ETV Bharat / state

ಸೂಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕ್ರಾಂತಿಕಾರಿ ಬದಲಾವಣೆ: ಖಾಸಗಿ ಶಾಲೆಗೆ ಗುಡ್ ಬೈ ಹೇಳಿದ ಮಕ್ಕಳು..! - ಸರ್ಕಾರಿ ಶಾಲೆಯಲ್ಲಿ ಕ್ರಾಂತಿಕಾರಿ ಬದಲಾವಣೆ

ಸರ್ಕಾರಿ ಶಾಲೆಯ ಶಿಕ್ಷಕರು, ಪ್ರತಿ ದಿನ ಮನೆ ಮನೆಗೆ ತೆರಳಿ, ಶಾಲಾ ದಾಖಲಾತಿ ಅಂದೋಲನಾ ಎಂಬ ಯೋಜನೆ ಮೂಲಕ, ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುವಂತೆ ಪೋಷಕರಿಗೆ ಮನವರಿಕೆ ಮಾಡ್ತಿದ್ದಾರೆ.

Revolutionary change in government school in gadag
ಸೂಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕ್ರಾಂತಿಕಾರಿ ಬದಲಾವಣೆ
author img

By

Published : Jun 15, 2020, 4:53 PM IST

ಗದಗ: ಜಿಲ್ಲೆಯ ರೋಣ ತಾಲೂಕಿನ ಸೂಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹೊಸದೊಂದು ಕ್ರಾಂತಿಕಾರಿ ಬದಲಾವಣೆ ಶುರುವಾಗಿದೆ. ಇಲ್ಲಿನ ಶಿಕ್ಷಕರು ಹೊಸ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದ್ದು, ಖಾಸಗಿ ಶಾಲೆಗಳತ್ತ ಆ ಊರಿನ ಮಕ್ಕಳು ತಿರುಗಿಯೂ ನೋಡದಂತೆ ಶಾಲೆ ಬೆಳೆದಿದೆ. ಯಾವ ಖಾಸಗಿ ಶಾಲೆಗೆ ಸೇರಿದ ಮಕ್ಕಳು ಈ ಶಾಲೆಯಲ್ಲಿಯೇ ಓದಬೇಕು ಎಂದು ಆಸೆ ಪಡಬೇಕು ಎನ್ನುವ ವಾತವಾರಣ ನಿರ್ಮಾಣವಾಗಿದೆ.

ಇಲ್ಲಿನ ಆದರ್ಶ ಶಿಕ್ಷಕರಿಂದ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆಯಲ್ಲಿ ಏರಿಕೆಯಾಗ್ತಿದೆ. ಶಾಲೆಯ ಮುಖ್ಯೋಪಾಧ್ಯಾಯ ಎಸ್.ಎಸ್. ಅಮರಗಟ್ಟಿ ನೇತೃತ್ವದಲ್ಲಿ 8 ಜನ ಶಿಕ್ಷಕರು ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದಾರೆ. ಪ್ರತಿ ದಿನ ಗ್ರಾಮದ ಮನೆ ಮನೆಗೆ ತೆರಳಿ, ಪೋಷಕರಿಗೆ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುವಂತೆ, ಶಾಲಾ ದಾಖಲಾತಿ ಅಂದೋಲನಾ ಎಂಬ ಯೋಜನೆ ಮೂಲಕ ಮನವರಿಕೆ ಮಾಡ್ತಿದ್ದಾರೆ.

ಸೂಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕ್ರಾಂತಿಕಾರಿ ಬದಲಾವಣೆ

ಶಾಲೆಯಲ್ಲಿರುವ ಶಿಕ್ಷಣದ ಗುಣಮಟ್ಟ, ಪ್ರಾಯೋಗಿಕ ಕಲಿಕೆ ಸೇರಿದಂತೆ ಬೋಧನೆ ಪದ್ದತಿಯ ರೀತಿ ನೀತಿಗಳನ್ನು ಅವರಿಗೆ ಪರಿಣಾಮಕಾರಿಯಾಗಿ ಮನದಟ್ಟು ಮಾಡ್ತಿದ್ದಾರೆ. ಜೊತೆಗೆ ಸರ್ಕಾರದ ಯೋಜನೆಗಳಾದ ಕ್ಷೀರ ಭಾಗ್ಯ, ಅನ್ನಭಾಗ್ಯ, ಸ್ಕಾಲರ್​​​ಶಿಪ್ ಸೇರಿದಂತೆ ಸರ್ಕಾರದಿಂದ ಸಿಗುವ ಮೂಲ ಸೌಕರ್ಯ, ಕಲಿಕಾ ಸೌಲಭ್ಯಗಳ ಕುರಿತು ಸಂಪೂರ್ಣವಾದ ಮಾಹಿತಿ ನೀಡ್ತಾರೆ.

ಖಾಸಗಿ ಶಾಲೆ ಹಾಗೂ ಸರ್ಕಾರಿ ಶಾಲೆಗಳ ವ್ಯತ್ಯಾಸ ಸಹ ಪೋಷಕರಿಗೆ ತಿಳಿ ಹೇಳ್ತಾರೆ. ಹಾಗಾಗಿ ಖಾಸಗಿ ಶಾಲೆಗೆ ಹೋಗುವ ಮಕ್ಕಳನ್ನು ಸಹ ಸರ್ಕಾರಿ ಶಾಲೆಗಳಿಗೆ ಬರುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ.

ಖಾಸಗಿ ಶಾಲೆಗಳಿಗೆ ಹೋಗುತ್ತಿದ್ದ ಸುಮಾರು 32 ವಿದ್ಯಾರ್ಥಿಗಳನ್ನು, ಹೊಸದಾಗಿ ತಮ್ಮ ಸರ್ಕಾರಿ ಶಾಲೆಗೆ ಸೇರಿಸಿಕೊಂಡಿದ್ದಾರೆ. ಒಂದೇ ವರ್ಷದಲ್ಲಿ ಸುಮಾರು 80ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಹೊಸದಾಗಿ ಸೇರಿಸಿಕೊಂಡು, ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆ ಮೇಲು ಎಂದು ಬಿಂಬಿಸಲು ಹೊರಟಿದ್ದಾರೆ.

ಸೂಡಿ, ರೋಣ, ಗಜೇಂದ್ರಗಡ ಪಟ್ಟಣಕ್ಕೆ ಈ ಗ್ರಾಮ ಸೇರಿದಂತೆ ಪಕ್ಕದ ಕೆಲವು ಹಳ್ಳಿಗಳ ಮಕ್ಕಳೂ ಸಹ ಕಾನ್ವೆಂಟ್ ಶಾಲೆಗಳಿಗೆ ತೆರಳುತ್ತಿದ್ದರು. ಆದರೆ ಈಗ ಶಿಕ್ಷಕರ ಪ್ರಾಮಾಣಿಕ ಬೋಧನೆ, ಇವರ ಆದರ್ಶಗಳು, ಕೆಲಸಗಳು ಮಕ್ಕಳನ್ನು ಆಕರ್ಷಿಸುತ್ತಿವೆ. ಪ್ರತಿ ವರ್ಷ ಈ ಶಾಲೆಯ ಮಕ್ಕಳ ಸಂಖ್ಯೆಯಲ್ಲಿ ಏರಿಕೆಯಾಗ್ತಿದೆ. ಸೂಡಿ ಗ್ರಾಮದಲ್ಲಿಯೇ ಸುಮಾರು 6 ಖಾಸಗಿ ಶಾಲೆಗಳಿವೆ.

ಆದರೆ ಈ ಸರ್ಕಾರಿ ಶಾಲೆಯಿಂದ ಕೆಲವು ಶಾಲೆಗಳಿಗೆ ಬಾಗಿಲು ಹಾಕಿಕೊಳ್ಳುವ ಪರಿಸ್ಥಿತಿ ಬಂದಿದೆ. ಈ ಸರ್ಕಾರಿ ಬಾಲಕರ ಶಾಲೆ 1871 ರಿಂದ ಆರಂಭವಾಗಿದ್ದು, ಇಲ್ಲಿ ವ್ಯಾಸಂಗ ಮಾಡಿದವರು ಬಹಳಷ್ಟು ವಿದ್ಯಾರ್ಥಿಗಳು ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದಾರೆ. ಇಲ್ಲಿ 1 ನೇ ತರಗತಿಯಿಂದ 7 ನೇ ತರಗತಿಯವರಿಗೆ ಶಿಕ್ಷಣ ನೀಡಲಾಗುತ್ತಿದ್ದು, 211 ಹಾಜರಾತಿಯಿದೆ. ಈ ಭಾರಿ 250 ರವರಿಗೆ ಹೆಚ್ಚಿಗೆ ಮಾಡುವ ಗುರಿಯನ್ನು ಶಿಕ್ಷಕರು ಹೊಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.