ETV Bharat / state

ಗದಗಿನಲ್ಲಿ ಪೆಟ್ರೋಲ್ ಬಂಕ್‌ಗಳು ಸಂಪೂರ್ಣ ಬಂದ್.. ಆ್ಯಂಬುಲೆನ್ಸ್​ಗಳಿಗೂ ಇಲ್ಲ ಇಂಧನ.. - petrol bunk close news in gadag

ಜಿಲ್ಲಾಡಳಿತದ ಆದೇಶದ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ನಗರದಲ್ಲಿ ಎಲ್ಲಾ ಪೆಟ್ರೋಲ್ ಬಂಕ್​ಗಳನ್ನ ಸಂಪೂರ್ಣ ಬಂದ್ ಮಾಡಲಾಗಿದೆ.

petrol bunk band
ಪೆಟ್ರೋಲ್ ಬಂಕ್
author img

By

Published : Apr 8, 2020, 12:28 PM IST

ಗದಗ: ನಗರದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣದಿಂದಾಗಿ ಜಿಲ್ಲಾಡಳಿತ ‌ಕಟ್ಟುನಿಟ್ಟಿನ ಕ್ರಮ‌ ಕೈಗೊಂಡಿದೆ. ನಗರದಲ್ಲಿ ಬೇಕಾಬಿಟ್ಟಿಯಾಗಿ ಓಡಾಡುವ ವಾಹನಗಳಿಗೆ ಕಡಿವಾಣ ಹಾಕಲು ಪೆಟ್ರೋಲ್ ಬಂಕ್​ಗಳನ್ನು ಬಂದ್​​ ಮಾಡಲಾಗಿದೆ.

ಜಿಲ್ಲಾಡಳಿತದ ಆದೇಶದ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ನಗರದಲ್ಲಿ ಎಲ್ಲಾ ಪೆಟ್ರೋಲ್ ಬಂಕ್​ಗಳನ್ನ ಸಂಪೂರ್ಣ ಬಂದ್ ಮಾಡಲಾಗಿದೆ. ಇದರಿಂದಾಗಿ ಕೆಲ ಅಗತ್ಯ ಸೇವೆಗಳಾದ ಆ್ಯಂಬುಲೆನ್ಸ್‌ಗಳಿಗೂ ಡೀಸೆಲ್‌ ಅಲಭ್ಯವಾಗಿದೆ. ಜೊತೆಗೆ ಕೆಲ ಆರೋಗ್ಯ ಸೇವೆಗಳಿಗೆ ಹೋಗುವ ಸಿಬ್ಬಂದಿಗೂ ಪೆಟ್ರೋಲ್ ಸಿಗುತ್ತಿಲ್ಲ.

petrol bunk band
ಪೆಟ್ರೋಲ್ ಬಂಕ್

ಅಗತ್ಯ ಸೇವೆಗಳಿಗೆ ಸಮಸ್ಯೆ ಇಲ್ಲ ಎಂದು ಜಿಲ್ಲಾಧಿಕಾರಿಯವರು ಹೇಳಿದ್ದರು. ಜಿಲ್ಲಾಡಳಿತ ಸೂಚಿಸಿದರೆ ಅಗತ್ಯ ಸೇವೆಗಳ ವಾಹನಗಳಿಗೂ ಪೆಟ್ರೋಲ್ ಹಾಕಲಾಗುತ್ತೆ ಎನ್ನುತ್ತಾರೆ ಬಂಕ್ ಮಾಲೀಕರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.