ್ರದಾಯ ಜಾರಿಯಲ್ಲಿದೆ. ಗದಗ ಜಿಲ್ಲೆಯ ರೋಣ ತಾಲೂಕಿನ ಮಾಡಲಗೇರಿ ಗ್ರಾಮದಿಂದ ರಥೋತ್ಸವಕ್ಕೆ ಹಗ್ಗವನ್ನು ಪೂರೈಕೆ ಮಾಡಲಾಗುತ್ತದೆ.
ಮಾಡಲಗೇರಿ ಗ್ರಾಮವು ಬನಶಂಕರಿ ದೇವಿಯ ತವರೂರು. ಈ ಗ್ರಾಮದ ಜನತೆ ಪುಂಡಿ ನಾರಿನಿಂದ ತಯಾರಿಸಿದ ಹಗ್ಗವನ್ನು ಹದಿನಾರು ಎತ್ತಿನ ಎರಡು ಹಳಿ ಬಂಡಿಯಲ್ಲಿ ಕೊಂಡೊಯ್ಯುವ ಸಂಪ್ರದಾಯ 18ನೇ ಶತಮಾನದಿಂದಲೂ ನಡೆದುಕೊಂಡು ಬಂದಿದೆ.
ಇಂದು ಮಾಡಲಗೇರಿ ಸಮೀಪದಲ್ಲಿರೋ ಮಲಪ್ರಭಾ ನದಿಯ ಮಾರ್ಗವಾಗಿ ಎತ್ತಿನ ಬಂಡಿಯಲ್ಲಿ ರಥೋತ್ಸವದ ಹಗ್ಗವನ್ನು ತೆಗದುಕೊಂಡು ಬನಶಂಕರಿಗೆ ಹೋಗಲಾಯಿತು. ಇದೇ ಹಗ್ಗದಿಂದ ರಥವನ್ನು ಎಳೆಯಲಾಗುತ್ತದೆ.