ETV Bharat / state

ಮುಂದೆ ಭೂ-ಆಘಾತ, ವಾಯು ಆಘಾತಗಳೂ ಕಾದಿವೆ: ಶ್ರೀಗಳು ಹೇಳಿದ ಭವಿಷ್ಯ ನಿಜವಾಗುತ್ತಾ ? - ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು

ಅಗಸ್ಟ್ 12 ನೇ ತಾರೀಖಿನಂದು ಗದಗ‌ ನಗರದ ಭಕ್ತರೊಬ್ಬರ ನಿವಾಸಕ್ಕೆ ಆಗಮಿಸಿದ್ದ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು, ಮಾಧ್ಯಮದವರು ಪ್ರವಾಹದ ಕುರಿತಾದ ಪ್ರಶ್ನೆಗೆ ನೀಡಿದ್ದ ಉತ್ತರಕ್ಕೂ, ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಪ್ರವಾಹಕ್ಕೂ ತಾಳೆಯಾಗುತ್ತಿದೆ.

ಶ್ರೀಗಳು
author img

By

Published : Oct 22, 2019, 5:02 AM IST

ಗದಗ: ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಎರಡು ತಿಂಗಳ ಹಿಂದೆ ಹೇಳಿದ್ದ ಭವಿಷ್ಯವಾಣಿ ಸದ್ಯ ಆಗುತ್ತಿರುವ ವಿಪರೀತ ಮಳೆ ಹಾಗೂ ಜಲಪ್ರಳಯಗಳೆರೆಡನ್ನೂ ತಾಳೆ ಮಾಡುವಂತೆ ಮಾಡಿದೆ.

ಸ್ವಾಮೀಜಿಗಳ ಭವಿಷ್ಯ ಹೇಗಿತ್ತು ಅಂದರೆ, ಈ ರಕ್ಕಸ ಮಳೆ ಹಾಗೂ ಪ್ರವಾಹದ ರೌದ್ರ‌ ನರ್ತನ ಇದೆಲ್ಲ ಇಷ್ಟಕ್ಕೆ ನಿಲ್ಲೋದಿಲ್ಲ. ಇನ್ನೂ ಸಹ ಮುಂದುವರಿಯಲಿದೆ ಅನ್ನೋ ಮುನ್ಸೂಚನೆ ಮೂಲಕ ತಮ್ಮ ಭವಿಷ್ಯವಾಣಿ ನೀಡಿ ಹೋಗಿದ್ದರು. ಕಳೆದ ಎರೆಡು ದಿನಗಳಿಂದ ವರುಣದೇವ ಆರ್ಭಟಿಸುತ್ತಿದ್ದಾನೆ. ಅದರಲ್ಲೂ ಸ್ವಾಮೀಜಿ ಹೇಳಿದ ಪ್ರಕಾರ ಮಹರಾಷ್ಟ್ರ, ಕೊಡಗು ಮತ್ತು ಉತ್ತರ ಕರ್ನಾಟಕದಲ್ಲಿ ಪ್ರವಾಹ ಆಗುತ್ತೇ ಎಂದು ಹೇಳಿದ್ದರು. ಇದೀಗ ಅವರ ವಾಣಿಯಂತೆಯೇ ಎಲ್ಲವೂ ಆಗುತ್ತಿದೆ.

ಸ್ವಾಮಿಜಿ ಹೇಳಿದ್ದ ಭವಿಷ್ಯ ನಿಜವಾಯ್ತಾ?

ಇಷ್ಟಕ್ಕೆ ಸುಮ್ಮನಿರದ ಸ್ವಾಮೀಜಿ "ಈಗಾಗಿರೋ ಅನಾಹುತ ಶ್ರಾವಣ‌ ಮುಗಿಯುವವರೆಗೂ‌ ಮುಂದುವರೆಯುತ್ತದೆ. ಕಾರ್ತಿಕ ಮಾಸದಲ್ಲಿ ಆಗಾಗ ಈ ಪ್ರವಾಹ ಬಂದು ಹೋಗುತ್ತದೆ ಅಂತ‌ ಎಚ್ಚರಿಕೆಯ ಜೊತೆಗೆ‌ ಅಚ್ಚರಿ ಸಂಗತಿಯನ್ನು ಸಹ ತಿಳಿಸಿ ಹೋಗಿದ್ದರು. ಅಲ್ಲದೇ ಸ್ವಾಮೀಜಿ ರಾಜ್ಯಕ್ಕಾಗೋ ಮುಂದಿನ ಗಂಡಾಂತರ ಬಗ್ಗೆಯೂ ಹೇಳಿ ಹೋಗಿದ್ದರು. ಅದೇನೆಂದರೆ ಇಷ್ಟಕ್ಕೆ ಈ ಅವಾಂತರಗಳು ನಿಲ್ಲುವುದಿಲ್ಲ. ಮುಂದೆ ಭೂ-ಆಘಾತ, ವಾಯು ಆಘಾತಗಳೂ ಕಾದಿವೆ. ದೊಡ್ಡ ದೊಡ್ಡ ನಗರಗಳಲ್ಲಿ ಕಟ್ಟಡಗಳು ಧರೆಗುರುಳುತ್ತವೆ. ಜಗತ್ತೆ ಕಂಡರಿಯದ ಆಘಾತ ಆಗುವ ಲಕ್ಷಣಗಳಿವೆ. ಆದರೆ, ಇದನ್ನು ಈಗ ಹೇಳುವುದಿಲ್ಲ ಮುಂದೆ ಸಮಯ‌ ಬಂದಾಗ ಹೇಳುತ್ತೇನೆ ಅಂತ ಭವಿಷ್ಯ ನುಡಿಯೋ ಮೂಲಕ ಕರಾಳ ಸತ್ಯವನ್ನ ಬಿಚ್ಚಿಟ್ಟಿದ್ದರು.

ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು

ತಾಳೆಗರಿಯ ಮೂಲಕ ಭವಿಷ್ಯ ನುಡಿಯುವಲ್ಲೇ ದೇಶಾದ್ಯಂತ ಹೆಸರುವಾಸಿಯಾಗಿರುವ ಕೋಡಿಮಠ ಶ್ರೀಗಳು ಇಂದಿಗೂ ಸಹ ಕಾಲಜ್ಞಾನದ ವಿಶಿಷ್ಟ ಪರಂಪರೆಯನ್ನು ಮುಂದುವರೆಸುತ್ತಾ‌ ಬಂದಿದೆ. ಹಾಗಾಗಿ ಶ್ರೀಗಳು ಹೇಳಿದ್ದ ಅದೆಷ್ಟೋ ಭವಿಷ್ಯಗಳು ನಿಜವಾಗಿದ್ದೆ ಹೆಚ್ಚು ಎಂಬುದು ಭಕ್ತರ ನಂಬಿಕೆಯಾಗಿದೆ.

Intro:ಮುಂದೆ ಭೂ-ಆಘಾತ, ವಾಯು ಆಘಾತಗಳೂ ಕಾದಿವೆ, ಅಂದು ಗದಗನಲ್ಲಿ ಪ್ರಖ್ಯಾತ ಶ್ರೀಗಳು ಹೇಳಿದ ಭವಿಷ್ಯ ನಿಜವಾಗುತ್ತಾ ?..

ಅಗಸ್ಟ್ ಮೊದಲನೇ ವಾರದಲ್ಲಿ ಭೀಕರ ಪ್ರವಾಹ ಅರ್ಧ ರಾಜ್ಯವನ್ನು ನುಂಗಿ ನೀರು ಕುಡಿದಿತ್ತು. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ರಕ್ಕಸ ಮಳೆ ತನ್ನ ರೌದ್ರ ನರ್ತನವನ್ನೇ ತೋರಿತ್ತು.ಇದಾದ ಕೆಲವು ದಿನಗಳ ನಂತರ ಅಂದರೆ ಅಗಸ್ಟ್ ೧೨ ನೇ ತಾರೀಖಿನಂದು ಗದಗ‌ ನಗರದ ಭಕ್ತರೊಬ್ಬರ ನಿವಾಸಕ್ಕೆ ಆಗಮಿಸಿದ್ದ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಮಾಧ್ಯಮದವರ ಪ್ರವಾಹದ ಕುರಿತಾದ ಪ್ರಶ್ನೆಗೆ ಉತ್ತರಿಸಿ ರಾಜ್ಯದ ಜನ ತತ್ತರಿಸುವಂತೆ ಮಾಡಿ ಹೋಗಿದ್ದರು. ಅಂದು ಈ ಕುರಿತು ತಮ್ಮ ಕಾಲಜ್ಞಾನದ ಭವಿಷ್ಯವಾಣಿಯನ್ನು ಹೇಳಿ ಹೋಗಿದ್ದ ಶ್ರೀಗಳನ್ನ ಇಂದು ಉತ್ತರದ ಜನ ಮತ್ತೊಮ್ಮೆ ನೆನಪಿಸಿಕೊಳ್ಳುವಂತೆ ಆಗಿದೆ. ಯಾಕಂದ್ರೆ ಅಂದು ಅವರು ಹೇಳಿ ಹೋಗಿದ್ದ ಆ ಭವಿಷ್ಯವಾಣಿ ಸದ್ಯ ಆಗ್ತಿರೋ ವಿಪರೀತ ಮಳೆ ಹಾಗೂ ಜಲಪ್ರಳಯ ಎರೆಡನ್ನೂ ತಾಳೆ ಮಾಡುವಂತೆ ಮಾಡಿದೆ.ಇದರ ಫಲಿತಾಂಶ ಶ್ರೀಗಳ ಭಕ್ತ ವಲಯದಲ್ಲಿ ಆತಂಕ ಮೂಡಿಸಿದೆ. ಯಾಕಂದ್ರೆ ಸ್ವಾಮೀಜಿಗಳ ಭವಿಷ್ಯ ಆ ರೀತಿ ಇತ್ತು. ಅದೇನು ಅಂತ ಕೇಳೋದಾದ್ರೆ *ಈ ರಕ್ಕಸ ಮಳೆ ಹಾಗೂ ಪ್ರವಾಹದ ರೌದ್ರ‌ ನರ್ತನ ಇದೆಲ್ಲ ಇಷ್ಟಕ್ಕೆ ನಿಲ್ಲೋಲ್ಲ...ಇನ್ನೂ ಸಹ ಮುಂದುವರಿಯಲಿದೆ* ಅನ್ನೋ ಮುನ್ಸೂಚನೆ ಮೂಲಕ ತಮ್ಮ ಭವಿಷ್ಯವಾಣಿ ನೀಡಿ ಹೋಗಿದ್ರು ಅಂದು ಸ್ವಾಮಿಜಿ. ಆದರೆ ಆ ಭವಿಷ್ಯವಾಣಿ ಇದೀಗ ನಿಜವಾಯಿತಾ? ಅಥವಾ‌ ನಿಜವಾಗ್ತಿದೆಯಾ ಅನ್ನೋ ಕುತೂಹಲ ಮತ್ತು ಅನುಮಾನ ಜೊತೆಗೆ ಭಯ ಕೂಡ ಜನರಲ್ಲಿ ಹುಟ್ಟು‌ಹಾಕಿದೆ. ಯಾಕೆಂದರೆ ಕಳೆದ ಎರೆಡು ದಿನಗಳಿಂದ ವರುಣದೇವ ಆರ್ಭಟಿಸುತ್ತಿದ್ದಾನೆ.ಅದರಲ್ಲೂ ಸ್ವಾಮೀಜಿ ಹೇಳಿದ ಪ್ರಕಾರ ಮಹರಾಷ್ಟ್ರ,ಕೊಡಗು ಮತ್ತು ಉತ್ತರ ಕರ್ನಾಟಕದಲ್ಲಿ ಪ್ರವಾಹ ಆಗುತ್ತೇ ಅಂತ ಹೇಳಿದ್ರು.ಇದೀಗ ಅವರ ವಾಣಿಯಂತೆಯೇ ಎಲ್ಲವೂ ಆಗ್ತಾ ಇದೆಯಾ ಅನ್ನೋ ಅನುಮಾನ ಕಾಡ್ತಿದೆ. ಪರಿಣಾಮ ಮತ್ತೊಮ್ಮೆ ಪ್ರವಾಹ ಆರ್ಭಟ ಶುರುವಾಗಿದ್ದು ಉತ್ತರದ ಜನರಿಗೆ ಗಾಯದ ಮೇಲೆ ಬರೆ ಹಾಕಿದಂತೆ ಆಗಿದೆ.ಎಲ್ಲವನ್ನೂ ಕೊಚ್ಚಿಕೊಂಡು ಹೋಗೋ ಸೂಚನೆ ಕೊಡ್ತಿದ್ದಾನೆನೋ ಅನ್ನಿಸುತ್ತಿದೆ. ಈ ಹಿನ್ನಲೆ ಸ್ವಾಮಿಜಿ ಹೇಳಿದ್ದ ಭವಿಷ್ಯ ನಿಜವಾಯ್ತಾ? ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ.
ಅಂದು ಇಷ್ಟಕ್ಕೆ ಸುಮ್ಮನಿರದ ಸ್ವಾಮೀಜಿ ಮುಂದುವರೆದು ಮಾತನಾಡ್ತಾ "ಈಗಾಗಿರೋ ಅನಾಹುತ ಶ್ರಾವಣ‌ ಮುಗಿಯೋವರೆಗೂ‌ ಮುಂದುವರೆಯುತ್ತದೆ ಅಂತ ಭವಿಷ್ಯ ನುಡಿದಿದ್ದರು. ಕಾರ್ತಿಕ ಮಾಸದಲ್ಲಿ ಆಗಾಗ ಈ ಪ್ರವಾಹ ಬಂದು ಹೋಗುತ್ತದೆ ಅಂತ‌ ಎಚ್ಚರಿಕೆಯ ಜೊತೆಗೆ‌ ಅಚ್ಚರಿ ಸಂಗತಿಯನ್ನು ಸಹ ತಿಳಿಸಿ ಹೋಗಿದ್ದರು. ಅಲ್ಲದೇ ಸ್ವಾಮೀಜಿ ರಾಜ್ಯಕ್ಕಾಗೋ ಮುಂದಿನ ಗಂಡಾಂತರ ಬಗ್ಗೆಯೂ ಹೇಳಿ ಹೋಗಿದ್ದರು. ಅದೇನೆಂದರೆ ಇಷ್ಟಕ್ಕೆ ಈ ಅವಾಂತರಗಳು ನಿಲ್ಲುವುದಿಲ್ಲ.ಮುಂದೆ ಭೂ-ಆಘಾತ, ವಾಯು ಆಘಾತಗಳೂ ಕಾದಿವೆ.ದೊಡ್ಡ ದೊಡ್ಡ ನಗರಗಳಲ್ಲಿ ಕಟ್ಟಡಗಳು ಧರೆಗುರುಳುತ್ತವೆ. ಜಗತ್ತೆ ಕಂಡರಿಯದ ಆಘಾತ ಆಗುವ ಲಕ್ಷಣಗಳಿವೆ ಆದರೆ ಇದನ್ನು ಈಗ ಹೇಳುವದಿಲ್ಲ ಮುಂದೆ ಸಮಯ‌ ಬಂದಾಗ ಹೇಳುತ್ತೇನೆ ಅಂತ ಭವಿಷ್ಯ ನುಡಿಯೋ ಮೂಲಕ ಕರಾಳ ಸತ್ಯವನ್ನ ಬಿಚ್ಚಿಟ್ಟಿದ್ರು ಈ ಕೋಡಿಮಠದ ಸ್ವಾಮಿಜಿ. ತಾಳೆಗರಿಯ ಮೂಲಕ ಭವಿಷ್ಯ ನುಡಿಯುವಲ್ಲೇ ದೇಶಾದ್ಯಂತ ಹೆಸರುವಾಸಿಯಾಗಿರುವ ಕೋಡಿಮಠ ಇಂದಿಗೂ ಸಹ ಆ ಕಾಲಜ್ಞಾನದ ವಿಶಿಷ್ಟ ಪರಂಪರೆಯನ್ನು ಮುಂದುವರೆಸುತ್ತಾ‌ ಬಂದಿದೆ.ಹಾಗಾಗಿ ಶ್ರೀಗಳು ಹೇಳಿದ್ದ ಅದೆಷ್ಟೋ ಭವಿಷ್ಯಗಳು ನಿಜವಾಗಿದ್ದೇ ಹೆಚ್ಚು ಅಂತ ಭಕ್ತರ ನಂಬಿಕೆಯಾಗಿದೆ. ಹೀಗಾಗಿ ಗದಗನಲ್ಲೂ ಹೇಳಿದ್ದ ಭವಿಷ್ಯ ಇದೀಗ ನಿಜವಾಯ್ತಾ ಅಂತಾ ಜನರು ಯೋಚಿಸ್ತಿದಾರೆ. ಆದ್ದರಿಂದಲೇ ಅಂದು ಶ್ರೀಗಳು ಹೇಳಿರೋ ಭವಿಷ್ಯವನ್ನ ಇಂದು ನಾವೆಲ್ಲ ಮೆಲುಕು ಹಾಕೋ ಸಮಯ ಬಂದಿದೆ....Body:GConclusion:G
ETV Bharat Logo

Copyright © 2025 Ushodaya Enterprises Pvt. Ltd., All Rights Reserved.