ETV Bharat / state

ಗದಗನಲ್ಲಿ ನಕಲಿ ಬಾಬಾನಿಗೆ ಹಿಗ್ಗಾಮುಗ್ಗಾ ಗೂಸಾ.. ತಪ್ಪಾಯ್ತು ಬಿಟ್ಬಿಡಿ ಅಂತಾ ಕೈಮುಗಿದ ಚಾಲಾಕಿ

ಡೋಂಗಿತನದ ಪವಾಡಗಳನ್ನು ಮಾಡಿ ಜನರನ್ನು ನಂಬಿಸಿ ಹಣ ವಸೂಲಿ ಮಾಡ್ತಿದ್ದ ನಕಲಿ ಬಾಬಾನನ್ನು ಗದಗದಲ್ಲಿ ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

gadag
ನಕಲಿ ಬಾಬಾ
author img

By

Published : Jul 12, 2021, 12:09 PM IST

ಗದಗ: ನಕಲಿ ಬಾಬಾನೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಗದಗ ನಗರದ ಗಂಗಿಮಡಿ ಆಶ್ರಯ ಕಾಲೋನಿಯಲ್ಲಿ ನಡೆದಿದೆ. ಡೋಂಗಿ ಬಾಬಾ ಆಸೀಫ್ ಜಾಗಿರದಾರ ಎಂಬಾತನಿಗೆ ಜನ ಮನಬಂದಂತೆ ಥಳಿಸಿದ್ದಾರೆ.

ಗದಗದಲ್ಲಿ ನಕಲಿ ಬಾಬಾನಿಗೆ ಥಳಿತ

ಈ ಡೋಂಗಿ ಬಾಬಾ ಮೂಲತಃ ಬಾಗಲಕೋಟೆ ಜಿಲ್ಲೆಯವನಾಗಿದ್ದಾನೆ. ಗದಗ ನಗರದ ಗಂಗಿಮಡಿಯಲ್ಲಿನ ತನ್ನ ಹೆಂಡತಿ ತವರು ಮನೆಯಲ್ಲಿಯೇ ವಾಸವಾಗಿದ್ದಾನೆ. ಇಲ್ಲಿಯೇ ಹಲವು ವರ್ಷಗಳಿಂದ ಡೋಂಗಿತನದ ಪವಾಡಗಳನ್ನು ಮಾಡಿ ಜನರಿಗೆ ನಂಬಿಸಿದ್ದ ಎನ್ನಲಾಗ್ತಿದೆ.

ಕುದಿಯೋ ಎಣ್ಣೆ ಹಾಗೂ ಸುಡು ಸುಡು ತುಪ್ಪದಲ್ಲಿ ಕೈ ಹಾಕುತ್ತಿದ್ದ ಈ ಡೋಂಗಿ ಬಾಬಾ. ಏಕಾಏಕಿ ಮೈಮೇಲೆ ದೇವರ ಬಂದಂತೆ ನಟಿಸಿ ಜನರನ್ನ ನಂಬಿಸಿ ನಿಂಬೆಹಣ್ಣು, ಬೂದಿ ಕೊಟ್ಟು ಜನರಿಗೆ ಮೋಸ ಮಾಡುತ್ತಿದ್ದ ಅಂತ ಜನರು ಆರೋಪಿಸಿದ್ದಾರೆ.

gadag
ನಕಲಿ ಬಾಬಾ

ಹೀಗಾಗಿ ಈ ಡೋಂಗಿ ಬಾಬಾ ನಂಬಿ ಮೋಸ ಹೋದ ಜನರು ಇವತ್ತು ರೊಚ್ಚಿಗೆದ್ದು, ಅವನ ವಿರುದ್ಧ ತಿರುಗಿ ಬಿದ್ದಿದ್ದಾರೆ. ಜನರಿಗೆ ಮಂಕುಬೂದಿ ಎರಚಿ ಸಾವಿರಾರು ರೂ. ಹಣ ಲೂಟಿ ಮಾಡುತ್ತಿದ್ದ ಎಂದು ಆರೋಪಿಸಿದ್ದಾರೆ. ಇಂದು ಡೋಂಗಿ ಬಾಬಾನ ಅಸಲಿ ಮುಖವಾಡ ಗೊತ್ತಾಗುತ್ತಿದ್ದಂತೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ನಾನು ಮಾಡಿದ್ದು ಮೋಸ.. ತಪ್ಪಾಗಿದೆ ಕ್ಷಮಿಸಿ ಅಂತಾ ಬೇಡಿಕೊಂಡ್ರೂ ಧರ್ಮದೇಟು ಕೊಟ್ಟ ಜನರು ಗದಗ ಗ್ರಾಮೀಣ ಠಾಣೆಯ ಪೊಲೀಸರಿಗೆ ಆತನನ್ನ ಒಪ್ಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.