ಗದಗ: ಮಾಜಿ ಸಚಿವ ಹೆಚ್ ಕೆ ಪಾಟೀಲ್ ಹಾಗೂ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿಯವರು ರಾಜಕೀಯ ಪಕ್ಷಗಳಿಗೆ ಬದ್ಧತೆ ಇಲ್ಲ ಎನ್ನುವ ಹೇಳಿಕೆಗೆ ಸಚಿವ ಸಿ ಸಿ ಪಾಟೀಲ್ ತಿರುಗೇಟು ನೀಡಿದ್ದಾರೆ.
ನಗರದ ಜಿಲ್ಲಾಡಳಿತ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ಹಾಗೂ ಜೆಡಿಎಸ್ನವರು ಕೂಡಿ ನಡೆಸಿದ ಸಮ್ಮಿಶ್ರ ಸರ್ಕಾರಕ್ಕೆ ಬದ್ಧತೆ ಇತ್ತಾ?. ಅವರಿಗೆ ಅಧಿಕಾರ ಇದ್ದಾಗ ಮಾತ್ರ ಬದ್ಧತೆ ಇರುತ್ತಾ ಎಂದು ಪ್ರಶ್ನಿಸಿದರು.
ಹಿಂಬಾಗಿಲಿನಿಂದ ಬಂದು ಅಧಿಕಾರ ಹಿಡಿದಿದ್ದಾರೆ ಎನ್ನುತ್ತಿದ್ದರು. ಆದರೆ, ಜನ ನಮ್ಮನ್ನು ಸಂಪೂರ್ಣವಾಗಿ ಆಯ್ಕೆ ಮಾಡಿದ್ದಾರೆ. ಬಿಎಸ್ವೈ ಮೂರೂವರೆ ವರ್ಷ ಸಿಎಂ ಆಗಿ ಇರ್ತಾರೆ. ಕೆಆರ್ ಪೇಟೆ ಉದಾಹರಣೆ ಒಂದೇ ಸಾಕು ನಾವು ತೋರಿಸೋಕೆ. ಅವರು ಬದ್ಧತೆಯಿಲ್ಲ ಅನ್ನೋದು ತಪ್ಪು. ಅವರ ಪಕ್ಷದಲ್ಲಿ ಬದ್ಧತೆ ಇಲ್ಲದೇ ಇದ್ದರೆ ಅವರವರ ನಾಯಕರ ಮುಂದೆ ಹೇಳಬೇಕು.
ಜೆಹೆಚ್ ಪಟೇಲರು ಒಬ್ಬ ಮಹಾನ್ ನಾಯಕರು. ನಾನು ಕೂಡಾ ಅವರ ಅನುಯಾಯಿ. ಹೀಗಾಗಿ ಜೆ ಹೆಚ್ ಪಟೇಲರ ಕಾರ್ಯಕ್ರಮದಲ್ಲಿ ಈ ವಿಷಯ ಮಾತಾಡಬಾರದಿತ್ತು. ಅದು ಸಮಂಜಸ ಅಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.