ETV Bharat / state

ಕಳೆದುಕೊಂಡಿದ್ದ ಚಿನ್ನಾಭರಣ ವಾಪಸ್​ ನೀಡಿ ಜನರಿಗೆ ದೀಪಾವಳಿ ಗಿಫ್ಟ್ ನೀಡಿದ ಗದಗ ಪೊಲೀಸರು - gadag police

ಗದಗದಲ್ಲಿ ಪೊಲೀಸ್​ ಇಲಾಖೆ ಪ್ರಾಪರ್ಟಿ ಪರೇಡ್​ ನಡೆಸಿ ಚಿನ್ನಾಭರಣ ಸೇರಿದಂತೆ ಇತರೆ ವಸ್ತುಗಳನ್ನು ಕಳೆದುಕೊಂಡಿದ್ದ ಮಾಲೀಕರಿಗೆ ಅವುಗಳನ್ನು ಮರಳಿ ನೀಡಿದೆ.

property parade in gadag police station
ಕಳೆದುಕೊಂಡಿದ್ದ ಚಿನ್ನಾಭರಣ ವಾಪಸ್​
author img

By

Published : Nov 1, 2021, 10:50 PM IST

ಗದಗ: ಮನೆಗಳಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ ಮಾಡಿದ್ದ ಕಳ್ಳರನ್ನು ಬೇಟೆಯಾಡಿ ಚಿನ್ನಾಭರಣ, ನಗದು ಜಪ್ತಿ ಮಾಡಿದ ಪೊಲೀಸರು 'ಪ್ರಾಪರ್ಟಿ ಪರೇಡ್'​​ನಲ್ಲಿ ಚಿನ್ನಾಭರಣ ಮಾಲೀಕರಿಗೆ ಹಸ್ತಾಂತರ ಮಾಡಿದ್ದಾರೆ.

ಗದಗದಲ್ಲಿ ಪ್ರಾಪರ್ಟಿ ಪರೇಡ್

ಗದಗ ನಗರದ ಸಂಭಾಪೂರ ರಸ್ತೆಯ ಪೊಲೀಸ್ ಸಭಾಭವನದಲ್ಲಿ ಪ್ರಾಪರ್ಟಿ ಪರೇಡ್‌ನಲ್ಲಿ ಮಾಲೀಕರಿಗೆ ಚಿನ್ನಾಭರಣ ನೀಡಲಾಗಿದೆ. ಗದಗ ಜಿಲ್ಲೆಯಲ್ಲಿ ಆರು ತಿಂಗಳಲ್ಲಿ 77 ಕಳ್ಳತನ, ಮೋಸ ಪ್ರಕರಣಗಳು ಪೊಲೀಸರು ಪತ್ತೆ ಹಚ್ಚಿದ್ದಾರೆ. 89 ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಒಟ್ಟು ಮೊತ್ತ 81 ಲಕ್ಷ 27 ಸಾವಿರ 590 ರೂಪಾಯಿ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಲಾಗಿತ್ತು. ಜಿಲ್ಲೆಯ ಪೊಲೀಸರು ಪ್ರಕರಣಗಳನ್ನು ಪತ್ತೆ ಹಚ್ಚಿ ಒಟ್ಟು 64 ಲಕ್ಷ 55 ಸಾವಿರ 99 ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು, ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಚಿನ್ನಾಭರಣ ಕಳ್ಳತನವಾಗಿದ್ದರಿಂದ ಜನರು ಈಗ ದೀಪಾವಳಿ ಹಬ್ಬ ಬಂತು ಚಿನ್ನವಿಲ್ಲದೇ ಹಬ್ಬ ಮಾಡೋದು ಹೇಗೆ ಎಂದು ಗೋಳಾಡುತ್ತಿದ್ರು. ಈ ಜನರಿಗೆ ಇವತ್ತು ಗದಗ ಜಿಲ್ಲಾ ಪೊಲೀಸರು ಅವರು ಕಳೆದುಕೊಂಡಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ನೀಡುವ ಮೂಲಕ ದೀಪಾವಳಿ ಹಬ್ಬದ ಉಡುಗೂರೆ ನೀಡಿದ್ದಾರೆ.

ಗದಗ-ಬೆಟಗೇರಿ ಅವಳಿ ನಗರ, ಶಿರಹಟ್ಟಿ, ರೋಣ, ನರಗುಂದ, ಮುಂಡರಗಿ ಸೇರಿ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ನಡೆದ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು ಚಿನ್ನಾಭರಣ, ನಗದು ಬೈಕ್​ ಕಳೆದುಕೊಂಡ ಜನರಿಗೆ ಇವತ್ತು ಅವರ ವಸ್ತುಗಳನ್ನು ಮರಳಿ ನೀಡಿದ್ದಾರೆ. ಕಳ್ಳತನವಾಗಿದ್ದ ಚಿನ್ನಾಭರಣ ವಸ್ತುಗಳೆಲ್ಲವನ್ನೂ ಮರಳಿ ದೊರಕಿಸಿಕೊಟ್ಟಿದ್ದಕ್ಕೆ ಪೊಲೀಸರಿಗೆ ಜನರು ಧನ್ಯವಾದ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.