ಗದಗ : ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್‌ನ ಶ್ರೀ ಅಣ್ಣದಾನೇಶ್ವರ ಪಿಯು ಕಾಲೇಜಿನ ವಿದ್ಯಾರ್ಥಿ ಶಿವರಾಜ್ ಎಂಬಾತ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 600ಕ್ಕೆ 593 ಅಂಕಗಳನ್ನು ಗಳಿಸಿ ರಾಜ್ಯಕ್ಕೆ 2ನೇ ಸ್ಥಾನ ಪಡೆದಿದ್ದಾನೆ. ಮೂಲತ: ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಚಿನ್ನದಗಣಿ ಬಳಿಯ ಯಲಗಟ್ಟ ಗ್ರಾಮದ ನಿವಾಸಿಯಾಗಿರೋ ಶಿವರಾಜ್ ಕಷ್ಟಪಟ್ಟು ಓದಿ ಈ ಸಾಧನೆ ಮಾಡಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವರಾಜ್, ನನ್ನ ತಂದೆ-ತಾಯಿ ಕೂಲಿ ಕೆಲಸ ಮಾಡಿಕೊಂಡು ನನ್ನ ವಿದ್ಯಾಭ್ಯಾಸ ನೋಡಿಕೊಂಡಿದ್ದಾರೆ. ನನ್ನ ಸಾಧನೆ, ಶ್ರೇಯಸ್ಸು ನನ್ನ ತಂದೆ-ತಾಯಿಗೆ ಸಲ್ಲಬೇಕು. ಜೊತೆಗೆ ಕಾಲೇಜಿನ ಶಿಕ್ಷಕರು ನನಗೆ ಬಹಳಷ್ಟು ಬೆಂಬಲ ನೀಡಿದ್ದಾರೆ. ಇವರೆಲ್ಲರ ಕಾರಣದಿಂದ ನನಗೆ ದ್ವಿತೀಯ ಸ್ಥಾನ ಲಭಿಸಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿಯೂ ಶೇ.96ರಷ್ಟು ಅಂಕ ಪಡೆದು ಶಿವರಾಜ್ ಸಾಧನೆ ಮಾಡಿದ್ದರು. ಇಂದು ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸದ್ಯ ವಿದ್ಯಾರ್ಥಿ ಶಿವರಾಜ್ ಮುಂದಿನ ಶಿಕ್ಷಣದ ವೆಚ್ಚಕ್ಕಾಗಿ ತುಮಕೂರಿನಲ್ಲಿ ಗಾರೆ ಕೆಲಸದಲ್ಲಿ ತೊಡಗಿದ್ದಾರೆ.
ಓದಿ :2nd PUC results-2022.. ವಾಣಿಜ್ಯ ವಿಭಾಗದಲ್ಲಿ ಮಾನವ್ ವಿಜಯ್, ನೇಹಾ ಟಾಪರ್ಸ್